ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ vs ಭಾರತ: ನಾಯಕನಾಗಿ ಕೊಹ್ಲಿ ಮತ್ತೊಂದು ದಾಖಲೆ

Virat Kohli Breaks MS Dhoni Record To Become Fastest To 5000 ODI Runs As Captain

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಬ್ಯಾಟಿಂಗ್ ದಾಖಲೆಯನ್ನು ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿ ವೇಗವಾಗಿ 5000ರನ್ ಮಾಡಿದ ದಾಖಲೆ ಮಾಡಿದ್ದಾರೆ.

ಟೀಮ್ ಇಂಡಿಯಾ ಮಾಜಿ ನಾಯಕನ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದಈ ದಾಖಲೆ ವಿರಾಟ್ ಕೊಹ್ಲಿ ಪಾಲಾಗಿದೆ. ಮಾಜಿ ನಾಯಕ ಎಂ.ಎಸ್. ಧೋನಿ ಈ ಸಾಧನೆ ಮಾಡಲು 127 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ವಿರಾಟ್ ಕೋಹ್ಲಿ ಇದನ್ನು ಕೇವಲ 82 ಇನ್ನಿಂಗ್ಸ್‌ನಲ್ಲಿ ಈ ಮಹತ್ತರ ದಾಖಲೆಯನ್ನು ಬರೆದಿದ್ದಾರೆ.

ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್(131 ಇನ್ನಿಂಗ್ಸ್) ಮೂರನೇ ಸ್ಥಾನ, ಗ್ರೇಮ್ ಸ್ಮಿತ್ (135 ಇನ್ನಿಂಗ್ಸ್) ನಾಲ್ಕನೇ ಇನ್ನಿಂಗ್ಸ್, ಸೌರವ್ ಗಂಗೂಲಿ(136ಇನ್ನಿಂಗ್ಸ್) ಈ ಸಾಧನೆಯ ಪಟ್ಟಿಯಲ್ಲಿ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ನಿರ್ಣಾಯಕ ಪಂದ್ಯ; live ಸ್ಕೋರ್ಭಾರತ vs ಆಸ್ಟ್ರೇಲಿಯಾ: ನಿರ್ಣಾಯಕ ಪಂದ್ಯ; live ಸ್ಕೋರ್

ಇದಕ್ಕೂ ಮುನ್ನ ವಿರಾಟ್ ಕೊಹ್ಲಿ1000, 2000,3000, 4000 ರನ್‌ಗಳನ್ನು ನಾಯಕನಾಗಿ ವೇಗವಾಗಿ ಗಳಿಸಿದ ದಾಖಲೆಯನ್ನೂ ತಮ್ಮ ಹೆಸರಿನಲ್ಲೇ ಬರೆದುಕೊಂಡಿದ್ದರು.

ಈ ತಿಂಗಳ ಆರಂಭದಲ್ಲಿ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕನಾಗಿ ವೇಗವಾಗಿ 11,000 ರನ್ ಗಳಿಸಿದ ದಾಖಲೆಯನ್ನು ಮಾಡಿದ್ದರು. ಈ ಸಾಧನೆಗೆ ವಿರಾಟ್ ಕೊಹ್ಲಿ 169 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು.

Story first published: Sunday, January 19, 2020, 20:33 [IST]
Other articles published on Jan 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X