ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧದ ಏಕದಿನಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳ ಹೆಸರಿಸಿದ ಕೊಹ್ಲಿ

Virat Kohli confirms Rohit Sharma and Shikhar Dhawan will be opening in the ODI series

ಪೂಣೆ: ಇತ್ತೀಚೆಗಷ್ಟೇ ಭಾರತ-ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20ಐ ಸರಣಿ ಮುಕ್ತಾಯಗೊಂಡಿದ್ದು, ಮುಂದೆ ವಿರಾಟ್ ಕೊಹ್ಲಿ ಪಡೆದ ಆಂಗ್ಲರೆದುರು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಏಕದಿನ ಸರಣಿಯಲ್ಲಿ ಭಾರತ ಪರ ಆರಂಭಿಕರಾಗಿ ಯಾರು ಆಡಲಿದ್ದಾರೆ ಅನ್ನೋದನ್ನು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಭಾರತ-ಇಂಗ್ಲೆಂಡ್ ಏಕದಿನ ಸರಣಿ ಮಾರ್ಚ್ 23ರಿಂದ ಪೂಣೆಯ ಮಹಾರಾಷ್ಟ್ರ ಕ್ರಿಕೆಟ್ ಸೋಸಿಯೇಶನ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ.

ಆರ್‌ಸಿಬಿ ಪರ ಆರಂಭಿಕರಾಗಿ ಆಡುವುದಾಗಿ ವಿರಾಟ್ ಕೊಹ್ಲಿ ಘೋಷಣೆ!ಆರ್‌ಸಿಬಿ ಪರ ಆರಂಭಿಕರಾಗಿ ಆಡುವುದಾಗಿ ವಿರಾಟ್ ಕೊಹ್ಲಿ ಘೋಷಣೆ!

ಪೂಣೆಯಲ್ಲಿ ಆರಂಭಗೊಳ್ಳಲಿರುವ ಏಕದಿನ ಸರಣಿಗೂ ಮುನ್ನ ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಮುಂಬರಲಿರುವ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದಲ್ಲಿ ಆರಂಭಿಕರಾಗಿ ಅನುಭವಿ ಓಪನರ್‌ಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಆಡಲಿದ್ದಾರೆ ಎಂದಿದ್ದಾರೆ.

ಏಕದಿನದಲ್ಲಿ ಯಾವುದೇ ಅನುಮಾನವಿಲ್ಲ

ಏಕದಿನದಲ್ಲಿ ಯಾವುದೇ ಅನುಮಾನವಿಲ್ಲ

'ಖಂಡಿತವಾಗಿಯೂ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಆರಂಭಿಸುತ್ತಾರೆ. ಏಕದಿನ ಕ್ರಿಕೆಟ್‌ ವಿಚಾರಕ್ಕೆ ಬಂದರೆ ಅಲ್ಲಿ ಯಾವುದೇ ಅನುಮಾನವಿಲ್ಲ. ಇಬ್ಬರೂ ಕಳೆದ ಕೆಲವಾರು ವರ್ಷಗಳಿಂದ ಉತ್ತಮವಾಗಿ ಆರಂಭಿಕ ಸ್ಥಾನದಲ್ಲಿ ಆಡುತ್ತಿದ್ದಾರೆ,' ಎಂದು ಹೇಳಿದ್ದಾರೆ.

ವಿಫಲರಾಗಿದ್ದ ಶಿಖರ್ ಧವನ್

ವಿಫಲರಾಗಿದ್ದ ಶಿಖರ್ ಧವನ್

ಇಂಗ್ಲೆಂಡ್ ವಿರುದ್ಧದ ಆರಂಭಿಕ ಟಿ20ಐನಲ್ಲಿ ಆಡಿದ್ದ ಧವನ್ 4 ರನ್ ಬಾರಿಸಿದ್ದರು. ಆ ಬಳಿಕ ಧವನ್‌ಗೆ ಅವಕಾಶ ಸಿಗದೆ ಬೆಂಚ್ ಕಾಯಬೇಕಾಗಿ ಬಂದಿತ್ತು. ಮುಂದಿನ ಪಂದ್ಯಗಳಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ಆಡಿದ್ದರು. ರಾಹುಲ್ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದಾಗ ಕೊನೇ ಪಂದ್ಯದಲ್ಲಿ ಕೊಹ್ಲಿ ಆರಂಭಿಕರಾಗಿ ಯಶಸ್ವಿಯಾಗಿ ಆಡಿದ್ದರು.

ಐಪಿಎಲ್‌ನಲ್ಲೂ ಕೊಹ್ಲಿ ಓಪನಿಂಗ್

ಐಪಿಎಲ್‌ನಲ್ಲೂ ಕೊಹ್ಲಿ ಓಪನಿಂಗ್

ಕೊನೇ ಟಿ20ಐನಲ್ಲಿ 52 ಎಸೆತಗಳಲ್ಲಿ 80 ರನ್ ಬಾರಿಸಿದ್ದ ಕೊಹ್ಲಿ ಮುಂದಿನ ಪಂದ್ಯಗಳಲ್ಲೂ ತಾನು ರೋಹಿತ್ ಅವರೊಂದಿಗೆ ಆರಂಭಿಸುವುದಾಗಿ ಹೇಳಿದ್ದರು. ಅಲ್ಲದೆ ಐಪಿಎಲ್‌ನಲ್ಲೂ ಆರ್‌ಸಿಬಿ ಪರ ಓಪನಿಂಗ್ ಬ್ಯಾಟಿಂಗ್ ಮಾಡಲು ಬಯಸಿರುವುದಾಗಿ ಹೇಳಿದ್ದರು. ಹೀಗಾಗಿ ಏಕದಿನದಲ್ಲೂ ಕೊಹ್ಲಿಯೇ ಆರಂಭಿಕರಾಗಿ ಆಡ್ತಾರೋ ಎನ್ನುವ ಅನುಮಾನ ಮೂಡಿಸಿತ್ತು. ಆದರೆ ಕೊಹ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಂದ್ಹಾಗೆ ಕೊನೇ ಟಿ20ಐನಲ್ಲಿ ಭಾರತ 36 ರನ್ ಜಯ ಗಳಿಸಿತ್ತಲ್ಲದೆ, ಸರಣಿಯನ್ನೂ 3-2ರಿಂದ ಗೆದ್ದಿತ್ತು.

Story first published: Monday, March 22, 2021, 17:12 [IST]
Other articles published on Mar 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X