ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ನಾಯಕನಾಗಿ ವಿರಾಟ್ ಕೊಹ್ಲಿ ವಿಶಿಷ್ಠ ದಾಖಲೆ

Virat Kohli becomes the third captain to score 12,000 plus runs in international cricket

ಅಹ್ಮದಾಬಾದ್: ಸಾಲು ಸಾಲು ದಾಖಲೆಗಳನ್ನು ನಿರ್ಮಿಸುತ್ತಿರುವ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ20ಐ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12,000+ ರನ್ ಬಾರಿಸಿದ ಮೂರನೇ ನಾಯಕ ಎಂಬ ದಾಖಲೆಗೆ ಕೊಹ್ಲಿ ಕಾರಣರಾಗಿದ್ದಾರೆ.

ಐಪಿಎಲ್ : ಪ್ರತಿ ತಂಡದಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಐಪಿಎಲ್ : ಪ್ರತಿ ತಂಡದಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿ

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ-ಇಂಗ್ಲೆಂಡ್‌ ದ್ವಿತೀಯ ಪಂದ್ಯದಲ್ಲಿ 73 (49 ಎಸೆತ) ರನ್ ಬಾರಿಸುವ ಮೂಲಕ ಕೊಹ್ಲಿ ವಿಶೇಷ ಸಾಧನೆ ಮೆರೆದಿದ್ದಾರೆ. ಅಸಲಿಗೆ ಕೊಹ್ಲಿಗೆ ಈ ಸಾಧನೆ ಮಾಡಲು ಕೇವಲ 17 ರನ್‌ಗಳ ಅಗತ್ಯವಿತ್ತು.

ರಾಷ್ಟ್ರೀಯ ತಂಡದ ನಾಯಕರಾಗಿದ್ದು 12,000+ ರನ್ ಗಳಿಸಿದ ದಾಖಲೆ ಮೊದಲು ನಿರ್ಮಿಸಿದ್ದು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್. ಪಾಂಟಿಂಗ್ 15440 ರನ್ ದಾಖಲೆ ಹೊಂದಿದ್ದರೆ, ಸ್ಮಿತ್ 14878 ರನ್ ಗಳಿಸಿದ್ದಾರೆ.

3ನೇ ಟಿ20ಗೆ ವಿನ್ನಿಂಗ್ ಕಾಂಬಿನೇಶನ್ ಬದಲಾಯಿಸ್ತಾರಾ ಕೊಹ್ಲಿ? ಕೆಎಲ್ ರಾಹುಲ್ ಸ್ಥಾನ ಉಳಿಯುತ್ತಾ?3ನೇ ಟಿ20ಗೆ ವಿನ್ನಿಂಗ್ ಕಾಂಬಿನೇಶನ್ ಬದಲಾಯಿಸ್ತಾರಾ ಕೊಹ್ಲಿ? ಕೆಎಲ್ ರಾಹುಲ್ ಸ್ಥಾನ ಉಳಿಯುತ್ತಾ?

ಭಾರತೀಯ ತಂಡದ ನಾಯಕರಾಗಿ ಅತೀ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ದ್ವಿತೀಯ ಸ್ಥಾನದಲ್ಲಿದ್ದಾರೆ. 2007ರಿಂದ 2018ರ ಅವಧಿಯಲ್ಲಿ ನಾಯರಾಗಿದ್ದ ಧೋನಿ 11207 ರನ್ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ20ಐ ಪಂದ್ಯದಲ್ಲಿ ಭಾರತ 7 ವಿಕೆಟ್ ಭರ್ಜರಿ ಜಯ ಗಳಿಸಿತು.

Story first published: Monday, March 15, 2021, 19:52 [IST]
Other articles published on Mar 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X