ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ: ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ

ಹಲವು ದಾಖಲೆಗಳನ್ನು ಮುರಿಯುವುದು, ಹೊಸ ದಾಖಲೆಗಳನ್ನು ಸೃಷ್ಟಿಸುವುದು ವಿರಾಟ್ ಕೊಹ್ಲಿಗೆ ಹೊಸದೇನಲ್ಲ, 3 ವರ್ಷಗಳಿಂದ ಕಾಯುತ್ತಿದ್ದ 71ನೇ ಶತಕವನ್ನು ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗಳಿಸುವ ಮೂಲಕ ದಾಖಲೆ ಬರೆದ ಕೊಹ್ಲಿ ಈಗ ಮೈದಾನದ ಹೊರಗೆ ಮತ್ತೊಂದು ವಿಶೇಷ ದಾಖಲೆ ನಿರ್ಮಿಸಿದ್ದಾರೆ. 3 ವರ್ಷದಿಂದ ಶತಕ ಗಳಿಸದಿದ್ದರೂ ಕೂಡ ವಿರಾಟ್ ಕೊಹ್ಲಿ ಜನಪ್ರಿಯತೆ ಮಾತ್ರ ಒಂಚೂರು ಕಡಿಮೆಯಾಗಿರಿಲ್ಲ. 71ನೇ ಶತಕ ಗಳಿಸಿದ ನಂತರ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.

33 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಮೈದಾನದಲ್ಲಿ ಮತ್ತು ಹೊರಗೆ ಮೈಲಿಗಲ್ಲುಗಳನ್ನು ಸ್ಥಾಪಿಸುವುದನ್ನು ಮುಂದುವರೆಸಿದ್ದಾರೆ. ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ 50 ಮಿಲಿಯನ್ ಅನುಯಾಯಿಗಳನ್ನು ತಲುಪಿದ ಮೊದಲ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಿಂಗ್ ಕೊಹ್ಲಿ ಸಾಮಾಜಿಕ ಮಾಧ್ಯಮ ಪ್ರಪಂಚವನ್ನು ಆಳುತ್ತಿದ್ದಾರೆ.

T20 World Cup: 5ನೇ ಕ್ರಮಾಂಕದ ಬಗ್ಗೆ ಭಾರತ ಸ್ಪಷ್ಟತೆ ಕಂಡುಕೊಳ್ಳಬೇಕಿದೆ; ರಾಬಿನ್ ಉತ್ತಪ್ಪ ವಿಶ್ಲೇಷಣೆT20 World Cup: 5ನೇ ಕ್ರಮಾಂಕದ ಬಗ್ಗೆ ಭಾರತ ಸ್ಪಷ್ಟತೆ ಕಂಡುಕೊಳ್ಳಬೇಕಿದೆ; ರಾಬಿನ್ ಉತ್ತಪ್ಪ ವಿಶ್ಲೇಷಣೆ

2022ರಲ್ಲಿ ವಿರಾಟ್ ಕೊಹ್ಲಿ ಸಿಹಿ ಕಹಿ ಎರಡನ್ನೂ ನೋಡಿದ್ದಾರೆ. 2022ರ ಐಪಿಎಲ್‌ನಿಂದಲೂ ರನ್ ಗಳಿಸಲು ವಿರಾಟ್ ಕೊಹ್ಲಿ ಪರದಾಡಿದ್ದರು. ಕಳಪೆ ಫಾರ್ಮ್‌ಗಾಗಿ ಹಲವರಿಂದ ಟೀಕೆಗೂ ಒಳಗಾಗಿದ್ದರೂ. ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ಸಂಪೂರ್ಣ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ, ಏಷ್ಯಾಕಪ್‌ನಲ್ಲಿ ರನ್‌ ಗಳಿಸುವ ಗುರಿ ಹೊಂದಿದ್ದರು.

ಕೊನೆಗೂ ಲಯ ಕಂಡುಕೊಂಡ ವಿರಾಟ್ ಕೊಹ್ಲಿ

ಕೊನೆಗೂ ಲಯ ಕಂಡುಕೊಂಡ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ಫಾರ್ಮ್‌ಗೆ ಮರಳುತ್ತಾರೆ ಎಂದು ಹಲವರು ನಿರೀಕ್ಷೆ ಮಾಡಿದ್ದರು, ಕೊಹ್ಲಿ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ. ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನದ ವಿರುದ್ಧ 35 ರನ್ ಗಳಿಸಿದರು. ಎರಡನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿದರು, ಹಾಂಗ್ ಕಾಂಗ್ ವಿರುದ್ಧದ ಅರ್ಧಶತಕ, ಪಾಕಿಸ್ತಾನದ ವಿರುದ್ಧ ಮತ್ತೊಂದು ಅರ್ಧಶತಕ ಸಿಡಿಸಿದ್ದರು.

