ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಡಿಲೇಡ್ ಪಂದ್ಯದಲ್ಲಿ ಶತಕ ಬಾರಿಸಿ, ಕೊಹ್ಲಿ ಮುರಿದ ದಾಖಲೆಗಳು

Virat Kohli breaks many records after Adelaide ODI

ಅಡಿಲೇಡ್, ಜನವರಿ 15: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.

ಅಡಿಲೇಡ್ ಓವಲ್ ನಲ್ಲಿ ನಾಯಕ ಕೊಹ್ಲಿ ಶತಕ ಬಾರಿಸಿದರೆ, ಮಾಜಿ ನಾಯಕ ಎಂಎಸ್ ಧೋನಿ ಅವರು ಅರ್ಧಶತಕ ಬಾರಿಸಿ ಗೆಲುವಿನ ದಡ ಮುಟ್ಟಿದರು.

ಅತ್ಯಧಿಕ ಅಂತಾರಾಷ್ಟ್ರೀಯ ಶತಕ: ಸಂಗಕ್ಕಾರ ಸರಿಗಟ್ಟಿದ ವಿರಾಟ್ ಕೊಹ್ಲಿ!ಅತ್ಯಧಿಕ ಅಂತಾರಾಷ್ಟ್ರೀಯ ಶತಕ: ಸಂಗಕ್ಕಾರ ಸರಿಗಟ್ಟಿದ ವಿರಾಟ್ ಕೊಹ್ಲಿ!

ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 39ನೇ ಶತಕ ಬಾರಿಸಿರುವ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಅವರ 49 ಶತಕ ದಾಖಲೆ ಮುರಿಯುವ ಹಾದಿಯಲ್ಲಿ ಮತ್ತೊಂದು ದಾಪುಗಾಲು ಇಟ್ಟರು.

1
43628

ಅಡಿಲೇಡ್ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 299 ಸ್ಕೋರ್ ರನ್ ಚೇಸ್ ಮಾಡಿದ ಭಾರತಕ್ಕೆ ಕೊಹ್ಲಿ 104ರನ್ ಗಳಿಸಿದರು. ಈ ಗೆಲುವಿನೊಂದಿದೆ ಸರಣಿ 1-1ರಲ್ಲಿ ಸಮವಾಗಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಅಂತಿಮ ಪಂದ್ಯ ನಡೆಯಲಿದೆ.

ಇದಕ್ಕೂ ಮುನ್ನ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಆರಂಭಿಕ ಜೋಡಿ ಒಟ್ಟಾರೆ, 4000ರನ್ ಜೊತೆಯಾಟ ಸಾಧಿಸಿದರು. ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ನಂತರ ಈ ಸಾಧನೆ ಮಾಡಿದ ಎರಡನೇ ಜೋಡಿಯಾಗಿದೆ.

ಕೊಹ್ಲಿ ಒಟ್ಟು 64 ಶತಕ ಗಳಿಸಿದ್ದಾರೆ

ಕೊಹ್ಲಿ ಒಟ್ಟು 64 ಶತಕ ಗಳಿಸಿದ್ದಾರೆ

ವಿರಾಟ್ 112 ಎಸೆತಗಳಿಗೆ 104 ರನ್ ಬಾರಿಸಿದ್ದರು. ಈ ಶತಕದೊಂದಿಗೆ ಕೊಹ್ಲಿ ಒಟ್ಟು 64 ಶತಕದ (ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ) ಸಾಧನೆ ಮೆರೆದರು. ಇದು ಅಂತಾರಾಷ್ಟ್ರೀಯ ಅತ್ಯಧಿಕ ಶತಕದ ಸರದಾರರ ಸಾಲಿನಲ್ಲಿ ಕೊಹ್ಲಿಯನ್ನು 3ನೇ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಸಚಿನ್ ತೆಂಡೂಲ್ಕರ್ 100 ಹಾಗೂ ರಿಕಿ ಪಾಂಟಿಂಗ್ 71 ಶತಕಗಳನ್ನು ಗಳಿಸಿದ್ದು, ಕೊಹ್ಲಿಗಿಂತ ಮುಂದಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ತ್ವರಿತಗತಿಯಲ್ಲಿ 5ನೇ ಶತಕ

