ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup 2022: ಸರಿಯಾದ ಸಮಯದಲ್ಲಿ ಆತ ರನ್ ಗಳಿಸಲು ಆರಂಭಿಸಿದ್ದಾನೆ: ರಾಸ್ ಟೇಲರ್

Virat Kohli Century Comes At The Perfect Time, He Will Score Plenty More Runs : Ross Taylor

ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿಅತ್ಯುತ್ತಮ ಸಮಯದಲ್ಲಿ ಫಾರ್ಮ್‌ಗೆ ಮರಳಿದ್ದಾರೆ ಎಂದು ನ್ಯೂಜಿಲೆಂಡ್ ಮಾಜಿ ಬ್ಯಾಟರ್ ರಾಸ್ ಟೇಲರ್ ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಟೇಲರ್, ಈ ಬಾರಿ ವಿಶ್ವಕಪ್‌ನಲ್ಲಿ ಉತ್ತಮ ರನ್ ಗಳಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

Ind Vs SA T20: ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯದ ವೇಳೆಗೆ ಕ್ರಿಕೆಟ್‌ನ ಹಲವು ನಿಯಮಗಳಲ್ಲಿ ಬದಲಾವಣೆInd Vs SA T20: ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯದ ವೇಳೆಗೆ ಕ್ರಿಕೆಟ್‌ನ ಹಲವು ನಿಯಮಗಳಲ್ಲಿ ಬದಲಾವಣೆ

ಕೊಹ್ಲಿ ಸುಮಾರು ಮೂರು ವರ್ಷಗಳ ಕಾಲ ರನ್ ಬರ ಅನುಭವಿಸಿದ್ದರು. 1000 ದಿನಗಳ ಸುದೀರ್ಘ ಕಾಯುವಿಕೆ ನಂತರ, 2022 ರ ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಶತಕ ಗಳಿಸಿದರು. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ 71 ನೇ ಶತಕವಾಗಿದೆ. ನವೆಂಬರ್ 2019 ರಿಂದ ಅವರು ಶತಕ ಗಳಿಸಿರಲಿಲ್ಲ.

ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ರಾಸ್ ಟೇಲರ್, ಕೊಹ್ಲಿ ಫಾರ್ಮ್‌ಗೆ ಮರಳುವುದರಲ್ಲಿ ಆಶ್ಚರ್ಯವಿಲ್ಲ ಮತ್ತು ಇದು ಕೇವಲ ಶತಕದ ವಿಷಯವಾಗಿದೆ ಎಂದು ಹೇಳಿದರು. ಸರಿಯಾದ ಸಮಯದಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿದ್ದಾರೆ. ಅವರು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರನ್ ಗಳಿಸುತ್ತಾರೆ ಎಂದು ರಾಸ್ ಟೇಲರ್ ಹೇಳಿದ್ದಾರೆ.

ಸರಿಯಾದ ಸಮಯದಲ್ಲಿ ಫಾರ್ಮ್‌ ಕಂಡುಕೊಂಡಿದ್ದಾರೆ

ಸರಿಯಾದ ಸಮಯದಲ್ಲಿ ಫಾರ್ಮ್‌ ಕಂಡುಕೊಂಡಿದ್ದಾರೆ

ವಿರಾಟ್ ಕೊಹ್ಲಿ ಫಾರ್ಮ್‌ ಕಂಡುಕೊಳ್ಳುವುದು ನನಗೆ ಆಶ್ಚರ್ಯವೇನಿಲ್ಲ, ಅವರು ಯಾವಾಗ ಶತಕ ಗಳಿಸಿದರು ಎನ್ನುವುದು ಮುಖ್ಯವಾಗಿದೆ. ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನವೇ ಅವರು ಫಾರ್ಮ್ ಕಂಡುಕೊಂಡಿರುವುದು, ಶತಕ ಗಳಿಸಿರುವುದು ಟೀಂ ಇಂಡಿಯಾ ಪಾಲಿಗೆ ಉತ್ತಮ ವಿಚಾರವಾಗಿದೆ." ಎಂದು ರಾಸ್ ಟೇಲರ್ ಹೇಳಿದ್ದಾರೆ.

"ಅವರು ಈಗ ಉತ್ತಮ ಲಯದಲ್ಲಿದ್ದಾರೆ ಎಂದು ನಾನು ಭಾವಿಸುತ್ತೇನೆ, ಮುಂಬರುವ ವರ್ಷಗಳಲ್ಲಿ ಅವರು ಸಾಕಷ್ಟು ಶತಕಗಳನ್ನು ಗಳಿಸಲಿದ್ದಾರೆ," ಎಂದು ಟೇಲರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Ind vs SA: ಗಾಯಾಳು ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಆಯ್ಕೆ

ಕೋವಿಡ್-19 ನಂತರ ಫಾರ್ಮ್‌ ಕಳೆದುಕೊಂಡರು

ಕೋವಿಡ್-19 ನಂತರ ಫಾರ್ಮ್‌ ಕಳೆದುಕೊಂಡರು

ಆರ್‌ಸಿಬಿಯಲ್ಲಿ ಆಡಿದ್ದ ರಾಸ್ ಟೇಲರ್, ವಿರಾಟ್ ಕೊಹ್ಲಿ ಜೊತೆ ಕಳೆದ ಸಮಯವನ್ನು ನೆನಪಿಸಿಕೊಂಡಿದ್ದಾರೆ. ಮತ್ತು ಕೋವಿಡ್-19 ನಂತರ ಅವರು ತಮ್ಮ ಫಾರ್ಮ್ ಕಳೆದುಕೊಂಡರು ಎಂದು ಅಭಿಪ್ರಾಯಪಟ್ಟಿದ್ದಾರೆ.

