ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಕರೆ ಮಾಡಿ, ನನ್ನ ಬಳಿ ಸಹಾಯ ಕೇಳಿದ್ದ ಎಂದ ಸಚಿನ್ ತೆಂಡೂಲ್ಕರ್

sachin and virat

ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರ ನಂತರ, ಮಾಜಿ ನಾಯಕ ವಿರಾಟ್ ಕೊಹ್ಲಿ ಅನೇಕ ದಾಖಲೆಗಳನ್ನ ಸರಿಗಟ್ಟಿದ್ದಾರೆ. 2013 ರ ನವೆಂಬರ್‌ನಲ್ಲಿ ಸಚಿನ್ ತೆಂಡೂಲ್ಕರ್ ಭಾರತಕ್ಕಾಗಿ ಅಂತಿಮ ಪಂದ್ಯವನ್ನು ಆಡಿದಾಗ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐದು ವರ್ಷಗಳನ್ನು ಪೂರೈಸಿದ್ದರು.

ಸಚಿನ್ ತೆಂಡೂಲ್ಕರ್ ನಿವೃತ್ತಿ ಬಳಿಕ ವಿರಾಟ್ ಕೊಹ್ಲಿ ಅನೇಕ ದಾಖಲೆಗಳನ್ನ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್‌ರ ಹಲವು ದಾಖಲೆಗಳನ್ನ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎನ್ನುವಂತಹ ದಾಖಲೆಗಳು ಸಹ ನೆಲಸಮಗೊಂಡಿವೆ.

2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದ ವಿರಾಟ್‌ಗೆ ಪ್ರಸ್ತುತ ಕೆಟ್ಟ ಫಾರ್ಮ್ ಅನ್ನು ಎದುರಿಸುತ್ತಿದ್ದಾರೆ. ಇದೇ ರೀತಿಯಲ್ಲಿ 2014ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಅತ್ಯಂತ ರನ್ ಕೊರತೆ ಅನ್ನು ಕಂಡಿದ್ದರು. ಈ ಸಂದರ್ಭದಲ್ಲಿ ವಿರಾಟ್‌ಗೆ ಸಚಿನ್ ತೆಂಡೂಲ್ಕರ್ ನೆರವಾಗಿದ್ದರು ಎಂಬುದನ್ನ ಮಾಸ್ಟರ್ ಬ್ಲಾಸ್ಟರ್ ಬಿಚ್ಚಿಟ್ಟಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಒಂದೂ ಶತಕ ಸಿಡಿಸಿಲ್ಲ ವಿರಾಟ್

ಕಳೆದ ಎರಡು ವರ್ಷಗಳಲ್ಲಿ ಒಂದೂ ಶತಕ ಸಿಡಿಸಿಲ್ಲ ವಿರಾಟ್

ಕಳೆದ ಎರಡು ವರ್ಷಗಳಿಂದ ಕೊಹ್ಲಿ ವೃತ್ತಿಜೀವನದ ಗ್ರಾಫ್ ಕುಸಿದಿದೆ. 2019ರ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಒಂದು ಶತಕ ಸಿಡಿಸದೇ ಇರುವುದು ಅಭಿಮಾನಿಗಳಿಗೂ ನಿರಾಸೆ ಮೂಡಿಸಿದೆ. ಇಷ್ಟು ಅಲ್ಲದಿದ್ದರೂ ಕೊಹ್ಲಿಗೆ ಈ ಹಿಂದೆಯೂ ಇಂತಹ ಕೆಟ್ಟ ಸಮಯ ಬಂದಿದೆ. ಆ ಸಮಯದಲ್ಲಿ, ಅವರ ಮಾಜಿ ಸಹ ಆಟಗಾರ ಮತ್ತು ಆರಾಧ್ಯ ದೈವ ತೆಂಡೂಲ್ಕರ್ ಅವರ ಸಲಹೆಯನ್ನು ಪಡೆಯುವ ಮೂಲಕ ಮಹತ್ವದ ತಿರುವನ್ನು ಪಡೆದಿದ್ದರು. ಗ್ರಹಾಂ ಬೆನ್‌ಸಿಂಗರ್ ಅವರೊಂದಿಗಿನ ಸಂದರ್ಶನದಲ್ಲಿ ತೆಂಡೂಲ್ಕರ್ ಘಟನೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ವಿರಾಟ್ ನನ್ನ ಗೆಳೆಯ ಎಂದ ತೆಂಡೂಲ್ಕರ್

