ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ವಿದ್ಯಾರ್ಹತೆ ಪಿಯುಸಿ: ಅನುಷ್ಕಾ ಶರ್ಮಾ ವಿದ್ಯಾರ್ಹತೆ ಏನು? ಓದಿದ್ದೆಲ್ಲಾ ಕರ್ನಾಟಕದಲ್ಲೇ!

Virat Kohli education qualification: Virat Kohli completed 12th standard Anushka Sharma done masters

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸದ್ಯ ಭಾರತ ಮಾತ್ರವಲ್ಲದೇ ವಿಶ್ವದ ಮಟ್ಟಿಗೆ ಸಾಕಷ್ಟು ಚರ್ಚೆ ಮತ್ತು ಸುದ್ದಿಗೆ ಈಡಾಗಿರುವ ಸೆಲೆಬ್ರಿಟಿ ಜೋಡಿ. ಬಹಳಷ್ಟು ಕಾಲ ಕೆಲ ಪಾರ್ಟಿ ಹಾಗೂ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಇಬ್ಬರೂ ಸಹ ಪ್ರೀತಿಯಲ್ಲಿರುವುದನ್ನು ಪರೋಕ್ಷವಾಗಿ ತಿಳಿಸಿದ್ದ ಈ ಜೋಡಿ 2017ರ ಡಿಸೆಂಬರ್ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ಈ ವಿರಾಟ್ ಕೊಹ್ಲಿ ದಂಪತಿಗೆ 2021ರ ಜನವರಿ 11ರಂದು ಹೆಣ್ಣು ಮಗು ಜನಿಸಿತು ಹಾಗೂ ಈ ಮಗುವಿಗೆ ವಾಮಿಕಾ ಕೊಹ್ಲಿ ಎಂದು ನಾಮಕರಣ ಮಾಡಲಾಗಿದೆ.

ಏಷ್ಯಾಕಪ್ 2022: ಭಾರತ ತಂಡ ಪ್ರಕಟಗೊಳ್ಳುವ ದಿನಾಂಕವಿದು; ರಾಹುಲ್ ಬದಲು ಈತ ಉಪನಾಯಕ!ಏಷ್ಯಾಕಪ್ 2022: ಭಾರತ ತಂಡ ಪ್ರಕಟಗೊಳ್ಳುವ ದಿನಾಂಕವಿದು; ರಾಹುಲ್ ಬದಲು ಈತ ಉಪನಾಯಕ!

ಸದ್ಯ ಅನುಷ್ಕಾ ಶರ್ಮಾ ವಿವಾಹವಾದ ನಂತರ ಸಿನಿಮಾ ರಂಗದಿಂದ ಸಾಕಷ್ಟು ದೂರ ಉಳಿದಿದ್ದು, ಸದ್ಯ ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ ಕ್ರಿಕೆಟ್ ಕಂಡ ಪ್ರತಿಭಾವಂತ ಕ್ರಿಕೆಟ್ ಆಟಗಾರ್ತಿ ಜೂಲನ್ ಗೋಸ್ವಾಮಿ ಅವರ ಬಯೋಗ್ರಫಿ ಚಿತ್ರಕ್ಕಾಗಿ ಮಾತ್ರ ಅನುಷ್ಕಾ ಶರ್ಮಾ ಬಣ್ಣ ಹಚ್ಚಿದ್ದು, ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ಜೂಲನ್ ಗೋಸ್ವಾಮಿ ಅವರ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

ಮಹಾರಾಜ ಟ್ರೋಫಿ 2022: ಈ 2 ಊರುಗಳಲ್ಲಿ ಮಾತ್ರ ನಡೆಯಲಿವೆ ಹೊಸ ಕೆಪಿಎಲ್‌ನ 34 ಪಂದ್ಯಗಳುಮಹಾರಾಜ ಟ್ರೋಫಿ 2022: ಈ 2 ಊರುಗಳಲ್ಲಿ ಮಾತ್ರ ನಡೆಯಲಿವೆ ಹೊಸ ಕೆಪಿಎಲ್‌ನ 34 ಪಂದ್ಯಗಳು

