ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲ್ಯಾಂಡ್‌ ನಾಯಕನ ಬೆನ್ನಿಗೆ ನಿಂತ ಟೀಮ್ ಇಂಡಿಯಾ ನಾಯಕ ಕೊಹ್ಲಿ

IND VS NZ 1st T20 : ಕೇನ್ ವಿಲಿಯಮ್ಸನ್ ಬಗ್ಗೆ ವಿರಾಟ್ ಹೇಳಿದ್ದೇನು ನೋಡಿ | Kane Williamson | Virat Kohli
 Virat Kohli Defends Under-Fire Captain Kane Williamson

ನ್ಯೂಜಿಲ್ಯಾಂಡ್‌ ಮತ್ತು ಟೀಮ್ ಇಂಡಿಯಾ ನಡುವಿನ ಟಿ20 ಸರಣಿಗೆ ಇನ್ನು ಒಂದೇ ದಿನ ಬಾಕಿಯಿದೆ. ಆದರೆ ಈ ಮಧ್ಯೆ ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ತಂಡದ ನಾಯಕ ಕೇನ್ ವಿಲಿಯಮ್ಸನ್‌ ನಾಯಕತ್ವದಿಂದ ಕೆಳಗಿಳಿಯಬೇಕೆಂಬ ಮಾತುಗಳು ಕೇಳಿ ಬರುತ್ತಿದೆ. ಈ ವಿಚಾರವಾಗಿ ನ್ಯೂಜಿಲ್ಯಾಂಡ್ ನಾಯಕನ ಪರವಾಗಿ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿನ್ನು ನ್ಯೂಜಿಲ್ಯಾಂಡ್ 0-3 ಅಂತರದಿಂದ ಹೀನಾಯವಾಗಿ ಸೋತಿದೆ. ಹೀಗಾಗಿ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಅವರ ನಾಯಕತ್ವದ ಬಗ್ಗೆಯೇ ಪ್ರಶ್ನೆಎದ್ದಿದೆ. ಇದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡ ಸೋತ ಮಾತ್ರಕ್ಕೆ ನಾಯಕನನ್ನು ಹೊಣೆಯಾಗಿಸುವುದು ಸರಿಯಲ್ಲ. ಕೇನ್ ಓರ್ವ ಅದ್ಭುತ ಆಟಗಾರ ಮಾತ್ರವಲ್ಲ ಉತ್ತಮ ನಾಯಕ ಎಂದಿದ್ದಾರೆ.

ಆಸಿಸ್ ಟಿ20 ವಿಶ್ವಕಪ್‌ ಗೆಲ್ಲಲು ವಿರಾಟ್ ಕೊಹ್ಲಿ ಅಡ್ಡಿ : ಸ್ಟೀವ್ ಸ್ಮಿತ್ಆಸಿಸ್ ಟಿ20 ವಿಶ್ವಕಪ್‌ ಗೆಲ್ಲಲು ವಿರಾಟ್ ಕೊಹ್ಲಿ ಅಡ್ಡಿ : ಸ್ಟೀವ್ ಸ್ಮಿತ್

ನಾಯಕತ್ವ ಎನ್ನುವುದು ತಂಡದ ಫಲಿತಾಂಶದ ಮೇಲೆ ನಿರ್ಧಾರವಾಗುತ್ತದೆ ಎಂದು ನನಗನಿಸುವುದಿಲ್ಲ. ತಂಡವನ್ನು ಹೇಗೆ ಮುನ್ನಡೆಸುತ್ತೇವೆ ಮತ್ತು ನಾಯಕನ ಕೆಳಗೆ ಆಟಗಾರರು ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ ಈ ವಿಚಾರದಲ್ಲಿ ಕೇನ್ ಅದ್ಭುತವಾಗು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ತಂಡದ ವೈಫಲ್ಯದ ಸಂದರ್ಭದಲ್ಲಿ ಜನರು ತಕ್ಷಣವೇ ನಾಯಕನನ್ನು ಸೋಲಿಗೆ ಹೊಣೆ ಮಾಡಿಬಿಡುತ್ತಾರೆ ಎಂದಿದ್ದಾರೆ.

ನ್ಯೂಜಿಲ್ಯಾಂಡ್‌ನ ಮಾಜಿ ಕ್ರಿಕೆಟಿಗ ಮೆಕ್‌ಕಲಮ್ ಕೂಡ ವಿಲಿಯಮ್ಸನ್ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕೇನ್ ವಿಲಿಯಮ್ಸನ್ ತಮ್ಮ ನಾಯಕತ್ವದ ಬಗ್ಗೆ ಆಸಕ್ತಿ ಕಳೆದುಕೊಂಡಂತೆ ಬಾಸವಾಗುತ್ತಿದೆ. ಮೂರು ಫಾರ್ಮೆಟ್‌ನಲ್ಲಿ ನಾಯಕನಾಗಿರುವ ಕೇನ್ ಕನಿಷ್ಟ ಟಿ20ಯ ನಾಯಕತ್ವವನ್ನಾದರೂ ಬಿಟ್ಟುಕೊಡಬಹುದು ಎಂದಿದ್ದಾರೆ.

ಭಾರತ vs ಕೀವಿಸ್: ಟಿ20 ಸರಣಿಯಲ್ಲಿ ದಾಖಲಾಗಬಹುದಾದ 4 ರೆಕಾರ್ಡ್‌ಗಳುಭಾರತ vs ಕೀವಿಸ್: ಟಿ20 ಸರಣಿಯಲ್ಲಿ ದಾಖಲಾಗಬಹುದಾದ 4 ರೆಕಾರ್ಡ್‌ಗಳು

ಇದಕ್ಕೆ ಪ್ರತಿಕ್ರಿಯಿಸಿದ ನ್ಯೂಜಿಲ್ಯಾಂಡ್ ಕ್ಯಾಪ್ಟನ್ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಬಯಸಿದ ರೀತಿಯಲ್ಲಿ ತಾನು ಮುನ್ನಡೆಯಲು ಸಿದ್ಧ ಎಂಬ ಮಾತನ್ನು ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

Story first published: Thursday, January 23, 2020, 12:58 [IST]
Other articles published on Jan 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X