ಸೂಪರ್ 4 ಹಣಾಹಣಿಯಲ್ಲಿ ಶ್ರೀಲಂಕಾ ವಿರುದ್ಧ ತನ್ನ ಖಾತೆಯನ್ನು ತೆರೆಯಲು ವಿಫಲವಾದ ಅವರು, ಅಫ್ಘಾನಿಸ್ತಾನ ವಿರುದ್ಧ ಅಜೇಯ 122 ರನ್ ಗಳಿಸುವ ಮೂಲಕ ಟೀಕಾಕಾರರನ್ನು ಸುಮ್ಮನಾಗಿಸಿದ್ದಾರೆ.

ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈತನನ್ನು ಪರಿಗಣಿಸಬೇಕಿತ್ತು, ಅನ್ಯಾಯವಾಗಿದೆ; ದಾನೀಶ್ ಕನೇರಿಯಾ

2019ರಲ್ಲಿ ಕೊನೆಯ ಶತಕ ಗಳಿಸಿದ್ದ ವಿರಾಟ್

2019ರಲ್ಲಿ ಕೊನೆಯ ಶತಕ ಗಳಿಸಿದ್ದ ವಿರಾಟ್

ನವೆಂಬರ್ 2019 ರಲ್ಲಿ ಕೊನೆಯ ಬಾರಿಗೆ ಶತಕವನ್ನು ಗಳಿಸಿದ ನಂತರ, ಕೊಹ್ಲಿ 1020 ದಿನಗಳ ಕಾಯುವಿಕೆಯನ್ನು ಕೊನೆಗೊಳಿಸಿದರು. ಬಹುನಿರೀಕ್ಷಿತ 71 ನೇ ಶತಕವನ್ನು ಅವರದೇ ಆದ ಶೈಲಿಯಲ್ಲಿ ಗಳಿಸಿದರು.

ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ವಿರಾಟ್ ಕೊಹ್ಲಿಗಿಂತ ಕೇವಲ 5 ರನ್ ಹೆಚ್ಚು ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. 5 ಇನ್ನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 92 ಸರಾಸರಿಯಲ್ಲಿ 276 ರನ್ ಗಳಿಸಿದ್ದು, 6 ಇನ್ನಿಂಗ್ಸ್ ಆಡಿರುವ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 56.20 ಸರಾಸರಿಯಲ್ಲಿ 281 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯೇ ಕಿಂಗ್

ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯೇ ಕಿಂಗ್

ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ 50 ಮಿಲಿಯನ್ ಅನುಯಾಯಿಗಳನ್ನು ತಲುಪಿದ ಮೊದಲ ಕ್ರಿಕೆಟಿಗರಾದರು. ವಿರಾಟ್ ಕೊಹ್ಲಿ ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ 211 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ, ವಿರಾಟ್ ಕೊಹ್ಲಿಯವರನ್ನು ಫೇಸ್‌ಬುಕ್‌ನಲ್ಲಿ 49 ಮಿಲಿಯನ್ ಬಳಕೆದಾರರು ಅನುಸರಿಸುತ್ತಿದ್ದಾರೆ.

ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒಟ್ಟು 310 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈವರೆಗೂ ಯಾವ ಕ್ರಿಕೆಟಿಗರಿಗೂ ಕೂಡ ಇಷ್ಟು ಫಾಲೋವರ್ಸ್ ಹೊಂದಿರಲಿಲ್ಲ. ವಿರಾಟ್ ಕೊಹ್ಲಿ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ಹೆಚ್ಚು ಅನುಯಾಯಿಗಳನ್ನು ಹೊಂದಿರುವ ನಾಲ್ಕನೆ ಆಟಗಾರ

ಹೆಚ್ಚು ಅನುಯಾಯಿಗಳನ್ನು ಹೊಂದಿರುವ ನಾಲ್ಕನೆ ಆಟಗಾರ

ಕ್ರೀಡಾ ಪ್ರಪಂಚದಲ್ಲಿಯೇ ಟ್ವಿಟರ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. 50 ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೊದಲ ಕ್ರಿಕೆಟ್ ಆಟಗಾರ ಎನ್ನುವ ಹೆಗ್ಗಳಿಕೆ ಕೂಡ ವಿರಾಟ್ ಕೊಹ್ಲಿಯದ್ದಾಗಿದೆ.

103.4 ಮಿಲಿಯನ್ ಫಾಲೋವರ್ಸ್ ಹೊಂದಿರುವ ಫುಟ್ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ಟ್ವಿಟರ್ ನಲ್ಲಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕ್ರೀಡಾಪಟು, ಎರಡನೇ ಸ್ಥಾನದಲ್ಲಿ ಮತ್ತೊಬ್ಬ ಫುಟ್ಬಾಲ್ ಆಟಗಾರ ನೇಯ್ಮರ್ 57.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ಯಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ 52.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

Story first published: Tuesday, September 13, 2022, 15:33 [IST]
Other articles published on Sep 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X