ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿ ಡೇ-ನೈಟ್ ಟೆಸ್ಟ್‌ ಆಡಲಿದೆ ವಿರಾಟ್ ಕೊಹ್ಲಿ ಪಡೆ

Virat Kohli and team to play Day-Night Test at Adelaide

ನವದೆಹಲಿ, ಮೇ 27: ಈ ವರ್ಷದ ಅಂತ್ಯಕ್ಕೆ ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಡೇ-ನೈಟ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಉಲ್ಲೇಖಿಸಿದ್ದಾರೆ. ಕೊಹ್ಲಿ ಪಡೆ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಡಿಸೆಂಬರ್‌ನಲ್ಲಿ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಆಡುವ ನಿರೀಕ್ಷೆಯಿದೆ.

ಗಂಭೀರ ಗಾಯ, WWE ಸ್ಟಾರ್ ರೇ ಮಿಸ್ಟೀರಿಯೋ ಮುಂದಿನ ವಾರ ನಿವೃತ್ತಿ!ಗಂಭೀರ ಗಾಯ, WWE ಸ್ಟಾರ್ ರೇ ಮಿಸ್ಟೀರಿಯೋ ಮುಂದಿನ ವಾರ ನಿವೃತ್ತಿ!

ಭಾರತ ತಂಡ ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಚೊಚ್ಚಲ ಬಾರಿಗೆ ಡೇ-ನೈಟ್ ಟೆಸ್ಟ್‌ನಲ್ಲಿ ಆಡಿತ್ತು. ಅದಾಗಿ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಡೇ ನೈಟ್‌ ಟೆಸ್ಟ್ ಪಂದ್ಯವೇ ಭಾರತದ ಪಾಲಿಗೆ ಮೊದಲ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯವಾಗಲಿದೆ.

ನೀವು ಇಂದಿಗೂ ನಿಜವೆಂದು ನಂಬಿರುವ ಕ್ರಿಕೆಟ್ ಲೋಕದ 3 ಅತಿ ದೊಡ್ಡ ಸುಳ್ಳುಗಳುನೀವು ಇಂದಿಗೂ ನಿಜವೆಂದು ನಂಬಿರುವ ಕ್ರಿಕೆಟ್ ಲೋಕದ 3 ಅತಿ ದೊಡ್ಡ ಸುಳ್ಳುಗಳು

ಆಸ್ಟ್ರೇಲಿಯಾ ಪ್ರವಾಸ ಸರಣಿಯ ಪಂದ್ಯಗಳು, ಬ್ರಿಸ್ಬೇನ್‌ನ ಗಬ್ಬಾದಲ್ಲಿನ ಮೊದಲ ಟೆಸ್ಟ್ ಪಂದ್ಯದೊಂದಿಗೆ ಆರಂಭಗೊಳ್ಳಲಿದೆ. 2018-19ರ ಸೀಸನ್‌ನಲ್ಲಿ ಯಶಸ್ವಿ ಪ್ರವಾಸ ಮುಗಿಸಿದ್ದ ಭಾರತ ಗಬ್ಬಾ ಸ್ಟೇಡಿಯಂನಲ್ಲಿ ಆಡಿರಲಿಲ್ಲ. ಕಳೆದ ವರ್ಷ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಂಡಿದ್ದಾಗ ಆಸೀಸ್ ತಂಡದಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಇರಲಿಲ್ಲ, ಆಗ ಇಬ್ಬರೂ ಬಲಿಷ್ಠ ಆಟಗಾರರು ನಿಷೇಧಕ್ಕೀಡಾಗಿದ್ದರು.

ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ಗೆ ಆತಂಕ ವ್ಯಕ್ತಪಡಿಸಿದ ಇಯಾನ್ ಬಿಷಪ್ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ಗೆ ಆತಂಕ ವ್ಯಕ್ತಪಡಿಸಿದ ಇಯಾನ್ ಬಿಷಪ್

ಕಳೆದ ವರ್ಷ ಆಸ್ಟ್ರೇಲಿಯಾ ಭೇಟಿಯ ವೇಳೆ ವಿರಾಟ್ ಕೊಹ್ಲಿ ಪಡೆ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದರೊಂದಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಗೆದ್ದ ಏಷ್ಯಾದ ಮೊದಲ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿತ್ತು. ಈ ವಾರದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಪ್ರವಾಸ ಸರಣಿಗೆ ಸಂಬಂಧಿಸಿ ಔಪಚಾರಿಕ ಬೇಸಿಗೆ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

Story first published: Wednesday, May 27, 2020, 19:31 [IST]
Other articles published on May 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X