ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಗೆ ಭಾರತ ಪಂದ್ಯ ಗೆದ್ದೇ ಗೆಲ್ಲುವ ಭರವಸೆಯಿತ್ತು , ಯಾಕ್ ಗೊತ್ತಾ!

Virat Kohli very much confident about Winning | Oneindia Kannada
Virat Kohli Confident Of India Winning

ನ್ಯೂಜಿಲ್ಯಾಂಡ್ ವಿರುದ್ಧದ ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ಮಾಡಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್‌ಗಿಳಿದ ನ್ಯೂಜಿಲ್ಯಾಂಡ್ ಭರ್ಜರಿಯಾಗಿ ಬ್ಯಾಟಿಂಗ್‌ ಮಾಡಲು ಆರಂಭಿಸಿತು.

ನ್ಯೂಜಿಲ್ಯಾಂಡ್‌ ತಂಡದ ಬ್ಯಾಟ್ಸ್‌ಮನ್‌ಗಳು ಬಾರಿಸಿದ್ದೆಲ್ಲಾ ಬೌಂಡರಿ ಗೆರೆಯನ್ನು ದಾಟುತ್ತಿತ್ತು. ಇದನ್ನು ನೋಡಿದ ಅಭಿಮಾನಿಗಳು ನಾಯಕ ಕೋಹ್ಲಿ ಫೀಲ್ಡಿಂಗ್ ಆಯ್ದು ತಪ್ಪು ಮಾಡಿದರೇನೋ ಅನ್ನಿಸಲಾರಂಭಿಸಿತು.

ಕ್ರಿಕೆಟ್‌ ಅಭಿಮಾನಿಗಳು ಮಾತ್ರವಲ್ಲ. ಟೀಮ್ ಇಂಡಿಯಾ ಆಟಗಾರರ ಮುಖದಲ್ಲೂ ಮಂದಹಾಸವೇ ಮರೆಯಾಗಿತ್ತು. ಯಾಕೋ ಯಡವಟ್ಟಾಗುತ್ತಿದೆಯೇನೋ ಎಂಬ ಅನುಮಾನಗಳು ಕಾಡಲಾರಂಭಿಸಿತು. ಆದರೆ ಕೊಹ್ಲಿ ಮಾತ್ರ ಗೆದ್ದೇ ಗೆಲ್ಲುವ ಭರವಸೆಯಲ್ಲಿದ್ದರು. ಯಾಕೆ ಗೊತ್ತಾ..!

ಆಕ್ಲೆಂಡ್ ಇತಿಹಾಸವೇ ಕಾರಣ:

ಆಕ್ಲೆಂಡ್ ಇತಿಹಾಸವೇ ಕಾರಣ:

ಇದಕ್ಕೆ ಕಾರಣ ಆಕ್ಲಂಡ್ ಮೈದಾನದ ಇತಿಹಾಸ. ಟಿ20 ಇತಿಹಾಸದಲ್ಲಿ ದೊಡ್ಡ ಗುರಿಯನ್ನು ಬೆನ್ನತ್ತಿದ ದಾಖಲೆ ಇರುವುದು ಇದೇ ಮೈದಾನದಲ್ಲಿ. ಬರೊಬ್ಬರಿ 244 ರನ್‌ಗಳ ಗುರಿಯನ್ನು ಬೆನ್ನತ್ತಿದ ದಾಖಲೆಗೆ ಇದೇ ಆಕ್ಲಂಡ್‌ನ ಈಡನ್ ಪಾರ್ಕ್ ಸಾಕ್ಷಿಯಾದ ಇತಿಹಾಸವಿದೆ. ಇದು ಟೀಮ್ ಇಂಡಿಯಾ ನಾಯಕನ ಭರವಸೆಗೆ ಕಾರಣವಾಗಿತ್ತು.

ನ್ಯೂಜಿಲ್ಯಾಂಡ್ ಬಾರಿಸಿದ್ದು ಬೃಹತ್ ಮೊತ್ತ:

ನ್ಯೂಜಿಲ್ಯಾಂಡ್ ಬಾರಿಸಿದ್ದು ಬೃಹತ್ ಮೊತ್ತ:

ಆ ದಾಖಲೆಯ ಪಂದ್ಯ ನಡೆದಿದ್ದು ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಮಧ್ಯೆ. ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಬರೊಬ್ಬರಿ 243 ರನ್‌ಗಳನ್ನು ಬಾರಿಸಿತ್ತು. ಈ ಬೃಹತ್ ಮೊತ್ತವನ್ನು ನೋಡಿದ ಅಭಿಮಾನಿಗಳು ನ್ಯೂಜಿಲ್ಯಾಂಡ್ ಈ ಪಂದ್ಯವನ್ನು ಗೆದ್ದೇ ಗೆಲ್ಲುತ್ತೆ ಅಂದು ಕೊಂಡಿದ್ದರು. ಆದರೆ ಆ ಪಂದ್ಯದಲ್ಲಾಗಿದ್ದೇ ಬೇರೆ.

ಊಹಿಸದ ರೀತಿಯಲ್ಲಿ ಆಸಿಸ್ ತಿರುಗೇಟು

ಊಹಿಸದ ರೀತಿಯಲ್ಲಿ ಆಸಿಸ್ ತಿರುಗೇಟು

ಆಸ್ಟ್ರೇಲಿಯಾ ಯಾರೂ ಊಹಿಸದ ರೀತಿಯಲ್ಲಿ ಈ ಪಂದ್ಯವನ್ನು ಗೆದ್ದು ಇತಿಹಾಸವನ್ನು ನಿರ್ಮಿಸಿತ್ತು. ನ್ಯೂಜಿಲ್ಯಾಂಡ್ ಪರವಾಗಿ ಕೇವಲ 49 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದ ಮಾರ್ಟಿನ್ ಗಪ್ಟಿಲ್ ಸಾಹಸವನ್ನು ಆಸ್ಟ್ರೇಲಿಯನ್ ದಾಂಡಿಗರು ನುಚ್ಚು ನೂರು ಮಾಡಿದ್ದರು. ಆಸ್ಟ್ರೇಲಿಯಾ ಪರವಾಗಿ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಶಾರ್ಟ್ ಸ್ಪೋಟಕ ಅರ್ಧ ಶತಕ ಬಾರಿಸಿ ನ್ಯೂಜಿಲ್ಯಾಂಡ್ ಕನಸನ್ನು ಭಗ್ನಗೊಳಿಸಿದ್ದರು.

ನಾಯಕನ ನಂಬಿಕೆ ನಿಜವಾಯ್ತು:

ನಾಯಕನ ನಂಬಿಕೆ ನಿಜವಾಯ್ತು:

ಟೀಮ್ ಇಂಡಿಯಾ ನಾಯಕನ ಭರವಸೆಗೆ ಇದೇ ಕಾರಣವಾಗಿತ್ತು. ನ್ಯೂಜಿಲ್ಯಾಂಡ್ ಎಷ್ಟೇ ರನ್ ಬಾರಿಸಲಿ ಟೀಮ್ ಇಂಡಿಯಾ ಚೇಸ್ ಮಾಡೇ ಮಾಡುತ್ತೆ ಎನ್ನವ ನಂಬಿಕೆಯಿತ್ತು. ಟೀಮ್ ಇಂಡಿಯಾ ನಾಯಕನ ನಂಬಿಕೆಯಂತೆಯೇ ಮೊದಲ ಪಂದ್ಯ ಟೀಮ್ ಇಂಡಿಯಾ ಪಾಲಾಗಿದೆ.

Story first published: Saturday, January 25, 2020, 11:30 [IST]
Other articles published on Jan 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X