ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ

Virat Kohli Completed 500 FOURS In his IPL career

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ 500 ಫೋರ್ಸ್ ಬಾರಿಸಿದ ದಾಖಲೆ ಪೂರೈಸಿಕೊಂಡಿದ್ದಾರೆ. ಬುಧವಾರ (ಅಕ್ಟೋಬರ್ 21) ನಡೆದ ಐಪಿಎಲ್ 39ನೇ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ತೋರಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸ್ಫೂರ್ತಿಯ ಸಂದೇಶ ಬರೆದ ರವೀಂದ್ರ ಜಡೇಜಾಇನ್‌ಸ್ಟಾಗ್ರಾಮ್‌ನಲ್ಲಿ ಸ್ಫೂರ್ತಿಯ ಸಂದೇಶ ಬರೆದ ರವೀಂದ್ರ ಜಡೇಜಾ

ಅಬುಧಾಬಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ವಿರಾಟ್ ಕೊಹ್ಲಿ 18 ರನ್ ಬಾರಿಸಿದರು. ಇದರಲ್ಲಿ 2 ಫೊರ್‌ಗಳು ಕೂಡ ಸೇರಿತ್ತು. ಪಂದ್ಯದಲ್ಲಿ ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧ ಭರ್ಜರಿ 8 ವಿಕೆಟ್‌ಗಳಿಂದ ಸುಲಭ ಜಯ ಗಳಿಸಿತು.

ಐಪಿಎಲ್‌ನಲ್ಲಿ ಕೆಟ್ಟ ದಾಖಲೆ ನಿರ್ಮಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ಐಪಿಎಲ್‌ನಲ್ಲಿ ಕೆಟ್ಟ ದಾಖಲೆ ನಿರ್ಮಿಸಿದ ಕೋಲ್ಕತ್ತಾ ನೈಟ್ ರೈಡರ್ಸ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್, ಇಯಾನ್ ಮಾರ್ಗನ್ 30, ಲಾಕಿ ಫಾರ್ಗುಸನ್ 19 ರನ್‌ನೊಂಧಿಗೆ 20 ಓವರ್‌ಗೆ 8 ವಿಕೆಟ್ ಕಳೆದು 84 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್‌ಸಿಬಿ, ದೇವದತ್ ಪಡಿಕ್ಕಲ್ 25, ಆ್ಯರನ್ ಫಿಂಚ್ 16, ಗುರುಕೀರತ್ ಸಿಂಗ್ 21, ಕೊಹ್ಲಿ 18 ರನ್‌ನೊಂದಿಗೆ 13.3 ಓವರ್‌ಗೆ 2 ವಿಕೆಟ್ ಕಳೆದು 85 ರನ್ ಗಳಿಸಿತು.

ಈವರೆಗೆ ಒಟ್ಟು 187 ಐಪಿಎಲ್ ಪಂದ್ಯಗಳನ್ನಾಡಿರುವ ವಿರಾಟ್ 38.77ರ ಸರಾಸರಿಯಲ್ಲಿ 5777 ರನ್ ಗಳಿಸಿದ್ದಾರೆ. ಇದರಲ್ಲಿ 500 ಫೋರ್ಸ್, 199 ಸಿಕ್ಸರ್‌ಗಳು ಸೇರಿವೆ. ಅಂದ್ಹಾಗೆ ಐಪಿಎಲ್‌ನಲ್ಲಿ 500 ಫೋರ್ಸ್ ಬಾರಿಸಿದ ಎರಡನೇ ಆಟಗಾರ ಕೊಹ್ಲಿ. ಶಿಖರ್ ಧವನ್ ಈಗಾಗಲೇ 575 ಫೋರ್‌ಗಳ ದಾಖಲೆ ಹೊಂದಿದ್ದಾರೆ.

Story first published: Thursday, October 22, 2020, 10:12 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X