ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ವಾತಂತ್ರ್ಯ ದಿನದಂದೇ ಪಾಂಟಿಂಗ್ ಹಿಂದಿಕ್ಕಿ ಇತಿಹಾಸ ಬರೆದ ವಿರಾಟ್ ಕೊಹ್ಲಿ!

Virat Kohli beats Ponting by big margin to achieve historical first

ಪೋರ್ಟ್ ಆಫ್‌ ಸ್ಪೇನ್, ಆಗಸ್ಟ್ 15: 73ನೇ ಸ್ವಾತಂತ್ರ್ಯೋತ್ಸವ ದಿನದಂದೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್‌ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ದಶಕದಲ್ಲಿ 20,000+ ರನ್ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗನಾಗಿ ಕಿಂಗ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಯೂನಿವರ್ಸ್‌ ಬಾಸ್‌!ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಯೂನಿವರ್ಸ್‌ ಬಾಸ್‌!

ಟ್ರಿನಿಡಾಡ್‌ನ ಪೋರ್ಟ್ ಆಫ್‌ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಬುಧವಾರ (ಆಗಸ್ಟ್ 14) ನಡೆದ ಭಾರತ vs ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 99 ಎಸೆತಗಳಿಗೆ 114 ರನ್ ಚಚ್ಚಿದರು (ಕೊಹ್ಲಿ ಇನ್ನಿಂಗ್ಸ್‌ ಆಡಿದ್ದು ಆಗಸ್ಟ್ 15ರ ಗುರುವಾರ). ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಜಯ (ಡಕ್ವರ್ಥ್ ಲೂಯೀಸ್ ನಿಯಮದ ಪ್ರಕಾರ) ಸಾಧಿಸಿತಲ್ಲದೆ, ಏಕದಿನ ಸರಣಿಯನ್ನು 2-0ಯಿಂದ ಗೆದ್ದುಕೊಂಡಿದೆ.

ದುಲೀಪ್ ಟ್ರೋಫಿ 2019: ಸಂಪೂರ್ಣ ವೇಳಾಪಟ್ಟಿ, ತಂಡಗಳ ಮಾಹಿತಿದುಲೀಪ್ ಟ್ರೋಫಿ 2019: ಸಂಪೂರ್ಣ ವೇಳಾಪಟ್ಟಿ, ತಂಡಗಳ ಮಾಹಿತಿ

ಈ ಪಂದ್ಯದಲ್ಲಿ ಶತಕ ಬಾರಿಸಿರುವ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ದಂತಕತೆ, ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ವಿಶ್ವದ ಮೊದಲ ಆಟಗಾರ

ವಿಶ್ವದ ಮೊದಲ ಆಟಗಾರ

ದಶಕ ಅಂದರೆ 10 ವರ್ಷಗಳ ಅವಧಿಯಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗಳೂ ಸೇರಿ ಅತ್ಯಧಿಕ ರನ್ ಬಾರಿಸಿದ ವಿಶ್ವದ ಮೊದಲ ಆಟಗಾರನಾಗಿ ಕೊಹ್ಲಿ ಇತಿಹಾಸ ನಿರ್ಮಿಸಿದ್ದಾರೆ. ಎಲ್ಲಾ ಮಾದರಿಗಳೂ ಸೇರಿ ಕೊಹ್ಲಿ ಒಟ್ಟು 20,502 ರನ್ ಬಾರಿಸಿದ್ದಾರೆ. ಇದರಲ್ಲಿ 20,018 ರನ್‌ಗಳು ಈ ಹತ್ತು ವರ್ಷಗಳಿಂದೀಚೆ ಗಳಿಸಿದವು.

ಪಾಟಿಂಗ್ ದಾಖಲೆ ಬದಿಗೆ

ಪಾಟಿಂಗ್ ದಾಖಲೆ ಬದಿಗೆ

ದಶತದ ಅವಧಿಯಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆ ಈ ಮೊದಲು ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು. ಪಾಂಟಿಂಗ್ 2000ರಲ್ಲಿ 18,962 ರನ್ ಬಾರಿಸಿ ಈ ದಾಖಲೆ ಬರೆದಿದ್ದರು. ಈಗ ಕೊಹ್ಲಿ ದಶಕದ ಅವಧಿಯಲ್ಲಿ 20,000+ ರನ್ ಬಾರಿಸಿರುವುದರಿಂದ ಪಾಟಿಂಗ್ ದಾಖಲೆ ಧೂಳೀಪಟವಾಗಿದೆ.

ಕ್ಯಾಲಿಸ್‌ಗೆ 3ನೇ ಸ್ಥಾನ

ಕ್ಯಾಲಿಸ್‌ಗೆ 3ನೇ ಸ್ಥಾನ

10 ವರ್ಷಗಳ ಅವಧಿಯಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವ ದಾಖಲೆಯ ಯಾದಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ಜಾಕ್‌ ಕ್ಯಾಲಿಸ್ 3ನೇ (16,777 ರನ್-2000ರಲ್ಲಿ), ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ 4ನೇ (16,304 ರನ್), ಕುಮಾರ ಸಂಗಕ್ಕಾರ 5ನೇ (15,999 ರನ್), ಸಚಿನ್ ತೆಂಡೂಲ್ಕರ್ 6ನೇ (15,962 ರನ್) ಸ್ಥಾನ ಪಡೆದುಕೊಂಡಿದ್ದಾರೆ.

ಕೊಹ್ಲಿ 43ನೇ ಏಕದಿನ ಶತಕ

ಕೊಹ್ಲಿ 43ನೇ ಏಕದಿನ ಶತಕ

ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 114 ರನ್ ಮೂಲಕ 43ನೇ ಏಕದಿನ ಶತಕ ಬಾರಿಸಿದಂತಾಗಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (35 ಓವರ್‌ಗೆ ಪಂದ್ಯವನ್ನು ಮೊಟಕು ಗೊಳಿಸಿದ್ದರಿಂದ) 35 ಓವರ್‌ಗೆ 7 ವಿಕೆಟ್ ಕಳೆದು 240 ರನ್ ಬಾರಿಸಿತ್ತು. ಭಾರತ 32.3ನೇ ಓವರ್‌ಗೆ 4 ವಿಕೆಟ್ ಕಳೆದು 256 ರನ್ ಮಾಡಿತು. ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಎರಡೂ ಪ್ರಶಸ್ತಿಗಳು ವಿರಾಟ್ ಕೊಹ್ಲಿ ಪಡೆದುಕೊಂಡರು.

Story first published: Thursday, August 15, 2019, 13:45 [IST]
Other articles published on Aug 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X