ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ನಲ್ಲಿ 12000 ರನ್: ದಾಖಲೆ ಬರೆದ ವಿರಾಟ್ ಕೊಹ್ಲಿ

Virat Kohli Becomes The Fastest Player To Score 12,000 Runs in ODI

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 12000 ರನ್‌ಗಳ ಗಡಿಯನ್ನು ದಾಟಿ ಮುನ್ನುಗ್ಗಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ಈ ಮೈಲಿಗಲ್ಲನ್ನು ಸಾಧಿಸಿದ ವಿಶ್ವ ಕ್ರಿಕೆಟ್‌ನ ಕೇವಲ 6ನೇ ಆಟಗಾರನಾಗಿದ್ದಾರೆ ಕೊಹ್ಲಿ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 23 ರನ್ ಗಳಿಸುತ್ತಿದ್ದಂತೆಯೇ ಕೊಹ್ಲಿ ಈ ಸಾಧನೆ ಪೂರೈಸಿದ್ದಾರೆ.

ಇಷ್ಟು ಮಾತ್ರವಲ್ಲದೆ ಈ ಮೂಲಕ ಟೀಮ್ ಇಂಡಿಯಾ ನಾಯಕ ಕೊಹ್ಲಿ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 12000 ರನ್ ಗಳ ಗುರಿಯನ್ನು ಅತ್ಯಂತ ವೇಗವಾಗಿ ತಲುಪಿದ ಆಟಗಾರ ಎಂಬ ಖ್ಯಾತಿಗೆ ಒಳಗಾಗಿದ್ದಾರೆ ಕೊಹ್ಲಿ. 242ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ವಿರಾಟ್ ಕೊಹ್ಲಿ ಮಾಡಿದ್ದಾರೆ.

3-0 ಅಂತರದ ಸೋಲನ್ನು ತಪ್ಪಿಸಿಕೊಳ್ಳುತ್ತಾ ಟೀಮ್ ಇಂಡಿಯಾ?: ಕೆಟ್ಟ ದಾಖಲೆಯ ಭೀತಿಯಲ್ಲಿ ಕೊಹ್ಲಿ3-0 ಅಂತರದ ಸೋಲನ್ನು ತಪ್ಪಿಸಿಕೊಳ್ಳುತ್ತಾ ಟೀಮ್ ಇಂಡಿಯಾ?: ಕೆಟ್ಟ ದಾಖಲೆಯ ಭೀತಿಯಲ್ಲಿ ಕೊಹ್ಲಿ

ಈ ಹಿಂದೆ ಈ ದಾಖಲೆ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಇತ್ತು. ಸಚಿನ್ ತೆಂಡೂಲ್ಕರ್ 12000 ರನ್‌ಗಳ ದಾಖಲೆ ಬರೆಯಲು 300 ಇನ್ನಿಂಗ್ಸ್ ಬಳಸಿಕೊಂಡಿದ್ದರು. ಆದರೆ ಕೊಹ್ಲಿ ದೊಡ್ಡ ಅಂತರದಿಂದ ಈ ಸಾಧನೆಯನ್ನು ಮಾಡಿದ್ದಾರೆ.

ಕೊಹ್ಲಿ ಸಚಿನ್ ಕೊರತು ಪಡಿಸಿ ನಾಲ್ವರು ಕ್ರಿಕೆಟಿಗರು 12 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ರಿಕಿ ಪಾಂಟಿಂಗ್, ಕುಮಾರ್ ಸಂಗಕ್ಕರ, ಸನತ್ ಜಯಸೂರ್ಯ ಹಾಗೂ ಮಹೇಲ ಜಯವರ್ಧನೆ ಈ ಸಾಧನೆ ಮಾಡಿದ ಇತರ ಆಟಗಾರರಾಗಿದ್ದಾರೆ.

ಭಾರತ vs ಆಸ್ಟ್ರೇಲಿಯಾ: 3ನೇ ಏಕದಿನ ಪಂದ್ಯ, Live ಸ್ಕೋರ್ಭಾರತ vs ಆಸ್ಟ್ರೇಲಿಯಾ: 3ನೇ ಏಕದಿನ ಪಂದ್ಯ, Live ಸ್ಕೋರ್

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 314 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಯನ್ನು ಮಾಡಿದ್ದರೆ ಕುಮಾರ್ ಸಂಗಕ್ಕರ 336 ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲು ದಾಟಿದ್ದಾರೆ. ಸನತ್ ಜಯಸೂರ್ಯ 379 ಹಾಗೂ ಮಹೇಲ ಜಯವರ್ಧನೆ 399 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಯನ್ನು ಮಾಡಿದ ಆಟಗಾರರಾಗಿದ್ದಾರೆ.

Story first published: Wednesday, December 2, 2020, 14:40 [IST]
Other articles published on Dec 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X