ವಿರಾಟ್ ನನ್ನ ಗೆಳೆಯ ಎಂದ ತೆಂಡೂಲ್ಕರ್

ವಿರಾಟ್ ಒಳ್ಳೆಯ ಗೆಳೆಯ. ಕಳೆದ 10 ವರ್ಷಗಳಲ್ಲಿ ಅವರ ವೃತ್ತಿಜೀವನದ ಬೆಳವಣಿಗೆಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ವಿರಾಟ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ನಾನು ಕೂಡ ಭಾರತ ತಂಡದ ಭಾಗವಾಗಿದ್ದೆ. ಆ ಸಮಯದಲ್ಲಿ ನಾನು ವಿರಾಟ್‌ನೊಳಗಿನ ಎಲ್ಲಾ ಉತ್ಸಾಹವನ್ನು ನೋಡಿದೆ. ಇದರ ನಡುವೆ ಆತನಲ್ಲಿ ಉತ್ತಮ ಗೆಳೆಯನನ್ನ ಕಂಡಿದ್ದೇನೆ ಎಂದಿದ್ದಾರೆ. ಅಲ್ಲದೆ ಆತ ಕೆಟ್ಟ ಫಾರ್ಮ್ ಎದುರಿಸಿದ ಸಂದರ್ಭದಲ್ಲಿ ಆತನ ಆಟದಲ್ಲಿ ಸಚಿನ್ ಶ್ರಮಿಸಿದ್ದಾರೆ . ಅಂದಿನಿಂದ ವಿರಾಟ್ ಜೀವನಶೈಲಿಯನ್ನು ಬದಲಾಯಿಸಿದ್ದಾರೆ .

ಸತತ 10 ಟಿ20 ಪಂದ್ಯ ಗೆದ್ದ ಭಾರತ: ರೋಹಿತ್ ಶರ್ಮಾ ನಾಯಕತ್ವದಲ್ಲಿ ದಾಖಲೆ

ವಿರಾಟ್‌ನನ್ನ ತುಂಬಾ ಹತ್ತಿರದಿಂದ ನೋಡಿದ್ದೇನೆ!

ವಿರಾಟ್‌ನನ್ನ ತುಂಬಾ ಹತ್ತಿರದಿಂದ ನೋಡಿದ್ದೇನೆ!

ವಿರಾಟ್ ಒಬ್ಬ ಶ್ರೇಷ್ಠ ಆಟಗಾರ. ಆತನ ವೃತ್ತಿಜೀವನದಲ್ಲಿ ಸಾಕಷ್ಟು ಘಟನೆಗಳನ್ನು ನೋಡಿದ್ದೇನೆ, ಆತ ಉತ್ತಮ ಪ್ರದರ್ಶನ ನೀಡಲು ಹೇಗೆ ಸಾಧ್ಯವಾಯಿತು ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. 2014 ರ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ವಿರಾಟ್ ಕೊಹ್ಲಿ ತನ್ನ ಬಳಿ ಸಹಾಯ ಕೇಳಿದ್ದರು ಎಂದು ಮಾಸ್ಟರ್ ಬ್ಲಾಸ್ಟರ್ ಬಹಿರಂಗಪಡಿಸಿದ್ದಾರೆ.

2014ರಲ್ಲಿ ವಿರಾಟ್ ಕೊಹ್ಲಿ ಜತೆ ಖುದ್ದಾಗಿ ಅವರನ್ನು ಭೇಟಿ ಮಾಡಿದ್ದೂ ನೆನಪಿದೆ. ಅವನು ಸುಧಾರಿಸಬಹುದೆಂದು ನಾನು ಭಾವಿಸಿದ ಕೆಲವು ವಿಷಯಗಳನ್ನು ಆ ದಿನ ನಾವು ಚರ್ಚಿಸಿದ್ದೇವೆ. ನಾನು ಯಾವಾಗಲೂ ಆಟಗಾರರಿಗೆ ಸಹಾಯ ಮಾಡುತ್ತೇನೆ ಮತ್ತು ನನ್ನ ಜ್ಞಾನವನ್ನು ಅವರೊಂದಿಗೆ ಹಂಚಿಕೊಳ್ಳುತ್ತೇನೆ. ಅದಕ್ಕೆ ನಾನು ಸದಾ ಸಿದ್ಧ ಎಂದಿದ್ದಾರೆ ತೆಂಡೂಲ್ಕರ್.

