ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೇಡದ ದಾಖಲೆ ಬರೆದ ವಿರಾಟ್ ಕೊಹ್ಲಿ

Virat Kohli created unwanted record: James Anderson Dismissed Kohli seven times in tests
ಕಡಿಮೆ ಮೊತ್ತಕ್ಕೆ ಆಲ್ ಔಟ್ ಆಗಿ ಇಂಗ್ಲೆಂಡ್ ವೇಗಿಗಳಿಗೆ ತಲೆಬಾಗಿದ ಭಾರತ | Oneindia Kannada

ಲೀಡ್ಸ್: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೇಡದ ದಾಖಲೆಯೊಂದಕ್ಕೆ ಕಾರಣರಾಗಿದ್ದಾರೆ. ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿ ಅನಗತ್ಯ ದಾಖಲೆಯೊಂದು ನಿರ್ಮಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಬ್ಬನೇ ಬೌಲರ್‌ಗೆ ಹೆಚ್ಚು ಬಾರಿ ವಿಕೆಟ್ ಒಪ್ಪಿಸಿದ ಕೆಟ್ಟ ದಾಖಲೆಗಾಗಿ ಕಿಂಗ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ.

ಕುತೂಹಲಕಾರಿ ಸಂಗತಿಗಳ ಬಿಚ್ಚಿಟ್ಟ ನೀರಜ್ ಚೋಪ್ರಾ ಕೋಚ್ ಕಾಶೀನಾಥ್ ನಾಯ್ಕ್!ಕುತೂಹಲಕಾರಿ ಸಂಗತಿಗಳ ಬಿಚ್ಚಿಟ್ಟ ನೀರಜ್ ಚೋಪ್ರಾ ಕೋಚ್ ಕಾಶೀನಾಥ್ ನಾಯ್ಕ್!

ಲೀಡ್ಸ್‌ನಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ವಿರಾಟ್ ಕೊಹ್ಲಿ ಅನಗತ್ಯ ದಾಖಲೆ ಬರೆದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ಸಾರಿ ವಿರಾಟ್ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆ್ಯಂಡರ್ಸನ್ ಈಗ ಮೊದಲ ಸ್ಥಾನಕ್ಕೇರಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾದ ಕ್ರಿಸ್ ಲಿನ್ ಇದ್ದಾರೆ.

7 ರನ್‌ಗೆ ವಿಕೆಟ್‌ ಒಪ್ಪಿಸಿ ನಿರಾಸೆ ಅನುಭವಿಸಿದ ಕೊಹ್ಲಿ
ಟೀಮ್ ಇಂಡಿಯಾದ ಈಚಿನ ಮಧ್ಯಮ ಕ್ರಮಾಂಕ ಏನೇನೂ ಚೆನ್ನಾಗಿಲ್ಲ. ಅತೀ ದುರ್ಬಲವಾಗಿದೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ. ಅದಕ್ಕೆ ತಕ್ಕಂತ ಈ ಪಂದ್ಯದಲ್ಲೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ನೀರಸ ಬ್ಯಾಟಿಂಗ್‌ ಮುಂದುವರೆಸಿದರು. 4ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ವಿರಾಟ್ ಕೇವಲ 7 ರನ್ ಬಾರಿಸಿ 10.5ನೇ ಓವರ್‌ಗೆ ಜೇಮ್ಸ್ ಆ್ಯಂಡರ್ಸನ್ ಎಸೆತಕ್ಕೆ ಜೋಸ್ ಬಟ್ಲರ್‌ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ನಿರ್ಗಮಿಸಿದರು. ಇನ್ನು ಪೂಜಾರ ಕೂಡ 1 ರನ್‌ಗೆ ಆ್ಯಂಡರ್ಸನ್‌ಗೆ ವಿಕೆಟ್ ನೀಡಿದರೆ, ರಹಾನೆ 18 ರನ್ ಬಾರಿಸಿ ಆಲಿ ರಾಬಿನ್ಸನ್‌ಗೆ ವಿಕೆಟ್ ಒಪ್ಪಿಸಿದರು. ಈ ಔಟ್‌ನೊಂದಿಗೆ ಕೊಹ್ಲಿ ಹೆಸರಿಗೆ ಕೆಟ್ಟ ದಾಖಲೆ ಸೇರಿಕೊಂಡಿದೆ. ಜೇಮ್ಸ್ ಆ್ಯಂಡರ್ಸನ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಒಟ್ಟಾರೆ 7 ಬಾರಿ ಔಟ್ ಆದಂತಾಗಿದೆ. ಆ್ಯಂಡರ್ಸನ್ ಬಿಟ್ಟರೆ ಆಸೀಸ್‌ ಸ್ಪಿನ್ನರ್ ಕ್ರಿಸ್ ಲಿನ್ ಕೂಡ ಕೊಹ್ಲಿಯನ್ನು 7 ಸಾರಿ ಟೆಸ್ಟ್‌ನಲ್ಲಿ ಔಟ್ ಮಾಡಿದ್ದಾರೆ. ತೃತೀಯ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಆರಂಭಿಕ ಇನ್ನಿಂಗ್ಸ್‌ನಲ್ಲಿ 40.4ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 78 ರನ್ ಗಳಿಸಿದೆ.

