ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಿಂಕ್ ಬಾಲ್ ಟೆಸ್ಟ್ ಗೆದ್ದ ನಾಯಕನಾಗಿ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

Pink Ball Test : Virat Kohli breaks MS Dhoni record with 7th successive win as India captain.
Virat Kohli becomes First Indian Captain to win 7 Test matches in a row

ಕೋಲ್ಕತಾ, ನವೆಂಬರ್ 24: ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಹಗಲು-ರಾತ್ರಿ ಪಂದ್ಯ, ಪಿಂಕ್ ಬಾಲ್ ಟೆಸ್ಟ್ ನಲ್ಲಿ ಭರ್ಜರಿ ಜಯ ದಾಖಲಿಸಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ನಾಯಕನಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ 5000 ರನ್ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಆಗಿ ಇತಿಹಾಸ ಬರೆದಿದ್ದಾರೆ. ಇದರ ಜೊತೆಗೆ ಸತತ ಇನ್ನಿಂಗ್ಸ್ ಜಯದ ದಾಖಲೆಯನ್ನು ಬರೆದಿದ್ದಾರೆ.

ಐತಿಹಾಸಿಕ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲುಐತಿಹಾಸಿಕ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 106 ಸ್ಕೋರಿಗೆ ಸರ್ವಪತನ ಕಂಡಿತು. ಆರಂಭಿಕ ಆಟಗಾರ ಶಾದ್ಮನ್ ಇಸ್ಲಾಂ 29ರನ್ , ಲಿಟನ್ ದಾಸ್ 24, ನಯೀಮ್ ಹಸನ್ 19ರನ್ ಗಳಿಸಿದರು. ಇಶಾಂತ್ ಶರ್ಮ 5 ವಿಕೆಟ್ ಗಳಿಸಿ ಮಿಂಚಿದರು.

ಭಾರತ ಪರ ನಾಯಕ ವಿರಾಟ್ ಕೊಹ್ಲಿ 136ರನ್ ಗಳಿಸಿ ಶತಕ ಗಳಿಕೆಯಲ್ಲೂ ದಾಖಲೆ ಬರೆದರು. ಪೂಜಾರಾ 55, ರಹಾನೆ 51 ರನ್ ಗಳಿಸಿ ಭಾರತದ ಮೊತ್ತವನ್ನು 347/9ಕ್ಕೇರಿಸಿದರು. ಎರಡನೇ ಇನ್ನಿಂಗ್ಸ್ ನಲ್ಲಿ195ರನ್ ಗಳಿಸಿದ ಬಾಂಗ್ಲಾದೇಶಕ್ಕೆ ಮುಷ್ಫಿಕರ್ ರಹೀಂ 74ರನ್ ಗಳಿಸಿ ಆಸರೆಯಾದರು. ಉಮೇಶ್ ಯಾದವ್ 5 ವಿಕೆಟ್ ಗಳಿಸಿದರು. ಭಾರತಕ್ಕೆ 46ರನ್ ಹಾಗೂ ಇನ್ನಿಂಗ್ಸ್ ಜಯ ಲಭಿಸಿತು.

ಸತತ 7ನೇ ಜಯ ಗಳಿಸಿದ ಕೊಹ್ಲಿ

ಸತತ 7ನೇ ಜಯ ಗಳಿಸಿದ ಕೊಹ್ಲಿ

ನಾಯಕನಾಗಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ. ಸತತವಾಗಿ 7ನೇ ಬಾರಿಗೆ ಜಯ ಗಳಿಸಿದ್ದಾರೆ. ಈ ದಾಖಲೆ ಬರೆದ ಮೊದಲ ಭಾರತದ ನಾಯಕರೆನಿಸಿಕೊಂಡಿದ್ದಾರೆ. ಸತತ ಗೆಲುವಿನಲ್ಲಿ ಇದು ಭಾರತದ ದಾಖಲೆಯಾಗಿದೆ. ನಾಯಕನಾಗಿ 33ನೇ ಗೆಲುವು ದಾಖಲಿಸಿದ ಕೊಹ್ಲಿ, ಬ್ರಾಡ್ಮನ್(32 ಗೆಲುವು)ದಾಖಲೆಯನ್ನು ಮುರಿದಿದ್ದಾರೆ.

ಗ್ರಹಾಂ ಸ್ಮಿತ್ 53ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ, ರಿಕಿ ಪಾಂಟಿಂಗ್ (48), ಸ್ಟೀವ್ ಸ್ಮಿತ್ (41), ಕ್ಲೈವ್ ಲಾಯ್ಡ್(36) ಕೊಹ್ಲಿಗಿಂತ ಮುಂದಿದ್ದಾರೆ.

