ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆಂಗಳೂರು ಯೋಧರನ್ನು ಖರೀದಿಸಿದ ವಿರಾಟ್ ಕೊಹ್ಲಿ

By Mahesh

ಬೆಂಗಳೂರು, ಡಿ. 11: ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಕುಸ್ತಿ ಅಂಕಣಕ್ಕೆ ಇಳಿದಿದ್ದಾರೆ. ಪ್ರೊ ಕುಸ್ತಿ ಲೀಗ್‌ನಲ್ಲಿ (ಪಿಡಬ್ಲುಎಲ್) ಬೆಂಗಳೂರು ಯೋಧಾಸ್ ಫ್ರಾಂಚೈಸಿಯ ಸಹ ಮಾಲಕರಾಗಿದ್ದಾರೆ.ವಿಶ್ವದ ಅತ್ಯಂತ ಶ್ರೀಮಂತ ಫ್ರೀಸ್ಟೈಲ್ ಕುಸ್ತಿ ಟೂರ್ನಿಯಲ್ಲಿ ಕೊಹ್ಲಿ ಅಲ್ಲದೆ ಕ್ರಿಕೆಟರ್ ರೋಹಿತ್ ಶರ್ಮ ಕೂಡಾ ತಂಡವೊಂದರ ಒಡೆತನ ಪಡೆದುಕೊಂಡಿದ್ದಾರೆ.

ಕೊಹ್ಲಿ ಸಹ ಮಾಲಕತ್ವದ ಬೆಂಗಳೂರು ಯೋಧಾಸ್ ತಂಡ ಶುಕ್ರವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ತಂಡವನ್ನು ರಾತ್ರಿ 7 ಗಂಟೆಗೆ ಎದುರಿಸಲಿದೆ. [ಪ್ರೊ ಕುಸ್ತಿ ಲೀಗ್ : ಬೆಂಗಳೂರು ಯೋಧರನ್ನು ಸ್ವಾಗತಿಸಿ]

ಪ್ರೊ ಕುಸ್ತಿ ಲೀಗ್ ಹಾಗೂ ಬೆಂಗಳೂರು ಯೋಧಾಸ್ ಹೆಸರನ್ನು ಕೇಳಿ ನನಗೆ ರೋಮಾಂಚನವಾಯಿತು. ಬೆಂಗಳೂರು ಫ್ರಾಂಚೈಸಿಯ ಸಹಮಾಲಕನಾಗುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಯೋಧಾಸ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನನಗಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.[ವಿಡಿಯೋ: ಇದೇನು ಕ್ರಿಕೆಟ್ ಆಟವೋ, ಕುಸ್ತಿ ಪಂದ್ಯವೋ!]

Virat Kohli becomes co-owner of PWL team

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ (74 ಕೆಜಿ ವಿಭಾಗ) ವಿಜೇತ ನರಸಿಂಗ್ ಯಾದವ್ ಬೆಂಗಳೂರು ಯೋಧಾಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಬೆಂಗಳೂರು ತಂಡದಲ್ಲಿ ಸಂದೀಪ್ ಥೊಮಾರ್ (57ಕೆಜಿ), ಬಜರಂಗ್ ಪೂನಿಯಾ (65ಕೆಜಿ), ಉಕ್ರೇನ್‌ನ ಪಾವ್ಲೊ ಒಲಿನಿಕ್ (97 ಕೆಜಿ) ಪುರುಷರ ವಿಭಾಗದಲ್ಲಿದ್ದಾರೆ.[ವಿಶ್ವದ ದುಬಾರಿ ಕುಸ್ತಿ ಲೀಗ್ ಗೆ ಭಾರತದಲ್ಲಿ ಚಾಲನೆ]

ಯುಪಿ ವಾರಿಯರ್ಸ್ ತಂಡದಲ್ಲಿ ಹಣ ಹೂಡುವ ಮೂಲಕ ಕುಸ್ತಿಯ ಅಭಿವೃದ್ಧಿಗೆ ಕೈಜೋಡಿಸಿದ್ದೇನೆ. ಇದರಿಂದ ನನಗೆ ಬಹಳ ಸಂತೋಷವಾಗುತ್ತಿದೆ. ನಮ್ಮ ತಂಡದಲ್ಲಿ ಖ್ಯಾತ ಕುಸ್ತಿ ಪಟು ಸುಶೀಲ್ ಕುಮಾರ್ ಸೇರಿದಂತೆ ಸಾಕಷ್ಟು ಉತ್ತಮ ಕುಸ್ತಿ ಪಟುಗಳಿದ್ದು, ಲೀಗ್​ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಬ್ರೆಜಿಲ್ಲಿನ ರಿಯೋದಲ್ಲಿರುವ ಒಲಿಂಪಿಕ್ಸ್ ಗೆ ಪೂರ್ವ ತಯಾರಿಯಾಗಿ ಪ್ರೋ ರೆಸ್ಲಿಂಗ್ ಲೀಗ್ ಬಂದಿರುವ ದೇಶಿ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸಲಿದೆ. ಆರು ನಗರಗಳಿಂದ 66 ಕ್ಕೂ ಅಧಿಕ ಕುಸ್ತಿಪಟುಗಳು ಸ್ಥಾನ ಪಡೆಯಲಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X