ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ, ಅಜರ್, ಗಂಗೂಲಿ ನಾಯಕತ್ವ ದಾಖಲೆ ಧ್ವಂಸಗೊಳಿಸಿದ ಕೊಹ್ಲಿ

Virat Kohli breaks Dhoni and Ganguly record in test cricket.
Virat Kohli creates huge captaincy record

ಇಂದೋರ್, ನವೆಂಬರ್ 17: ಇಲ್ಲಿನ ಹೋಳ್ಕರ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ನಾಯಕ ವಿರಾಟ್ ಕೊಹ್ಲಿ ಅವರು ಹೊಸ ದಾಖಲೆ ಬರೆದಿದ್ದಾರೆ.

ಶನಿವಾರ(ನವೆಂಬರ್ 16)ದಂದು ಬಾಂಗ್ಲಾದೇಶ ವಿರುದ್ಧ ಇನ್ನಿಂಗ್ಸ್ ಹಾಗೂ 130 ರನ್ ಗಳಿಂದ ಟೀಂ ಇಂಡಿಯಾ ಜಯ ದಾಖಲಿಸಿದೆ. ಈ ಮೂಲಕ ಕೊಹ್ಲಿ ಅವರು 10ನೇ ಬಾರಿಗೆ ಇನ್ನಿಂಗ್ಸ್ ಜಯ ದಾಖಲಿಸಿದ ನಾಯಕ ಎನಿಸಿಕೊಂಡರು. ಧೋನಿ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದರು.

ಇಂದೋರ್‌ನಲ್ಲಿ ಸೊನ್ನೆ ಸುತ್ತಿದ ದಾಖಲೆವೀರ : ಕೊಹ್ಲಿ ಡಕ್‌ಔಟ್‌ ಬಗ್ಗೆ ನಿಮಗೆಷ್ಟು ಗೊತ್ತು?ಇಂದೋರ್‌ನಲ್ಲಿ ಸೊನ್ನೆ ಸುತ್ತಿದ ದಾಖಲೆವೀರ : ಕೊಹ್ಲಿ ಡಕ್‌ಔಟ್‌ ಬಗ್ಗೆ ನಿಮಗೆಷ್ಟು ಗೊತ್ತು?

ಇದಕ್ಕೂ ಮುನ್ನ ಮೊಹಮ್ಮದ್ ಅಜರುದ್ದೀನ್ ಅವರು 8 ಬಾರಿ ಈ ಸಾಧನೆ ಮಾಡಿದ್ದರು. ಸೌರವ್ ಗಂಗೂಲಿ ಅವರು ತಮ್ಮ ನಾಯಕತ್ವದಲ್ಲಿ 7 ಬಾರಿ ಇನ್ನಿಂಗ್ಸ್ ಗೆಲುವು ದಾಖಲಿಸಿದ್ದರು.

ಕೊಹ್ಲಿ ಸಾಧನೆ: ದಕ್ಷಿಣ ಆಫ್ರಿಕಾ ವಿರುದ್ಧ ಪುಣೆ ಹಾಗೂ ರಾಂಚಿಯಲ್ಲಿ ಇನ್ನಿಂಗ್ಸ್ ಗೆಲುವು ದಾಖಲಿಸಿದ ಬಳಿಕ ಇಂದೋರ್ ನಲ್ಲಿ ಬಾಂಗ್ಲಾ ವಿರುದ್ಧ ಇನ್ನಿಂಗ್ಸ್ ಗೆಲುವು ಸಾಧಿಸಿ ಸತತ ಮೂರು ಗೆಲುವು ದಾಖಲಿಸಿದ ಸಾಧನೆ ಕೂಡಾ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕ್ರಿಕೆಟ್‌ ಬದುಕಿನ ಕುತೂಹಲಕಾರಿ ಸಂಗತಿಗಳು!ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕ್ರಿಕೆಟ್‌ ಬದುಕಿನ ಕುತೂಹಲಕಾರಿ ಸಂಗತಿಗಳು!

ಪುಣೆಯಲ್ಲಿ ಇನ್ನಿಂಗ್ಸ್ ಹಾಗೂ 119 ರನ್ ಹಾಗೂ ರಾಂಚಿಯಲ್ಲಿ ಇನ್ನಿಂಗ್ಸ್ ಹಾಗೂ 202 ರನ್ ಗಳಿಂದ ಜಯ ದಾಖಲಾಗಿತ್ತು. ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಸತತ 6 ಗೆಲುವು ಸಾಧಿಸಿದೆ. ಈ ಮುಂಚೆ ಧೋನಿ ನಾಯಕತ್ವದಲ್ಲಿ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 4 ಹಾಗೂ ವೆಸ್ಟ್ ಇಂಡೀಸ್ ವಿರುದ್ಧ 2 ಒತ್ಟು 6 ಬಾರಿ ಜಯ ಸಾಧಿಸಿತ್ತು.

Story first published: Sunday, November 17, 2019, 12:01 [IST]
Other articles published on Nov 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X