ಇನ್ನಿಂಗ್ಸ್ ಗೆಲುವು ಲಾಯ್ಡ್ ಸಮಕ್ಕೆ ಕೊಹ್ಲಿ

ಇನ್ನಿಂಗ್ಸ್ ಗೆಲುವು ಲಾಯ್ಡ್ ಸಮಕ್ಕೆ ಕೊಹ್ಲಿ

ಸತತವಾಗಿ 11 ಟೆಸ್ಟ್ ಇನ್ನಿಂಗ್ಸ್ ಗೆಲುವು ಸಾಧಿಸುವ ಮೂಲಕ ವಿರಾಟ್ ಕೊಹ್ಲಿ ಅವರು ವೆಸ್ಟ್ ಇಂಡೀಸ್ ಮಾಜಿ ನಾಯಕ ಕ್ಲೈವ್ ಲಾಯ್ಡ್, ನ್ಯೂಜಿಲೆಂಡ್ ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್, ಇಂಗ್ಲೆಂಡಿನ ಮಾಜಿ ನಾಯಕ ಆಂಡ್ರ್ಯೂ ಸ್ಟ್ರಾಸ್ ಸಮಕ್ಕೆ ನಿಂತಿದ್ದಾರೆ.

ಕೊಹ್ಲಿಗಿಂತ ಮುಂದೆ ಇಂಗ್ಲೆಂಡಿನ ಮಾಜಿ ನಾಯಕ ಪೀಟರ್ ಮೇ 12 ಇನ್ನಿಂಗ್ಸ್ ಗೆಲುವು, 14 ಗೆಲುವು ಸಾಧಿಸಿದ ಆಸ್ಟ್ರೇಲಿಯಾದ ನಾಯಕ ಸ್ಟೀವ್ ವಾ ಅಲ್ಲದೆ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಗ್ರಹಾಂ ಸ್ಮಿತ್(22 ಗೆಲುವು) ಇದ್ದಾರೆ.

ಐತಿಹಾಸಿಕ ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

ಸತತ ನಾಲ್ಕು ಟೆಸ್ಟ್ ಇನ್ನಿಂಗ್ಸ್ ಗೆಲುವು

ಸತತ ನಾಲ್ಕು ಟೆಸ್ಟ್ ಇನ್ನಿಂಗ್ಸ್ ಗೆಲುವು

ಸತತವಾಗಿ ನಾಲ್ಕು ಟೆಸ್ಟ್ ಪಂದ್ಯಗಳನ್ನು ಇನ್ನಿಂಗ್ಸ್ ಗೆಲುವು ಸಾಧಿಸಿದ ಭಾರತ ಹೊಸ ದಾಖಲೆ ಬರೆದಿದೆ. ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿದೆ. ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್ 137ರನ್ ಗೆಲುವಿನೊಂದಿಗೆ ಆರಂಭವಾಯಿತು. ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್ 202 ರನ್ ಗೆಲುವು, ಬಾಂಗ್ಲಾದೇಶ ವಿರುದ್ಧ ಇಂದೋರ್ ನಲ್ಲಿ ಇನ್ನಿಂಗ್ಸ್ ಹಾಗೂ 130 ರನ್, ಈಡನ್ ಗಾರ್ಡನ್ಸ್ ನಲ್ಲಿ ಇನ್ನಿಂಗ್ಸ್ 46 ರನ್ ಗಳ ಜಯ ದಾಖಲಿಸಿದೆ.

ಟಾಪ್ 5 ನಾಯಕರ ಪಟ್ಟಿಗೆ ಕೊಹ್ಲಿ

ಟಾಪ್ 5 ನಾಯಕರ ಪಟ್ಟಿಗೆ ಕೊಹ್ಲಿ

ಅತಿ ಹೆಚ್ಚು ಟೆಸ್ ಪಂದ್ಯಗಳನ್ನು ಗೆದ್ದ ನಾಯಕರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಈಗ ಟಾಪ್ 5ನೇ ಸ್ಥಾನಕ್ಕೇರಿದ್ದಾರೆ.
53-ಗ್ರಹಾಂ ಸ್ಮಿತ್
48-ರಿಕಿ ಪಾಂಟಿಂಗ್
41-ಸ್ಟೀವ್ ವಾ
36- ಕ್ಲೈವ್ ಲಾಯ್ಡ್
33-ವಿರಾಟ್ ಕೊಹ್ಲಿ

Story first published: Sunday, November 24, 2019, 17:10 [IST]
Other articles published on Nov 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X