ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಿದ್ದಾಜಿದ್ದಿ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಗೆದ್ದಿದ್ದೆಷ್ಟು, ಸೋತಿದ್ದೆಷ್ಟು?!

Virat Kohli & Co can take heart from their record in deciders

ನವದೆಹಲಿ, ಮಾರ್ಚ್ 12: ಪ್ರವಾಸಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಐದು ಪಂದ್ಯಗಳ ಏಕದಿನ ಸರಣಿ 2-2ರಲ್ಲಿ ನಿಂತಿದ್ದು, 5ನೇ ಪಂದ್ಯ ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುವ 5ನೇ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ಜಯಿಸಲಿದೆ (ಚಿತ್ರಕೃಪೆ: ದ ಇಂಡಿಯನ್ ಎಕ್ಸ್‌ಪ್ರೆಸ್).

ಭಾರತ vs ಆಸ್ಟ್ರೇಲಿಯಾ: 5ನೇ ಏಕದಿನಕ್ಕೆ ಸಂಭಾವ್ಯ ಭಾರತ XI ತಂಡಭಾರತ vs ಆಸ್ಟ್ರೇಲಿಯಾ: 5ನೇ ಏಕದಿನಕ್ಕೆ ಸಂಭಾವ್ಯ ಭಾರತ XI ತಂಡ

ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳನ್ನು ಟೀಮ್ ಇಂಡಿಯಾ ಗೆದ್ದು ಪಾರಮ್ಯ ಮೆರೆದಿತ್ತು. ಆದರೆ ತಿರುಗಿದ್ದ ಕಾಂಗರೂ ಬಳಗ ಅನಂತರದ ಎರಡೂ ಪಂದ್ಯಗಳಲ್ಲಿ ಆತಿಥೇಯರಿಗೆ ಸೋಲಿನ ಆಘಾತ ನೀಡಿತ್ತು. ಅಂತಿಮ ಪಂದ್ಯದಲ್ಲೂ ಗೆಲುವು ದಾಖಲಿಸುವ ವಿಶ್ವಾಸದಲ್ಲಿ ಆ್ಯರನ್ ಫಿಂಚ್ ಬಳಗವಿದೆ. ಆದರೆ ಭಾರತದ ವಿರುದ್ಧ ಗೆಲುವು ಸಾಧ್ಯವೆ?

ಮೊಹಾಲಿಯಲ್ಲಿ ಭಾರತಕ್ಕೆ ಮತ್ತೆ ಸೋಲು, ದಾಖಲೆ ಮುರಿಯುವಾಸೆ ಮಣ್ಣುಪಾಲು!ಮೊಹಾಲಿಯಲ್ಲಿ ಭಾರತಕ್ಕೆ ಮತ್ತೆ ಸೋಲು, ದಾಖಲೆ ಮುರಿಯುವಾಸೆ ಮಣ್ಣುಪಾಲು!

ಏಕದಿನ ದ್ವಿಪಕ್ಷೀಯ ಸರಣಿಯ ಅಂಕಿ-ಅಂಶಗಳನ್ನು ಗಮನಿಸಿದರೆ, ಜಿದ್ದಾಜಿದ್ದಿಯ ಸರಣಿಯನ್ನು ಭಾರತ ಗೆದ್ದುಕೊಂಡಿದ್ದೇ ಹೆಚ್ಚು. ಅವುಗಳಲ್ಲಿ ಕೆಲವು ಪ್ರಮುಖ-ಕುತೂಹಲಕಾರಿ ಪಂದ್ಯಗಳ ಮಾಹಿತಿ ಕೆಳಗಿದೆ.

ಭಾರತ ಸೋಲಿಸೋದು ಸುಲಭವಿಲ್ಲ

ಭಾರತ ಸೋಲಿಸೋದು ಸುಲಭವಿಲ್ಲ

ಸರಣಿ ಸಮಬಲಗೊಂಡು ನಿರ್ಧಾರಕ ಪಂದ್ಯದಲ್ಲಿ ಭಾರತವನ್ನು ಸೋಲಿಸೋದು ಸುಲಭವಿಲ್ಲ. ಅದರಲ್ಲೂ ತವರಿನಲ್ಲಿ ನಡೆಯುವ ಏಕದಿನ ಪಂದ್ಯಗಳನ್ನು ವಿರಾಟ್ ಕೊಹ್ಲಿ ಬಳಗ ಬಿಟ್ಟುಕೊಟ್ಟಿದ್ದು ತೀರಾ ಕಡಿಮೆ. ಕೊಹ್ಲಿ ನಾಯಕತ್ವದಲ್ಲಿ ಪಾಲ್ಗೊಂಡ 12 ಏಕದಿನ ದ್ವಿಪಕ್ಷೀಯ ಸರಣಿಗಳಲ್ಲಿ ಒಟ್ಟು 11 ಸರಣಿಗಳನ್ನು ಭಾರತವೇ ಗೆದ್ದಿದೆ (ಗಮನಿಸಿ; ಕೆಳಗಿನ ಅಂಕಿಅಂಶಗಳೆಲ್ಲವೂ 2015ರಿಂದ ಈಚಿನ ಸರಣಿಗಳದ್ದು).

