ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್‌ ಆಡಲು ರೆಡಿಯಿದ್ದೇನೆ: ಆಯ್ಕೆಗಾರರಿಗೆ ಕೊಹ್ಲಿ ಸಂದೇಶ!

Virat kohli

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂಬರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದಲೂ ವಿಶ್ರಾಂತಿ ಪಡೆದಿದ್ದು, ಈ ಮೂಲಕ ಸತತ ಮೂರು ಸರಣಿಗಳಲ್ಲಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ.

ಇಂಗ್ಲೆಂಡ್‌ ಪ್ರವಾಸದ ಬಳಿಕ ಕೆರಿಬಿಯನ್ ನಾಡಿಗೆ ಕಾಲಿಡದ ವಿರಾಟ್ ಕೊಹ್ಲಿ, ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಆಡದಿರಲು ನಿರ್ಧರಿಸಿದ್ದಾರೆ.ಹೀಗಾಗಿಯೇ ಆಯ್ಕೆಗಾರರು ಕೊಹ್ಲಿಯನ್ನು ಹೊರಗಿಟ್ಟು 15 ಸದಸ್ಯರ ಸ್ಕ್ವಾಡ್ ರಚಿಸಿದ್ದಾರೆ.

ಕೊಹ್ಲಿ ಅಷ್ಟೇ ಅಲ್ಲದೆ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಕೂಡ ವಿಶ್ರಾಂತಿ ಪಡೆದಿರುವುದು ಯುವ ಆಟಗಾರರಿಗೆ ಅವಕಾಶ ಒದಗಿಸಿದೆ.

ಟೀಂ ಇಂಡಿಯಾವನ್ನ ಮುನ್ನಡೆಸಲಿರುವ ಶಿಖರ್ ಧವನ್

ಟೀಂ ಇಂಡಿಯಾವನ್ನ ಮುನ್ನಡೆಸಲಿರುವ ಶಿಖರ್ ಧವನ್

ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನ ಯಶಸ್ವಿಯಾಗಿ ಮುನ್ನಡೆಸಿ 3-0 ಅಂತರದ ಭರ್ಜರಿ ಗೆಲುವು ದಾಖಲಿಸಿದ ಶಿಖರ್ ಧವನ್, ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲೂ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ.

ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದು, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಕೂಡ ತಂಡದಿಂದ ಹೊರಗುಳಿದಿದಿದ್ದಾರೆ. ಕೆ.ಎಲ್ ರಾಹುಲ್ ಕೋವಿಡ್‌ ಕಾರಣದಿಂದ ವಿಂಡೀಸ್ ಪ್ರವಾಸ ಮಿಸ್‌ ಮಾಡಿಕೊಂಡಿದ್ದರು. ಆದ್ರೆ ಜಿಂಬಾಬ್ವೆ ಸರಣಿಗೆ ಏಕೆ ಆಯ್ಕೆ ಆಗಲಿಲ್ಲ ಅನ್ನುವುದರ ಹಿನ್ನಲೆಯಲ್ಲಿ ರಾಹುಲ್ ತನ್ನ ಆರೋಗ್ಯ ಮತ್ತು ಫಿಟ್ನೆಸ್ ಅಪ್‌ಡೇಟ್ ತಿಳಿಸಿದ್ದಾರೆ.

IND vs WI 2ನೇ ಟಿ20: ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಗೆಲುವಿನ ರಣತಂತ್ರವೇನು?

ಜಿಂಬಾಬ್ವೆ ವಿರುದ್ಧ ಕೊಹ್ಲಿ ಆಡಬಹುದು ಎಂದು ವರದಿಯಾಗಿತ್ತು!

ಜಿಂಬಾಬ್ವೆ ವಿರುದ್ಧ ಕೊಹ್ಲಿ ಆಡಬಹುದು ಎಂದು ವರದಿಯಾಗಿತ್ತು!

ಈ ಮೊದಲು ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡಬಹುದು ಎಂದು ವರದಿಯಾಗಿತ್ತು. ವಿರಾಟ್ ಕಳಪೆ ಫಾರ್ಮ್‌ನಿಂದ ಹೊರಬರಲು ಜಿಂಬಾಬ್ವೆ ವಿರುದ್ಧದ ಸರಣಿ ನೆರವಾಗಬಹುದು ಎನ್ನಲಾಗಿತ್ತು. ಆದ್ರೆ ಕೊಹ್ಲಿ ಈ ಸರಣಿಯಿಂದಲೂ ಹೊರಗುಳಿದು ಆಶ್ಚರ್ಯ ಮೂಡಿಸಿದ್ದಾರೆ.

ಐಪಿಎಲ್ 2022ರ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನ್ ಬರ ಎದುರಿಸಿದ್ದ ಕೊಹ್ಲಿ ಆರು ಅಂತರಾಷ್ಟ್ರೀಯ ಇನ್ನಿಂಗ್ಸ್‌ನಲ್ಲಿ ಗರಿಷ್ಠ 20 ರನ್ ಕಲೆಹಾಕಿದರು.

