ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಡೇ-ನೈಟ್ ಟೆಸ್ಟ್‌ ಆಡಲಿದೆ ಟೀಮ್ ಇಂಡಿಯಾ

India to play their first ever day and night test match against Bangladesh | Oneindia Kannada
Virat Kohli & Co to play maiden Day-Night Test at Eden Gardens

ನವದೆಹಲಿ, ಅಕ್ಟೋಬರ್ 30: ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ವಿರಾಟ್ ಕೊಹ್ಲಿ ಪಡೆ ಚೊಚ್ಚಲ ಬಾರಿಗೆ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಆಡಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ವಿಚಾರವನ್ನು ಖಾತರಿಪಡಿಸಿದ್ದಾರೆ. ನವೆಂಬರ್ 22ರಂದು ಈ ಪಂದ್ಯ ನಡೆಯಲಿದೆ.

ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡಕ್ಕೆ ಭಯೋತ್ಪಾದನಾ ಬೆದರಿಕೆ!ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡಕ್ಕೆ ಭಯೋತ್ಪಾದನಾ ಬೆದರಿಕೆ!

ಬಾಂಗ್ಲಾ ಕ್ರಿಕೆಟಿಗರು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ವಿರುದ್ಧ ಬೇಡಿಕೆಗಳನ್ನಿಟ್ಟು ಮುಷ್ಕರ ಹೂಡಿದ್ದರು. ಆ ಬಳಿಕ ಬಿಸಿಬಿ ಆಟಗಾರರನ್ನು ಮನವೊಲಿಸುವಲ್ಲಿ ಯಶಶ್ವಿಯಾಗಿತ್ತು. ಆಟಗಾರರ ಮುಷ್ಕರ ಕೊನೆಗೊಳ್ಳುತ್ತಲೇ ಗಂಗೂಲಿ, ಪಿಂಕ್‌ ಬಾಲ್ ಟೆಸ್ಟ್ ನಡೆಸುವ ಬಗ್ಗೆ ಬಿಸಿಬಿ ಜೊತೆ ಸಭೆ ನಡೆಸಿದ್ದರು. ಬಿಸಿಬಿಯಿಂದ ಗ್ರೀನ್ ಸಿಗ್ನಲ್ ಕೂಡ ಲಭಿಸಿತ್ತು.

ಆಲ್ ರೌಂಡರ್ ಶಕೀಬ್ ಅಲ್ ಹಸನ್‌ಗೆ 2 ವರ್ಷಗಳ ನಿಷೇಧ ವಿಧಿಸಿದ ಐಸಿಸಿಆಲ್ ರೌಂಡರ್ ಶಕೀಬ್ ಅಲ್ ಹಸನ್‌ಗೆ 2 ವರ್ಷಗಳ ನಿಷೇಧ ವಿಧಿಸಿದ ಐಸಿಸಿ

ಪಂದ್ಯದ ವೇಳೆ ಒಲಿಂಪಿಕ್ ದಂತಕತೆಗಳಾದ ಶೂಟರ್ ಅಭಿನವ್ ಬಿಂದ್ರಾ, ಬಾಕ್ಸರ್ ಮೇರಿ ಕೋಮ್, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಮೊಲೆ ಕ್ಯಾನ್ಸರ್ ಕುರಿತ ಜಾಗೃತಿ ಮೂಡಿಸಲು ಪಿಂಕ್ ಬಾಲ್‌ ಟೆಸ್ಟ್ ಆಯೋಜಿಸಲಾಗುತ್ತದೆ.

ಎಂಎಸ್ ಧೋನಿ ನೆನಪಿಸಿದ ಆಸೀಸ್‌ನ ಗ್ಲೆನ್ ಮ್ಯಾಕ್ಸ್‌ವೆಲ್: ವೈರಲ್ ವಿಡಿಯೋಎಂಎಸ್ ಧೋನಿ ನೆನಪಿಸಿದ ಆಸೀಸ್‌ನ ಗ್ಲೆನ್ ಮ್ಯಾಕ್ಸ್‌ವೆಲ್: ವೈರಲ್ ವಿಡಿಯೋ

ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾ ಕ್ರಿಕೆಟ್‌ ತಂಡ, ಆತಿಥೇಯ ಭಾರತದ ವಿರುದ್ಧ 3 ಪಂದ್ಯಗಳ ಟಿ20 ಮತ್ತು 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಬಾಂಗ್ಲಾ ಆಲ್ ರೌಂಡರ್ ಶಕೀಬ್ ಅಲ್ ಹಸನ್ 2 ವರ್ಷಗಳ ನಿಷೇಧಕ್ಕೀಡಾಗಿರುವುದರಿಂದ ಶಕೀಬ್ ಬದಲು ಮಹಮುದುಲ್ಲ ರಿಯಾದ್‌ಗೆ ಟಿ20 ನಾಯಕತ್ವ, ಮೊಮೀನುಲ್ಲ ಹಕ್‌ಗೆ ಟೆಸ್ಟ್‌ ನಾಯಕತ್ವ ವಹಿಸಲಾಗಿದೆ.

Story first published: Wednesday, October 30, 2019, 9:18 [IST]
Other articles published on Oct 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X