ಇತ್ತ ಪತ್ನಿ ಅನುಷ್ಕಾ ಶರ್ಮಾ ಚಲನಚಿತ್ರ ನಿರ್ಮಾಪಕಿಯಾಗಿ ತೊಡಗಿಸಿಕೊಂಡಿದ್ದರೆ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್‌ ತಂಡದ ಪರ ಸಾಲು ಸಾಲು ಪಂದ್ಯಗಳಲ್ಲಿ ಕಣಕ್ಕಿಳಿದು ಸಾಕಷ್ಟು ದಾಖಲೆ ಹಾಗೂ ಸಾಧನೆಗಳನ್ನು ಮಾಡಿ ಈಗಾಗಲೇ ಮಾಡರ್ನ್ ಡೇ ಲೆಜೆಂಡ್ ಎನಿಸಿಕೊಂಡಿದ್ದಾರೆ. ಸಕ್ರಿಯರಾಗಿರುವ ಕ್ರಿಕೆಟಿಗರ ಪೈಕಿ ಅತಿಹೆಚ್ಚು ರನ್, ಅತಿಹೆಚ್ಚು ಶತಕ ಬಾರಿಸಿರುವ ದಾಖಲೆಯನ್ನು ನಿರ್ಮಿಸಿ ಕಿಂಗ್ ಆಫ್ ಕ್ರಿಕೆಟ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿಯ ವಿದ್ಯಾರ್ಹತೆ ಎಷ್ಟು ಹಾಗೂ ಪತ್ನಿ ಅನುಷ್ಕಾ ಶರ್ಮಾ ವಿದ್ಯಾರ್ಹತೆ ಏನು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ವಿರಾಟ್ ಕೊಹ್ಲಿ ವಿದ್ಯಾರ್ಹತೆ

ವಿರಾಟ್ ಕೊಹ್ಲಿ ವಿದ್ಯಾರ್ಹತೆ

ವಿರಾಟ್ ಕೊಹ್ಲಿ 1988ರ ನವೆಂಬರ್ 5ರಂದು ದೆಹಲಿಯಲ್ಲಿ ಪಂಜಾಬ್ ಹಿಂದೂ ಕುಟುಂಬದಲ್ಲಿ ಜನಿಸಿದರು. ವಿರಾಟ್ ಕೊಹ್ಲಿ ಅವರ ತಂದೆ ಪ್ರೇಮ್ ಕೊಹ್ಲಿ ಕ್ರಿಮಿನಲ್ ಲಾಯರ್ ಆಗಿದ್ದರು ಹಾಗೂ ತಾಯಿ ಸರೋಜ್ ಕೊಹ್ಲಿ ಗೃಹಿಣಿ ಆಗಿದ್ದರು. ಇನ್ನು ವಿರಾಟ್ ಕೊಹ್ಲಿ ದೆಹಲಿಯ ವಿಶಾಲ್ ಭಾರ್ತಿ ಪಬ್ಲಿಕ್ ಸ್ಕೂಲ್ ಹಾಗೂ ದೆಹಲಿಯ ಪಶ್ಚಿಮ್ ವಿಹಾರದ ಸೇವಿಯರ್ ಕಾನ್ವೆಂಟ್ ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ವ್ಯಾಸಾಂಗ ಮಾಡಿದ್ದು, ದ್ವಿತೀಯ ಪಿಯುಸಿವರೆಗಿನ ಶಿಕ್ಷಣವನ್ನು ಪಡೆದಿದ್ದಾರೆ. ಅಂಡರ್ 19 ವಿಶ್ವಕಪ್ ತಂಡವನ್ನು ನಾಯಕನಾಗಿ ಮುನ್ನಡೆಸಿ ವಿಶ್ವಕಪ್ ಗೆಲ್ಲಿಸಿದ್ದ ವಿರಾಟ್ ಕೊಹ್ಲಿ ಪದವಿ ಕಾಲೇಜು ಮೆಟ್ಟಿಲೇರಲಿಲ್ಲ. ಆ ಸಮಯಕ್ಕಾಗಲೇ ವಿರಾಟ್ ಕೊಹ್ಲಿ ಆಯ್ಕೆಗಾರರ ಮನಗೆದ್ದು ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಸೇರಿಬಿಟ್ಟಿದ್ದರು.