'ಅರ್ಧಶತಕ ಬಾರಿಸಿದ ಕೊಹ್ಲಿ' ಎನ್ನುತ್ತಾ ವಿರಾಟ್ ಕೊಹ್ಲಿ ಕಾಲೆಳೆದ ಕ್ರೀಡಾ ಪತ್ರಕರ್ತ!'ಅರ್ಧಶತಕ ಬಾರಿಸಿದ ಕೊಹ್ಲಿ' ಎನ್ನುತ್ತಾ ವಿರಾಟ್ ಕೊಹ್ಲಿ ಕಾಲೆಳೆದ ಕ್ರೀಡಾ ಪತ್ರಕರ್ತ!

ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಯನ್ನು ಹೆಚ್ಚು ಬಾರಿ ಔಟ್ ಮಾಡಿರುವ ಬೌಲರ್‌ಗಳು
* ಜೇಮ್ಸ್ ಆ್ಯಂಡರ್ಸನ್, ಇಂಗ್ಲೆಂಡ್, 7 ಬಾರಿ
* ಕ್ರಿಸ್ ಲಿನ್, ಆಸ್ಟ್ರೇಲಿಯಾ, 7 ಬಾರಿ
* ಸ್ಟುವರ್ಟ್ ಬ್ರಾಡ್, ಇಂಗ್ಲೆಂಡ್, 5 ಸಾರಿ
* ಪ್ಯಾಟ್ ಕಮಿನ್ಸ್, ಆಸ್ಟ್ರೇಲಿಯಾ, 5 ಸಾರಿ
* ಬೆನ್ ಸ್ಟೋಕ್ಸ್, ಇಂಗ್ಲೆಂಡ್, 5 ಸಾರಿ
* ಮೊಯೀನ್ ಅಲಿ, ಇಂಗ್ಲೆಂಡ್, 5 ಸಾರಿ

ಟಿ ಟ್ವೆಂಟಿ ವಿಶ್ವಕಪ್ 2021ರಲ್ಲಿ ಆಶ್ಚರ್ಯಕರವಾಗಿ ಸ್ಥಾನ ಪಡೆದುಕೊಳ್ಳಬಹುದಾದ 5 ಭಾರತೀಯ ಕ್ರಿಕೆಟಿಗರುಟಿ ಟ್ವೆಂಟಿ ವಿಶ್ವಕಪ್ 2021ರಲ್ಲಿ ಆಶ್ಚರ್ಯಕರವಾಗಿ ಸ್ಥಾನ ಪಡೆದುಕೊಳ್ಳಬಹುದಾದ 5 ಭಾರತೀಯ ಕ್ರಿಕೆಟಿಗರು

