ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

MS ಧೋನಿ ಟೆಸ್ಟ್‌ ಕ್ರಿಕೆಟ್ ನಿವೃತ್ತಿ ಘೋಷಿಸಿದಾಗ, ಗಳಗಳನೆ ಅತ್ತಿದ್ರಂತೆ ವಿರಾಟ್ ಕೊಹ್ಲಿ!

Virat kohli

ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ, ಇನ್ಮುಂದೆ ಟೀಂ ಇಂಡಿಯಾದಲ್ಲಿ ಕೇವಲ ಓರ್ವ ಆಟಗಾರನಾಗಿ ಅಷ್ಟೇ ಕಾಣಿಸಿಕೊಳ್ಳಲಿದ್ದಾರೆ. ಕೊಹ್ಲಿ ರಾಜೀನಾಮೆ ಬಳಿಕ ಭಾರತ ಕ್ರಿಕೆಟ್‌ ತಂಡವು ವಿರಾಟ್‌ ಅದ್ಭುತ ಕ್ರಿಕೆಟ್ ಯುಗವನ್ನ ಕೊನೆಗೊಳಿಸಿದೆ. ಅದ್ರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಸಾಧನೆ ಬಹಳ ಮೆಚ್ಚುವಂತದ್ದು.

ಕೊಹ್ಲಿ ನಾಯಕತ್ವದಲ್ಲಿ ಭಾರತ 68 ಟೆಸ್ಟ್ ಪಂದ್ಯಗಳಲ್ಲಿ 40 ಪಂದ್ಯಗಳನ್ನ ಗೆದ್ದು ಬೀಗಿದೆ. ಹೀಗಾಗಿಯೇ ವಿರಾಟ್ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಟೀಂ ಇಂಡಿಯಾದ ಯಾವುದೇ ನಾಯಕ ಮಾಡದ ಸಾಧನೆ ಕೂಡ ಇವ್ರ ಹೆಸರಲ್ಲಿದೆ. ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಟೆಸ್ಟ್ ಸರಣಿ ಗೆಲುವು, ಇಂಗ್ಲೆಂಡ್‌ನಲ್ಲಿ ಜಯ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾದಲ್ಲಿ ಭಾರತ ಟೆಸ್ಟ್‌ ಸರಣಿಯನ್ನ ಗೆದ್ದುಕೊಂಡಿದೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022: ತಂಡಗಳು, ವೇಳಾಪಟ್ಟಿ, ಪಂದ್ಯದ ಸಮಯಲೆಜೆಂಡ್ಸ್ ಲೀಗ್ ಕ್ರಿಕೆಟ್ 2022: ತಂಡಗಳು, ವೇಳಾಪಟ್ಟಿ, ಪಂದ್ಯದ ಸಮಯ

2014-15ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂ.ಎಸ್‌ ಧೋನಿ ಸರಣಿ ಮಧ್ಯದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ರು. ಈ ವೇಳೆ ಒಲಿದು ಬಂದ ನಾಯಕತ್ವವನ್ನ ಯಶಸ್ವಿಯಾಗಿ ಮುನ್ನಡೆಸಿದ್ದ ಕೊಹ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನ ಸಾರ್ವಕಾಲಿಕ ಬೆಸ್ಟ್ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಆದ್ರೆ, ಕೊಹ್ಲಿಗೆ ಒಲಿದುಬಂದ ಅನಿರೀಕ್ಷಿತ ನಾಯಕತ್ವವನ್ನ ಸ್ವೀಕರಿಸುವ ವೇಳೆಯಲ್ಲಿ ವಿರಾಟ್ ಎದುರಿಸಿದ ಆತಂಕದ ಕುರಿತು ಬಿಚ್ಚಿಟ್ಟಿದ್ದಾರೆ.

2015ರಲ್ಲಿ Cricket Monthly ಜೊತೆ ಸಂದರ್ಶನದ ವೇಳೆಯಲ್ಲಿ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದ ಆರಂಭಿಕ ದಿನದ ಬಗ್ಗೆ ಮಾತನಾಡಿದ್ದಾರೆ. ಧೋನಿ ನಿವೃತ್ತಿ ಘೋಷಿಸಿದ ರಾತ್ರಿ ವೇಳೆಯಲ್ಲಿ ಸಾಕಷ್ಟು ನೊಂದಿದ್ರಂತೆ. ಧೋನಿ ಯಾವಾಗ ತಾನು ಇನ್ಮುಂದೆ ಟೆಸ್ಟ್ ಕ್ರಿಕೆಟ್ ಆಡೋದಿಲ್ಲ ಎಂದು ಘೋಷಿಸಿದ್ರೋ, ಕೊಹ್ಲಿ ಕಣ್ಣೀರು ಹಾಕಿದ್ದರು.

ಧೋನಿಯ ನಿರ್ಧಾರದ ಆಘಾತವನ್ನು ಕೊಹ್ಲಿ ನೆನಪಿಸಿಕೊಂಡು, ಅನುಷ್ಕಾ ಶರ್ಮಾ ಮುಂದೆ ಗಳಗಳನೆ ಅತ್ತಿದ್ದರಂತೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಅನುಷ್ಕಾ ಶರ್ಮಾ ಕೂಡ ವಿರಾಟ್ ಜೊತೆಯಲ್ಲಿ ತೆರಳಿದ್ರು.