ಆಸ್ಟ್ರೇಲಿಯಾ ನೆಲದಲ್ಲಿ ತ್ವರಿತಗತಿಯಲ್ಲಿ 5ನೇ ಶತಕ

ಅಡಿಲೇಡ್ ನಲ್ಲಿ ಕೊಹ್ಲಿ ಗಳಿಸಿದ ಶತಕವು ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾ ನೆಲದಲ್ಲಿ 5ನೇ ಶತಕವಾಗಿದೆ. ಅತಿ ಹೆಚ್ಚು ಶತಕ ಗಳಿಸಿದ ವಿದೇಶಿ ಆಟಗಾರರ ಪೈಕಿ ಕುಮಾರ ಸಂಗಕ್ಕಾರ ಹಾಗೂ ರೋಹಿತ್ ಶರ್ಮ ಕೂಡಾ ಇಷ್ಟೇ ಶತಕ ಗಳಿಸಿದ್ದಾರೆ.

ಆದರೆ,ಕೊಹ್ಲಿ ತ್ವರಿತವಾಗಿ 5 ಶತಕ ಗಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಆಡಿದ 25ನೇ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ, ರೋಹಿತ್ ಶರ್ಮ 28ನೇ ಪಂದ್ಯ ತೆಗೆದುಕೊಂಡಿದ್ದರು, ಸಂಗಕ್ಕಾರ ಅವರು 49 ಪಂದ್ಯಗಳಲ್ಲಿ 5 ಶತಕ ಗಳಿಸಿದ್ದರು.

2017ರಿಂದ ಅತ್ಯಧಿಕ ಶತಕ

* ಇದು ಅಡಿಲೇಡ್ ಓವಲ್ ಮೈದಾನದಲ್ಲಿ ಕೊಹ್ಲಿ ಗಳಿಸಿರುವ ಒಟ್ಟಾರೆ, ಎರಡನೇ ಶತಕವಾಗಿದೆ.
* ವಿರಾಟ್ ಕೊಹ್ಲಿ ಅವರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 10,309 ರನ್ ಗಳಿಸಿದ್ದಾರೆ. ಈ ಮೂಲಕ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ 11ನೇ ಸ್ಥಾನಕ್ಕೇರಿದ್ದಾರೆ.
* 2017ರಿಂದ ವಿರಾಟ್ ಕೊಹ್ಲಿ 42 ಇನ್ನಿಂಗ್ಸ್ ಗಳಲ್ಲಿ 13 ಶತಕ ಗಳಿಸಿದ್ದರೆ, ರೋಹಿತ್ ಶರ್ಮ 12 ಶತಕ ಗಳಿಸಿದ್ದಾರೆ.

ಶತಕ ಗಳಿಸಿ, ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗೆಲುವು

ಶತಕ ಗಳಿಸಿ, ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗೆಲುವು

ಶತಕ ಗಳಿಸಿ, ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು:
* 33 : ಸಚಿನ್ ತೆಂಡೂಲ್ಕರ್
* 32 : ವಿರಾಟ್ ಕೊಹ್ಲಿ
* 25 : ರಿಕಿ ಪಾಂಟಿಂಗ್

ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಶತಕ ಗಳಿಸಿ ಭಾರತಕ್ಕೆ ಜಯ ತಂದವರು:
* 103 ಅಜೇಯ : ವಿವಿಎಸ್ ಲಕ್ಷ್ಮಣ್, 2004
* 117 ಅಜೇಯ : ಸಚಿನ್ ತೆಂಡೂಲ್ಕರ್, 2008
* 104 ಅಜೇಯ : ಮನೀಶ್ ಪಾಂಡೆ, 2016
* 104 : ವಿರಾಟ್ ಕೊಹ್ಲಿ, 2019

Story first published: Tuesday, January 15, 2019, 21:54 [IST]
Other articles published on Jan 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X