ಅನುಷ್ಕಾ ಶರ್ಮಾ ವಿದ್ಯಾರ್ಹತೆ

ಅನುಷ್ಕಾ ಶರ್ಮಾ ವಿದ್ಯಾರ್ಹತೆ

ಇನ್ನು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮೂಲತಃ ಅಯೋಧ್ಯೆಯಲ್ಲಿ ಜನಿಸಿದ್ದರೂ ಸಹ ಓದಿದ್ದು, ಬೆಳದದ್ದೆಲ್ಲಾ ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿಯೇ 1988ರ ಮೇ 1ರಂದು ಜನಿಸಿದ್ದ ಅನುಷ್ಕಾ ಶರ್ಮಾರ ತಂದೆ ಕರ್ನಲ್ ಅಜಯ್ ಕುಮಾರ್ ಶರ್ಮಾ ಸೇನಾಧಿಕಾರಿಯಾಗಿದ್ದರು ಹಾಗೂ ತಾಯಿ ಆಶಿಮಾ ಶರ್ಮಾ ಗೃಹಿಣಿಯಾಗಿದ್ದರು. ಇನ್ನು ಅನುಷ್ಕಾ ಶರ್ಮಾ ಚಿಕ್ಕ ವಯಸ್ಸಿನಿಂದಲೂ ಸಹ ಸಿನಿಮಾ ಮತ್ತು ಮಾಡೆಲಿಂಗ್ ಕಡೆ ಒಲವನ್ನು ಹೊಂದಿದ್ದರೂ ಸಹ ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಅತ್ಯುತ್ತಮ ವಿದ್ಯಾರ್ಥಿನಿ ಹಾಗೂ ಕ್ಲಾಸ್ ಟಾಪರ್ ಆಗಿದ್ದರು. ಅಸ್ಸಾಂನ ಸೇಂಟ್ ಮೇರಿಸ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದ ಅನುಷ್ಕಾ ಶರ್ಮಾ ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ತನ್ನ ಪ್ರೌಢ ಶಿಕ್ಷಣವನ್ನು ಪಡೆದಿದ್ದರು. ಇನ್ನು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಪದವಿಯನ್ನು ಮುಗಿಸಿದ ಅನುಷ್ಕಾ ಶರ್ಮಾ ಕರೆಸ್ಪಾಂಡೆನ್ಸ್‌ನಲ್ಲಿ ಎಕಾನಾಮಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಇಬ್ಬರಿಗೂ ಇದೆ ಬೆಂಗಳೂರಿನ ನಂಟು

ಇಬ್ಬರಿಗೂ ಇದೆ ಬೆಂಗಳೂರಿನ ನಂಟು

ಬೆಂಗಳೂರಿನಲ್ಲೇ ಬೆಳೆದ ಅನುಷ್ಕಾ ಶರ್ಮಾಗೆ ಬೆಂಗಳೂರು ಎಂದರೆ ಅತಿಪ್ರಿಯವಾದ ನಗರ ಹಾಗೂ ವಿರಾಟ್ ಕೊಹ್ಲಿ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಆರಂಭದ ವರ್ಷದಿಂದಲೂ ಆಡುತ್ತಿದ್ದು, ಈಗಾಗಲೇ ಹಲವು ಬಾರಿ ಬೆಂಗಳೂರು ನನ್ನ ಎರಡನೇ ಮನೆ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಕೆಲ ಸಂದರ್ಶನಗಳಲ್ಲಿ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಬೆಂಗಳೂರು ನಗರದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದನ್ನು ತಿಳಿಸಿದ್ದರು. ಹೀಗೆ ವಿರಾಟ್ ಮತ್ತು ಅನುಷ್ಕಾ ದಂಪತಿಗೂ ಬೆಂಗಳೂರಿಗೂ ಅವಿನಾಭಾವ ಸಂಬಂಧವಿದೆ.

Story first published: Saturday, August 6, 2022, 18:11 [IST]
Other articles published on Aug 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X