"ನಾನೂ ಈಗ ನಾನು ಟೆಸ್ಟ್ ನಾಯಕನಾಗುತ್ತೇನೆ ಎಂದು ಯೋಚಿಸಲು ಸಾಧ್ಯವಾಗಲಿಲ್ಲ" ಎಂದು ಕೊಹ್ಲಿ ಆ ದಿನವನ್ನು ನೆನಪಿಸಿಕೊಂಡರು. ಸ್ವಲ್ಪ ಶಾಂತವಾದ ನಂತರ ನಾನು ನನ್ನ ಕೋಣೆಗೆ ಹೋದೆ. ಅನುಷ್ಕಾ ಧಾರಾವಾಹಿಯನ್ನು ವೀಕ್ಷಿಸಲು ಬಂದಿದ್ದರು ಮತ್ತು ನಾನು ಅವಳಿಗೆ ಸುದ್ದಿಯನ್ನು ಹೇಳಿದೆ. ಇದ್ದಕ್ಕಿದ್ದಂತೆ ಇದು ಹೇಗೆ ಸಂಭವಿಸಿತು, ಅವರು [ಧೋನಿ] ಯಾಕೆ ಹೀಗೆ ಮಾಡಿದರು?'' ಎಂದು ಅನುಷ್ಕಾ ಕೂಡ ಈ ಕುರಿತಾಗಿ ನೊಂದುಕೊಂಡಿದ್ದರು ಎಂದು ಕೊಹ್ಲಿ ಹೇಳಿದ್ದಾರೆ.

ನಾನು ಟೀಂ ಇಂಡಿಯಾ ನಾಯಕನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಖಾಯಂ ಟೆಸ್ಟ್ ನಾಯಕನಾಗುತ್ತೇನೆ ಎಂಬ ಸತ್ಯದ ಅರಿವು ನನ್ನನ್ನು ಭಾವುಕರನ್ನಾಗಿಸಿತು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. "ಸ್ವಲ್ಪ ಸಮಯದ ನಂತರ ನಮ್ಮಿಬ್ಬರಿಗೂ ನಾನು ಭಾರತದ ಟೆಸ್ಟ್ ನಾಯಕನಾಗಲು ಹೋಗುತ್ತಿದ್ದೇನೆ, ಕೇವಲ ಒಂದು ಅಥವಾ ಎರಡು ಪಂದ್ಯಗಳಿಗೆ ಅಲ್ಲ, ಶಾಶ್ವತವಾಗಿ ಎಂದು ತಿಳಿದಾಗ ತುಂಬಾ ನೊಂದುಕೊಂಡೆ, ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ." ಎಂದು ಕೊಹ್ಲಿ ಹೇಳಿದ್ದಾರೆ.

ಇನ್ನು ನನ್ನ ಏಕೈಕ ಕನಸು ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡುವುದಾಗಿತ್ತು. ಆದ್ರೆ ನನ್ನ 26ನೇ ವಯಸ್ಸಿನಲ್ಲಿಯೇ ಭಾರತ ಟೆಸ್ಟ್ ನಾಯಕನಾಗುವ ಕನಸು ಕಂಡಿರಲಿಲ್ಲ. ಹೀಗಾಗಿ ಆ ಸಮಯದಲ್ಲಿ ನನ್ನ ಬಾಲ್ಯ ಕ್ರಿಕೆಟ್ ಜೀವನ , ಕ್ಲಬ್ ಕ್ರಿಕೆಟ್ ಆಡುವುದು, ಶಾಲಾ ಕ್ರಿಕೆಟ್ ಆಡುವುದು, ರಾಜ್ಯ ಕ್ರಿಕೆಟ್ ಆಡುವುದು, ಆ ಎಲ್ಲಾ ನೆನಪುಗಳು ನನ್ನ ತಲೆಯಲ್ಲಿ ಸುತ್ತಲು ಪ್ರಾರಂಬಿಸಿತು'' ಎಂದು ಕೊಹ್ಲಿ ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ದರು.

IPL 2022 Exclusive: ಎಲ್ಲಾ ಒತ್ತಡದಿಂದ ಮುಕ್ತರಾದ Virat Kohli ಈಗ RCB ಗೆ ಮತ್ತೆ ಕ್ಯಾಪ್ಟನ್!! | Oneindia

ವಿರಾಟ್ ಕೊಹ್ಲಿ ಎಂದೂ ನಾಯಕತ್ವವನ್ನ ಬಯಸಿರಲಿಲ್ಲ. ಆತನಿಗೆ ಇದಕ್ಕಿದ್ದಂತೆ ಟೀಂ ಇಂಡಿಯಾ ಟೆಸ್ಟ್ ನಾಯಕತ್ವ ಒಲಿದು ಬಂತು. ಆ ಸಮಯದಲ್ಲಿ ಭಾರತ ಟೆಸ್ಟ್‌ ಕ್ರಿಕೆಟ್‌ ತಂಡ ವಿಶ್ವ ರ್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿತ್ತು ಅಂದ್ರೆ ನೀವು ನಂಬ್ಲೇಬೇಕು. ಆದ್ರೆ ಕಳೆದ ಐದಾರು ವರ್ಷದಲ್ಲಿ ಭಾರತ ನಂಬರ್ 1 ತಂಡವಾಗಿ ಕಾಣಿಸಿಕೊಂಡಿದೆ. ಇದರಲ್ಲಿ ವಿರಾಟ್ ಕೊಹ್ಲಿ ಕೊಡುಗೆ ನಿಜಕ್ಕೂ ಇಡೀ ಭಾರತ ಕ್ರಿಕೆಟ್ ವಲಯ ಮೆಚ್ಚುವಂತದ್ದು.

Story first published: Tuesday, January 18, 2022, 14:16 [IST]
Other articles published on Jan 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X