ಭಾರತ ಮೇಲುಗೈ

ಭಾರತ ಮೇಲುಗೈ

ಅಂತಿಮ ಪಂದ್ಯಕ್ಕೂ ಮುನ್ನ ಸಮಬಲಗೊಂಡಿದ್ದ ಏಕದಿನ ಸರಣಿಯಲ್ಲಿ ಭಾರತ ಗೆದ್ದ ಅಂಕಿ ಅಂಶಗಳನ್ನು ಪರಿಗಣಿಸುವಾಗ ಬರೀ 2015ರಿಂದೀಚಿನ ಸರಣಿಗಳನ್ನಷ್ಟೇ ಗಣನೆಗೆ ತೆಗೆದುಕೊಂಡರೆ; ಆಡಿದ 8 ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ ಟೀಮ್ ಇಂಡಿಯಾ 6ರಲ್ಲಿ ಜಯ ಸಾಧಿಸಿದ್ದ ದಾಖಲೆಯಿದೆ.

ಜಿದ್ದ ಜಿದ್ದಿಯಲ್ಲಿ 2 ಸೋಲು

ಜಿದ್ದ ಜಿದ್ದಿಯಲ್ಲಿ 2 ಸೋಲು

2015-16ರಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 2-2ರಲ್ಲಿ ನಿಂತಿದ್ದ ಏಕದಿನ ಸರಣಿಯಲ್ಲಿ ಅಂತಿಮ ಪಂದ್ಯವನ್ನು ಸೋತು ಸರಣಿಯನ್ನು ಭಾರತ ಕೈ ಬಿಟ್ಟಿತ್ತು. ಭಾರತ ತಂಡ ಇಂಗ್ಲೆಂಡ್ ಪ್ರವಾಸ ಸರಣಿ ಕೈಗೊಂಡಿದ್ದಾಗ ಆಂಗ್ಲರೆದುರು 1-1ರಲ್ಲಿ ಸಮಬಲಗೊಂಡಿದ್ದ ಏಕದಿನ ಸರಣಿಯನ್ನು ಕೊನೆಯ ಪಂದ್ಯದ ಸೋಲಿನೊಂದಿಗೆ ಕಳೆದುಕೊಂಡಿತ್ತು.

6 ನಾನಾ-ನೀನಾ ಪಂದ್ಯಗಳಲ್ಲಿ ಗೆಲುವು

6 ನಾನಾ-ನೀನಾ ಪಂದ್ಯಗಳಲ್ಲಿ ಗೆಲುವು

ಇನ್ನು 2016-17ರಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ 2-2ರಲ್ಲಿದ್ದ ಏಕದಿನ ಸರಣಿಯನ್ನು, ವೆಸ್ಟ್ ಇಂಡೀಸ್ ಪ್ರವಾಸದ ವೇಳೆ (2017) 2-1ರಲ್ಲಿದ್ದ ಸರಣಿ (1 ಫಲಿತಾಂಶವಿಲ್ಲ), ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ 1-1ರಲ್ಲಿದ್ದ ಸರಣಿ (2017-18), ಪ್ರವಾಸಿ ಶ್ರೀಲಂಕಾ ವಿರುದ್ಧ 1-1ರಲ್ಲಿದ್ದ ಸರಣಿ (2017-18), ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 2-1ರಲ್ಲಿದ್ದ ಸರಣಿ (2018-19- 1 ಪಂದ್ಯ ಟೈ), ಆಸ್ಟ್ರೇಲಿಯಾ ಪ್ರವಾಸದ ವೇಳೆ 1-1ರಲ್ಲಿದ್ದ ಸರಣಿಯನ್ನು (2018-19) ಭಾರತ ಗೆದ್ದುಕೊಂಡಿದೆ.

Story first published: Tuesday, March 12, 2019, 18:01 [IST]
Other articles published on Mar 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X