ಐಪಿಎಲ್ 2022: ಶಿಖರ್ ಧವನ್ ಅಲ್ಲ ಈತನ ಪಾಲಾಗಲಿದೆ ಪಂಜಾಬ್ ಕಿಂಗ್ಸ್ ನಾಯಕತ್ವ!

ವಿರಾಟ್ ಗೆ ಬುದ್ದಿ ಹೇಳುವಂತೆ ಸಚಿನ್ ಗೆ ಮನವಿ ಮಾಡಿದ ಅಭಿಮಾನಿಗಳು | Oneindia Kannada
ತನ್ನೊಂದಿಗೆ ಸಮಯ ಕಳೆಯಲು ಕರೆಮಾಡಿದ್ದ ವಿರಾಟ್

ತನ್ನೊಂದಿಗೆ ಸಮಯ ಕಳೆಯಲು ಕರೆಮಾಡಿದ್ದ ವಿರಾಟ್

ಆ ದಿನ ವಿರಾಟ್ ನನಗೆ ಕರೆ ಮಾಡಿದ್ದ ಮತ್ತು ಅವರು ಒಟ್ಟಿಗೆ ಸ್ವಲ್ಪ ಸಮಯವನ್ನು ಹಂಚಿಕೊಳ್ಳಲು ಬಯಸಿದ್ದೇನೆ ಎಂದು ಹೇಳಿದರು. ಪ್ರತಿ ಪೀಳಿಗೆಯು ತಮ್ಮ ನಾಯಕರನ್ನು ನೋಡುತ್ತದೆ. ನಿಮ್ಮ ಕನಸುಗಳು ಮತ್ತು ಗುರಿಗಳನ್ನು ನೀವು ಹೇಗೆ ಹೊಂದಿಸುತ್ತೀರಿ. ನಂತರ ನೀವು ಅವುಗಳನ್ನ ಅನುಸರಿಸಲು ಪ್ರಾರಂಭಿಸುತ್ತೀರಿ ಎಂದು ಅವರು ಹೇಳಿದರು.

ವಿರಾಟ್ ಕೊಹ್ಲಿ 2014 ರ ಇಂಗ್ಲೆಂಡ್ ಪ್ರವಾಸದಲ್ಲಿ ಐದು ಟೆಸ್ಟ್‌ಗಳ 10 ಇನ್ನಿಂಗ್ಸ್‌ಗಳಲ್ಲಿ ಕೇವಲ 134 ರನ್ ಗಳಿಸಿದ್ದರು. ಇದಾದ ಬಳಿಕ ತೆಂಡೂಲ್ಕರ್‌ಗೆ ಸಹಾಯಕ್ಕಾಗಿ ಕರೆ ಮಾಡಿದ್ದರು. ಇದು ಕೊಹ್ಲಿ ವೃತ್ತಿ ಜೀವನದಲ್ಲಿ ಮಹತ್ವದ ತಿರುವು ನೀಡಿತು. ತೆಂಡೂಲ್ಕರ್ ಅವರೊಂದಿಗಿನ ಭೇಟಿಯ ನಂತರ, ಕೊಹ್ಲಿ ರನ್ ಮಷಿನ್ ಆಗಿ ಬದಲಾಗುತ್ತಿರುವುದು ಕಂಡುಬಂದಿತು.

2014-15ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರು ನಾಲ್ಕು ಟೆಸ್ಟ್‌ಗಳಲ್ಲಿ 86.50 ಸರಾಸರಿಯಲ್ಲಿ 692 ರನ್ ಗಳಿಸಿದ್ದರು. ಅದೇ ಆಸ್ಟ್ರೇಲಿಯಾ ಪ್ರವಾಸದ ನಂತರ, ಕೊಹ್ಲಿ ಎಂಎಸ್ ಧೋನಿ ಬದಲಿಗೆ ಭಾರತದ ಪೂರ್ಣ ಸಮಯದ ಟೆಸ್ಟ್ ನಾಯಕರಾಗಿ ನೇಮಕಗೊಂಡರು.

Story first published: Friday, February 25, 2022, 9:42 [IST]
Other articles published on Feb 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X