ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯಿಂದ ಕಲಿಯಬೇಕಿರುವುದು ಏನು ಎಂಬುದನ್ನು ವಿವರಿಸಿದ ಮಾಜಿ ಕ್ರಿಕೆಟಿಗ ಲಕ್ಷ್ಮಣ್

Virat Kohli doesnt repeat mistakes, he knows his strength says VVS Laxman

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 5 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಆದರ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ನಾಯಕನ ಆಟವಾಡಿ ಅಂತಿಮ ಹಂತದವರೆಗೂ ಅಜೇಯವಾಗುಳಿದು ತಂಡಕ್ಕೆ ಗೆಲುವನ್ನು ಸಾರಿದರು. 73 ರನ್‌ಗಳಿಸಿ ಅಜೇಯವಾಗುಳಿದ ವಿರಾಟ್ ಕೊಹ್ಲಿ ತಂಡ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಲು ಕಾರಣರಾದರು. ಈ ಪ್ರದರ್ಶನದ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ಕೊಹ್ಲಿ ತಮ್ಮ ತಪ್ಪಿನಿಂದ ಕಲಿತುಕೊಂಡಿದ್ದಾರೆ ಎಂದು ಹೇಳಿದರು.

"ಭಾರತ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ಯಾಕೆ ಅತ್ಯಂತ ಮುಖ್ಯ ಆಟಗಾರ ಮತ್ತು ಶ್ರೇಷ್ಠ ಆಟಗಾರ ಎಂಬುದಕ್ಕೆ ಇವತ್ತು ಮತ್ತೊಂದು ಉದಾಹರಣೆಯನ್ನು ಅವರು ನೀಡಿದ್ದಾರೆ. ಆತ ತನ್ನ ತಪ್ಪುಗಳನ್ನು ಪುನರಾವರ್ತಿಸುವುದಿಲ್ಲ. ಅವುಗಳಿಂದ ಪಾಠವನ್ನು ಕಲಿಯುತ್ತಾರೆ" ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

"ಕಳೆದ ಪಂದ್ಯದಲ್ಲಿ ಆತ ಆರಂಭದಲ್ಲೇ ಆತುತ ಪಟ್ಟಿದ್ದನ್ನು ನಾವು ಕಂಡಿದ್ದೇವೆ. ಅದರ ಪರಿಣಾಮವಾಗಿ ಅವರು ಆದಿಲ್ ರಶೀದ್ ಎಸೆತದಲ್ಲಿ ವಿಕೆಟ್ ಒಪ್ಪಿಸಿಹೊರನಡೆದಿದ್ದರು. ಆದರೆ ಇಂದು ಅವರು ಸಮಯವನ್ನು ತೆಗೆದುಕೊಂಡರು. ಆವರಿಗೆ ತನ್ನ ತಂತ್ರ ಏನೆಂಬುದು ಚೆನ್ನಾಗಿ ಅರಿವಿತ್ತು" ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಭಾರತ vs ಇಂಗ್ಲೆಂಡ್: ಇನ್ನುಳಿದ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶವಿಲ್ಲ!ಭಾರತ vs ಇಂಗ್ಲೆಂಡ್: ಇನ್ನುಳಿದ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶವಿಲ್ಲ!

"ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಾಗ ಅವರು ಸಮಯವನ್ನು ತೆಗೆದುಕೊಳ್ಳುತ್ತಾರೆ. ಕ್ರೀಸ್‌ನಲ್ಲಿ ನೆಲೆಯೂರಿದ ನಂತರ ಅವರ ಸ್ಟ್ರೈಕ್‌ರೇಟ್‌ನಲ್ಲಿ ಬದಲಾವಣೆಯಾಗುತ್ತದೆ. ಅವರು ಸಿಕ್ಸ್ ಅಥವಾ ಬೌಂಡರಿಗಳ ಮೇಲೆ ಮಾತ್ರವೇ ಅವಲಂಬಿತವಾಗಿರುವುದಿಲ್ಲ. ಒಂಟಿ ರನ್‌ಗಳನ್ನು ಎರಡು ರನ್‌ಗಳನ್ನಾಗಿ ಪರಿವರ್ತಿಸಬಲ್ಲವರಾಗಿದ್ದಾರೆ. ಯಾಕೆಂದರೆ ಫಿಟ್‌ನೆಸ್‌ಗೆ ಅವರು ಅಷ್ಟು ಮಹತ್ವವನ್ನು ನೀಡುತ್ತಾರೆ" ಎಂದು ಲಕ್ಷ್ಮಣ್ ಹೇಳಿದ್ದಾರೆ.

ಕದ್ದು ತಿಂಡಿ ತಿಂದ ಹಿಟ್‌ಮ್ಯಾನ್ ರೋಹಿತ್ ಶರ್ಮಾ: ವೈರಲ್ ವಿಡಿಯೋಕದ್ದು ತಿಂಡಿ ತಿಂದ ಹಿಟ್‌ಮ್ಯಾನ್ ರೋಹಿತ್ ಶರ್ಮಾ: ವೈರಲ್ ವಿಡಿಯೋ

"ಇದು ಪ್ರತಿಯೊಬ್ಬರೂ ಕಲಿಯಬೇಕಾಗಿರುವ ವಿಚಾರ. ತಮ್ಮ ಸಾಮರ್ಥ್ಯ ಯಾವುದು ಎಂಬುದನ್ನು ಪ್ರತಿ ಆಟಗಾರನೂ ಅರ್ಥ ಮಾಡಿಕೊಳ್ಳಬೇಕು. ಪೊಲಾರ್ಡ್ ಮತ್ತು ಕ್ರಿಸ್ ಗೇಲ್ ಅವರ ಸಾಮರ್ಥ್ಯ ದೊಡ್ಡ ಹೊಡೆತಗಳನ್ನು ಬಾರಿಸುವುದು. ವಿರಾಟ್ ಕೊಹ್ಲಿಯ ಶಕ್ತಿ ಸಾಂಪ್ರದಾಯಿಕ ಕ್ರಿಕೆಟಿಂಗ್ ಹೊಡೆತಗಳ ಮೂಲಕ ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸಿ ಬೌಲರ್‌ಗಳ ಮೇಲೆ ಒತ್ತಡವನ್ನು ಹೇರುವುದಾಗಿದೆ" ಎಂದು ವಿವಿಎಸ್ ಲಕ್ಷ್ಮಣ್ ವಿವರಿಸಿದ್ದಾರೆ.

Story first published: Tuesday, March 16, 2021, 15:09 [IST]
Other articles published on Mar 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X