ವಿಶ್ವ ದಾಖಲೆ ಸಮೀಪದಲ್ಲಿದ್ದಾರೆ ವಿರಾಟ್ ಕೊಹ್ಲಿ
ಲೀಡ್ಸ್‌ನಲ್ಲಿ ನಡೆಯಲಿರುವ ಇದೇ ಟೆಸ್ಟ್‌ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ವಿಶ್ವದಾಖಲೆಯೊಂದನ್ನು ಸರಿಗಟ್ಟಲು ಕೊಹ್ಲಿಗೆ ಅವಕಾಶವಿದೆ. ಭಾರತದ ಆರಂಭಿಕ ಇನ್ನಿಂಗ್ಸ್‌ ಗೂ ಮುನ್ನ ಕೊಹ್ಲಿ ಏನಾದರೂ 63 ರನ್ ಬಾರಿಸಿದರೆ 500 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಿಗೂ ಮುನ್ನ 23,000 ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ದಾಖಲೆ ಕೊಹ್ಲಿ ಪಾತ್ರರಾಗಲಿದ್ದರು. ಆರಂಭಿಕ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 7 ರನ್ ಬಾರಿಸಿರುವುದರಿಂದ ಈಗ 488 ಅಂತಾರಾಷ್ಟ್ರೀಯ ಇನ್ನಿಂಗ್ಸ್ ಆಡಿರುವ ಕೊಹ್ಲಿ 22,944 ರನ್ ಬಾರಿಸಿದಂತಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ 23,000 ರನ್ ಬಾರಿಸಲು 522 ಇನ್ನಿಂಗ್ಸ್‌ ಬಳಸಿಕೊಂಡಿದ್ದರು. ಹೀಗಾಗಿ ವಿರಾಟ್ ಮುಂದಿನ 11 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ 56 ರನ್ ಬಾರಿಸಿದರೂ ಸಾಕು, 500 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳೊಳಗೆ 23,000 ರನ್ ಬಾರಿಸಿದ ದಾಖಲೆಗಾಗಿ ತೆಂಡೂಲ್ಕರ್ ಅವರನ್ನು ಕೊಹ್ಲಿ ಮೀರಿಸಲಿದ್ದಾರೆ. ಮುಂದಿನ 11 ಇನ್ನಿಂಗ್ಸ್‌ಗಳಲ್ಲಿ 56 ರನ್ ಬಾರಿಸೋದು ಕಷ್ಟದ ಮಾತೇನೂ ಅಲ್ಲ. ಆದ್ದರಿಂದ ಸಚಿನ್ ಹಿಂದಿಕ್ಕಿ ಕೊಹ್ಲಿ ದಾಖಲೆ ನಿರ್ಮಿಸೋದು ಬಹುತೇಕ ಖಚಿತ. ಇದೇ ಭಾರತ vs ಇಂಗ್ಲೆಂಡ್ ಟೆಸ್ಟ್‌ ಸರಣಿಯಲ್ಲೇ ವಿರಾಟ್‌ಗೆ ಈ ವಿಶೇಷ ದಾಖಲೆ ನಿರ್ಮಿಸಲು ಅವಕಾಶವಿದೆ. ಕೊಹ್ಲಿ ಈಗಾಗಲೇ ಸಚಿನ್ ಹೆಸರಿನಲ್ಲಿರುವ ಬಹಳಷ್ಟು ದಾಖಲೆಗಳನ್ನು ಸರಿಗಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕ ದಾಖಲೆಯಿರುವುದು ತೆಂಡೂಲ್ಕರ್ ಹೆಸರಿನಲ್ಲಿ ಮಾತ್ರ. ಆದರೆ ಆ ದಾಖಲೆಯನ್ನೂ ಮೀರಿಸಬಲ್ಲ ಒಬ್ಬ ಬ್ಯಾಟ್ಸ್‌ಮನ್‌ ಇದ್ದರೆ ಅದು ವಿರಾಟ್ ಕೊಹ್ಲಿ ಎಂದು ಕ್ರಿಕೆಟ್ ಜಗತ್ತು ಹೇಳುತ್ತಿದೆ. ಕೊಹ್ಲಿ ಇಲ್ಲೀವರೆಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ 70 ಶತಕ ಮತ್ತು 7 ದ್ವಿಶತಕಗಳನ್ನು ಬಾರಿಸಿದ್ದಾರೆ.

Story first published: Thursday, August 26, 2021, 9:52 [IST]
Other articles published on Aug 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X