ತನ್ನ ಫಿಟ್ನೆಸ್ ಕುರಿತು ಪ್ರಮುಖ ಮಾಹಿತಿ ನೀಡಿದ ಕೆ.ಎಲ್‌ ರಾಹುಲ್‌: ಟೀಂ ಇಂಡಿಯಾ ಕಂಬ್ಯಾಕ್ ಯಾವಾಗ?

ಆಯ್ಕೆಗಾರರೊಂದಿಗೆ ಕೊಹ್ಲಿ ಮಾತು, ಏಷ್ಯಾಕಪ್‌ ಆಡುವೆ!

ಆಯ್ಕೆಗಾರರೊಂದಿಗೆ ಕೊಹ್ಲಿ ಮಾತು, ಏಷ್ಯಾಕಪ್‌ ಆಡುವೆ!

ವಿಂಡೀಸ್ ವಿರುದ್ಧ ಸರಣಿಯಲ್ಲಿ ಸ್ವತಃ ವಿಶ್ರಾಂತಿ ಬಯಸಿದ್ದ ವಿರಾಟ್ ಕೊಹ್ಲಿ ಮುಂಬರುವ ಏಷ್ಯಾ ಕಪ್‌ನಲ್ಲಿ ಆಡುವ ಮೊದಲು ಮತ್ತಷ್ಟು ವಿಶ್ರಾಂತಿ ಬಯಸಿದ್ದಾರೆ. ಜಿಂಬಾಬ್ವೆ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿರುವ ಕೊಹ್ಲಿ ಜಿಂಬಾಬ್ವೆ ಸರಣಿ ಬಳಿಕ ಏಷ್ಯಾಕಪ್‌ಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ.

"ಏಷ್ಯಾ ಕಪ್ ನಂತರ ಲಭ್ಯವಾಗಲಿದ್ದಾರೆ ಎಂದು ವಿರಾಟ್ ಆಯ್ಕೆ ಸಮಿತಿಗೆ ತಿಳಿಸಿದ್ದಾರೆ. ಏಷ್ಯಾಕಪ್‌ನಿಂದ ಟಿ20 ವಿಶ್ವಕಪ್‌ ಮುಗಿಯುವವರೆಗೂ ಮೊದಲ ತಂಡದ ಆಟಗಾರರಿಗೆ ಹೆಚ್ಚಿನ ವಿಶ್ರಾಂತಿ ಸಿಗುವುದಿಲ್ಲ. ಪರಿಣಾಮವಾಗಿ, ವಿಂಡೀಸ್ ಪ್ರವಾಸದ ನಂತರ ಅವರು ವಿಶ್ರಾಂತಿ ಪಡೆಯಲು ಎರಡು ವಾರಗಳ ಕಾಲಾವಕಾಶವಿದೆ "ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿದರು.

ಹರಾರೆ ಸ್ಪೋರ್ಟ್ಸ್ ಕ್ಲಬ್ ಭಾರತ ಮತ್ತು ಜಿಂಬಾಬ್ವೆ ನಡುವಿನ ಎಲ್ಲಾ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಆಗಸ್ಟ್ 18 ರಂದು ಭಾರತದ ಜಿಂಬಾಬ್ವೆ ಪ್ರವಾಸ ಪ್ರಾರಂಭವಾಗಲಿದೆ. ನಂತರದ ಪಂದ್ಯಗಳು ಆಗಸ್ಟ್‌ 20, 22ರಂದು ನಡೆಯಲಿದೆ. ಜಿಂಬಾಬ್ವೆ ಪ್ರವಾಸ ಮುಗಿದ ನಾಲ್ಕು ದಿನಗಳ ನಂತರ ಏಷ್ಯಾಕಪ್ ಆರಂಭವಾಗಲಿದೆ (ಆಗಸ್ಟ್ 27).

T20 ಸರಣಿಯಿಂದ KL ರಾಹುಲ್ ಗೆ ಗೇಟ್ ಪಾಸ್!! ಸಂಜು ಸ್ಯಾಮ್ಸನ್ ಗೆ ಹೊಡೀತು ಲಕ್.. | *Cricket | OneIndia Kannada
ಜಿಂಬಾಬ್ವೆ ವಿರುದ್ಧ ಸರಣಿಗೆ ಭಾರತದ ಸ್ಕ್ವಾಡ್‌

ಜಿಂಬಾಬ್ವೆ ವಿರುದ್ಧ ಸರಣಿಗೆ ಭಾರತದ ಸ್ಕ್ವಾಡ್‌

ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ದ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್

Story first published: Sunday, July 31, 2022, 18:17 [IST]
Other articles published on Jul 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X