"ನಾನು ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿಯೊಂದಿಗೆ ನನ್ನ ಸಮಯವನ್ನು ಸಂಪೂರ್ಣವಾಗಿ ಆನಂದಿಸಿದೆ ಮತ್ತು ಅವರ ವೃತ್ತಿಜೀವನದಲ್ಲಿ ಅಭಿವೃದ್ಧಿ ಹೊಂದುವುದನ್ನು ನಾನು ಸಂಪೂರ್ಣವಾಗಿ ಆನಂದಿಸಿದೆ." ಎಂದು ಹೇಳಿರುವ ರಾಸ್ ಟೇಲರ್, ಆಟಗಾರರ ಮೇಲೆ ಕೋವಿಡ್-19 ಸಾಕಷ್ಟು ಪ್ರಭಾವ ಬೀರಿದೆ ಎಂದು ಹೇಳಿದರು. ಕೋವಿಡ್ ಅನೇಕ ದೇಶಗಳಲ್ಲಿ ಬಹಳಷ್ಟು ಜನರ ಮೇಲೆ ಪರಿಣಾಮ ಬೀರಿದೆ.

ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ರನ್ ಗಳಿಸುತ್ತಾರೆ

ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ರನ್ ಗಳಿಸುತ್ತಾರೆ

ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಕೊಹ್ಲಿ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ 63 ರನ್ ಗಳಿಸಿ ಮಿಂಚಿದ್ದರು. ಈ ವರ್ಷ ಟಿ20 ವಿಶ್ವಕಪ್ ಎತ್ತಿಹಿಡಿಯುವ ಭಾರತದ ಪ್ರಯತ್ನದಲ್ಲಿ ಬಲಗೈ ಬ್ಯಾಟರ್ ನಿರ್ಣಾಯಕ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಭಾರತ ತಂಡವು ಸಮತೋಲನದಿಂದ ಕೂಡಿದೆ. ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಗೆದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮೊದಲನೇ ಪಂದ್ಯವನ್ನು ಗೆದ್ದಿದ್ದಾರೆ. ವಿಶ್ವಕಪ್‌ಗೆ ಹೋಗುವಾಗ ಅವರಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ, ವಿಶ್ವಕಪ್‌ನಲ್ಲಿ ಅವರು ಹೆಚ್ಚಿನ ಸ್ಪರ್ಧೆ ಒಡ್ಡುತ್ತಾರೆ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡಕ್ಕೆ ಅವಕಾಶ ಹೆಚ್ಚಿದೆ

ಆಸ್ಟ್ರೇಲಿಯಾ ತಂಡಕ್ಕೆ ಅವಕಾಶ ಹೆಚ್ಚಿದೆ

ಆರು ಟಿ20 ವಿಶ್ವಕಪ್‌ಗಳಲ್ಲಿ ನ್ಯೂಜಿಲೆಂಡ್ ಅನ್ನು ಪ್ರತಿನಿಧಿಸಿರುವ ಟೇಲರ್, ಮುಂಬರುವ ಆವೃತ್ತಿಯಲ್ಲಿ ಆಸ್ಟ್ರೇಲಿಯಾವು ನೆಚ್ಚಿನ ತಂಡವಾಗಿದೆ ಎಂದು ಹೇಳಿದ್ದಾರೆ. ಯುಎಇಯಲ್ಲಿ ಕಳೆದ ವರ್ಷದ ಆವೃತ್ತಿಯಂತೆ ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರ ವಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದು ಸಾಕಷ್ಟು ಮುಕ್ತ ವಿಶ್ವಕಪ್ ಎಂದು ನಾನು ಭಾವಿಸುತ್ತೇನೆ, ನ್ಯೂಜಿಲೆಂಡ್ ಅಗ್ರ ಕ್ರಮಾಂಕ ಮತ್ತು ನಮ್ಮ ಆರಂಭಿಕ ಬೌಲರ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ನ್ಯೂಜಿಲೆಂಡ್ ಸೆಮಿ-ಫೈನಲ್ ಅಥವಾ ಫೈನಲ್‌ಗೆ ಬರುವಂತೆ ತೋರುತ್ತಿದೆ. ಅವರು ಕಳೆದ ಕೆಲವು ಐಸಿಸಿ ಪಂದ್ಯಾವಳಿಗಳಲ್ಲಿ ಕೊನೆಯ ನಾಲ್ಕರಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ, ನ್ಯೂಜಿಲೆಂಡರ್ ತಂಡ ಫೈನಲ್ ತಲುಪಿತು. ಆದಾಗ್ಯೂ, ಅವರು ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.

Story first published: Friday, September 30, 2022, 15:02 [IST]
Other articles published on Sep 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X