ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತ್ವರಿಗತಿಯಲ್ಲಿ 18 ಸಾವಿರ ರನ್, ಲಾರಾ ದಾಖಲೆ ಮುರಿದ ಕೊಹ್ಲಿ

By Mahesh
Virat Kohli completes 18000 runs in international cricket

ಬೆಂಗಳೂರು, ಸೆಪ್ಟೆಂಬರ್ 09: ಇಂಗ್ಲೆಂಡ್​ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಅವರು ವಿಶ್ವದಾಖಲೆ ಬರೆದಿದ್ದಾರೆ. ತ್ವರಿತಗತಿಯಲ್ಲಿ 18,000ರನ್ ಗಳಿಸಿದ ಮೊಟ್ಟ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನ ಎಲ್ಲ ಮಾದರಿಗಳಲ್ಲೂ ಗಳಿಸಿರುವ ತನರನ್ ಲೆಕ್ಕ ಹಾಕಿದರೆ ಕ್ರಿಕೆಟ್​​ ದಿಗ್ಗಜ ಬ್ರಿಯಾನ್ ಲಾರಾ ಅವರು ಅತಿ ವೇಗವಾಗಿ 18,000ರನ್ ಗಳಿಸಿದ್ದರು. ಈ ದಾಖಲೆಯನ್ನು ಕೊಹ್ಲಿ ಉತ್ತಮಪಡಿಸಿದ್ದಾರೆ.

ಬ್ರಿಯಾನ್​ ಲಾರಾ 411 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರು. ಸಚಿನ್​ ತೆಂಡೂಲ್ಕರ್​ 18,000 ರನ್​ ಗಳಿಸಲು 412 ಇನ್ನಿಂಗ್ಸ್​ಗಳನ್ನು ತೆಗೆದುಕೊಂಡಿದ್ದರು. ಕೊಹ್ಲಿ 400ಕ್ಕಿಂತ ಕಡಿಮೆ ಅಂದರೆ 382 ಇನ್ನಿಂಗ್ಸ್​ಗಳಲ್ಲೇ 18,000 ರನ್​ ಗಡಿ ದಾಟಿದ್ದಾರೆ.

ತ್ವರಿತಗತಿ 18,000ರನ್ ಟಾಪ್ 05 ಸಾಧಕರು

ತ್ವರಿತಗತಿ 18,000ರನ್ ಟಾಪ್ 05 ಸಾಧಕರು

* ವಿರಾಟ್ ಕೊಹ್ಲಿ(ಭಾರತ) 382 ಇನ್ನಿಂಗ್ಸ್
* ಬ್ರಿಯಾನ್ ಲಾರಾ(ವೆಸ್ಟ್ ಇಂಡೀಸ್) 411 ಇನ್ನಿಂಗ್ಸ್
* ಸಚಿನ್ ತೆಂಡೂಲ್ಕರ್ (ಭಾರತ್) 412 ಇನ್ನಿಂಗ್ಸ್
* ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 422 ಇನ್ನಿಂಗ್ಸ್
* ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ) 434 ಇನ್ನಿಂಗ್ಸ್

ಕೊಹ್ಲಿ ರನ್ ಸಾಧನೆ

15 ಸಾವಿರ ರನ್ (333 ಇನ್ನಿಂಗ್ಸ್)
16 ಸಾವಿರ ರನ್ (350 ಇನ್ನಿಂಗ್ಸ್)
17 ಸಾವಿರ ರನ್ (363 ಇನ್ನಿಂಗ್ಸ್)
18 ಸಾವಿರ ರನ್ (382 ಇನ್ನಿಂಗ್ಸ್)

ಅತಿ ಹೆಚ್ಚು ರನ್ ಗಳಿಕೆ ಪಟ್ಟಿಯಲ್ಲಿ ಸಾಧಕರು

ಅತಿ ಹೆಚ್ಚು ರನ್ ಗಳಿಕೆ ಪಟ್ಟಿಯಲ್ಲಿ ಸಾಧಕರು

ಸಚಿನ್ ತೆಂಡೂಲ್ಕರ್ 782 ಇನ್ನಿಂಗ್ಸ್(ಅತಿ ಹೆಚ್ಚು ಇನ್ನಿಂಗ್ಸ್), 34357 (ಅತಿ ಹೆಚ್ಚು ರನ್), 100 ಶತಕ (ಅತಿ ಹೆಚ್ಚು ಶತಕ) ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

* ಕುಮಾರ ಸಂಗಕ್ಕಾರ 666 ಇನ್ನಿಂಗ್ಸ್ ನಲ್ಲಿ 28016ರನ್
* ರಿಕಿ ಪಾಂಟಿಂಗ್ 668 ಇನ್ನಿಂಗ್ಸ್ ನಲ್ಲಿ 27483 ರನ್
* ಮಹೇಲ ಜಯವರ್ದನೆ 725 ಇನ್ನಿಂಗ್ಸ್ ನಲ್ಲಿ 25957ರನ್
* ಜಾಕ್ ಕಾಲಿಸ್ 617 ಇನ್ನಿಂಗ್ಸ್ ನಲ್ಲಿ 25534ರನ್
* ರಾಹುಲ್ ದ್ರಾವಿಡ್ : 605 ಇನ್ನಿಂಗ್ಸ್ ನಲ್ಲಿ 24208 ರನ್
* ಬ್ರಿಯಾನ್ ಲಾರಾ : 521 ಇನ್ನಿಂಗ್ಸ್ ನಲ್ಲಿ 22358ರನ್
* ಸನತ್ ಜಯಸೂರ್ಯ 651 ಇನ್ನಿಂಗ್ಸ್ ನಲ್ಲಿ 21032ರನ್
* ಶಿವನಾರಾಯಣ್ ಚಂದ್ರಪಾಲ್ 553ಇನ್ನಿಂಗ್ಸ್ ನಲ್ಲಿ 20988ರನ್
* ಇಂಜಮಾಮ್ ಉಲ್ ಹಕ್ 551 ಇನ್ನಿಂಗ್ಸ್ ನಲ್ಲಿ 20580ರನ್

ಭಾರತದ 4ನೇ ಬ್ಯಾಟ್ಸ್​ಮನ್

ಭಾರತದ 4ನೇ ಬ್ಯಾಟ್ಸ್​ಮನ್

ಟೀಂ ಇಂಡಿಯಾ ಪರ ಸಾಧಕರು
* ಸಚಿನ್ ತೆಂಡೂಲ್ಕರ್: 782 ಇನ್ನಿಂಗ್ಸ್ ಗಳಲ್ಲಿ 34,357 ರನ್
* ರಾಹುಲ್ ದ್ರಾವಿಡ್ : 605 ಇನ್ನಿಂಗ್ಸ್ ಗಳಲ್ಲಿ 24,208 ರನ್
* ಸೌರವ್ ಗಂಗೂಲಿ: 488 ಇನ್ನಿಂಗ್ಸ್ ಗಳಲ್ಲಿ 18,575 ರನ್
* ವಿರಾಟ್ ಕೊಹ್ಲಿ: 382 ಇನ್ನಿಂಗ್ಸ್ 18028ರನ್

Story first published: Sunday, September 9, 2018, 19:58 [IST]
Other articles published on Sep 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X