75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ಕೊಹ್ಲಿ, ಪಾಂಡ್ಯ ಸೇರಿದಂತೆ ಅನೇಕ ಕ್ರಿಕೆಟಿಗರಿಂದ ಶುಭಾಶಯ

ದೇಶಾದ್ಯಂತ ಆಗಸ್ಟ್ 15ರ ಸೋಮವಾರ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆಕಟ್ಟಿದೆ. ಘರ್ ಘರ್ ಮೇ ತಿರಂಗಾ ಎಂಬ ಪ್ರಧಾನಿ ನರೇಂದ್ರ ಮೋದಿ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನ ನೆನದು ಭಾರತವು 75ನೇ ವರ್ಷದ ಅಮೃತ ಮಹೋತ್ಸವ ಆಚರಣೆ ಮಾಡಲಾಗಿದೆ.

ದೇಶಾದ್ಯಂತ ಅನೇಕ ಗಣ್ಯರು, ಸೆಲೆಬ್ರೆಟಿಗಳು, ಕ್ರೀಡಾ ತಾರೆಯರು ಭಾರತದ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನ ಹಂಚಿಕೊಂಡಿದ್ದಾರೆ. ಈ ವಿಶೇಷ ದಿನದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಇದ್ರಿಂದ ಟೀಂ ಇಂಡಿಯಾ ಕ್ರಿಕೆಟಿಗರು ಸಹ ಹೊರತಾಗಿಲ್ಲ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಅನೇಕರು ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ತ್ರಿವರ್ಣ ಧ್ವಜ ಹಾಕಿರುವ ಕೊಹ್ಲಿ, ಧೋನಿ

ಇನ್‌ಸ್ಟಾಗ್ರಾಮ್‌ನಲ್ಲಿ ತ್ರಿವರ್ಣ ಧ್ವಜ ಹಾಕಿರುವ ಕೊಹ್ಲಿ, ಧೋನಿ

ಟೀಂ ಇಂಡಿಯಾದ ಬಹು ಯಶಸ್ವಿ ನಾಯಕ ಮಹೇಂದ್ರ ಸಿಂಗ್‌ ಧೋನಿ, ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಡಿಪಿಯನ್ನು ಬದಲಿಸಿ ತ್ರಿವರ್ಣ ಧ್ವಜವನ್ನು ಪ್ರೊಫೈಲ್ ಫೋಟೊವಾಗಿ ಹಾಕುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನ ಸಾರಿದ್ದಾರೆ. ಅದ್ರಲ್ಲೂ ಸಾಮಾಜಿಕ ಮಾಧ್ಯಮದಿಂದ ಹೆಚ್ಚು ದೂರವಿರುವ ಮಹೇಂದ್ರ ಸಿಂಗ್ ಧೋನಿ ಸುಮಾರ್ ಎರಡು ವರ್ಷಗಳ ಬಳಿಕ ಡಿಪಿಯನ್ನು ಬದಲಿಸಿದ್ದು, ತಿರಂಗಾ ಚಿತ್ರ ಹಾಕಿದ್ದಾರೆ.

ಧೋನಿ ತ್ರಿವರ್ಣ ಧ್ವಜ ಹಾಕಿರುವುದರ ಜೊತೆಗೆ "ನಾನು ಈ ಭಾರತ ಮಾತೆಯ ಪ್ರಜೆಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ" ಎಂದು ಸಂಸ್ಕೃತದಲ್ಲಿ ಹಾಕಿರುವ ಪದಗಳನ್ನ ನೋಡಿದ ಅಭಿಮಾನಿಗಳು ಸಂಭ್ರಮದಿಂದ ಕೊಂಡಾಡುತ್ತಿದ್ದಾರೆ.

ಇನ್ನು ವಿರಾಟ್ ಕೊಹ್ಲಿ '75 ಅದ್ಭುತ ವರ್ಷಗಳು. ಭಾರತೀಯನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್'' ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.

ಹಸ್ನೈನ್‌ ನಿಯಮಬಾಹಿರ ಬೌಲಿಂಗ್ ಶೈಲಿ: ಸನ್ನೆ ಮಾಡಿ ಕೋಪ ವ್ಯಕ್ತಪಡಿಸಿದ ಮಾರ್ಕಸ್ ಸ್ಟೋಯ್ನಿಸ್

ತ್ರಿವರ್ಣ ಧ್ವಜವನ್ನ ಹಾರಿಸಿದ ರೋಹಿತ್ ಶರ್ಮಾ

ಪ್ರಸ್ತುತ ಜಿಂಬಾಬ್ವೆ ಪ್ರವಾಸದಿಂದ ದೂರ ಉಳಿದಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತ್ರಿವರ್ಣ ಧ್ವಜವನ್ನು ಹಿಡಿದಿರುವ ಫೋಟೋವನ್ನ ಪೋಸ್ಟ್‌ ಮಾಡಿದ್ದು, 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.

ಪ್ರಪಂಚದಾದ್ಯಂತ ಕಾಡಿನಲ್ಲಿ 4,000 ಹುಲಿಗಳಿರಬಹುದು, ಆದ್ರೆ ಕೇವಲ ಒಬ್ಬ ರಾಹುಲ್ ದ್ರಾವಿಡ್: ರಾಸ್ ಟೇಲರ್

ತ್ರಿವರ್ಣ ಧ್ವಜ ಹಿಡಿದು ಭಾರತೀಯರಿಗೆ ಶುಭ ಹಾರೈಸಿದ ಹಾರ್ದಿಕ್ ಪಾಂಡ್ಯ

ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಾಂಪ್ರದಾಯಿಕ ಉಡುಗೆ ತೊಟ್ಟು, ತ್ರಿವರ್ಣ ಧ್ವಜಹಿಡಿದು ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಪೋಸ್ಟ್ ಮಾಡಿರುವ ಹಾರ್ದಿಕ್‌ ತ್ರಿವರ್ಣ ಧ್ವಜ ಹಾರಿಸಿ, ದಿನದ ವಿಶೇಷತೆಯನ್ನ ಸಾರಿದ್ದಾರೆ.

NZ vs WI: ನ್ಯೂಜಿಲೆಂಡ್ ವಿರುದ್ಧ ಅಂತಿಮ ಟಿ20 ಪಂದ್ಯ ಗೆದ್ದ ವೆಸ್ಟ್ ಇಂಡೀಸ್, ಕಿವೀಸ್‌ಗೆ ಸರಣಿ ಜಯ

ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಕೂಡ ವೀಡಿಯೋದಲ್ಲಿ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನ ತಿಳಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಮನೆಯ ಬಾಲ್ಕನಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ದೇಶದ ಜನತೆಗೆ ಶುಭ ಕೋರಿದ್ದಾರೆ. ಭಾರತದ ಲೆಜೆಂಡರಿ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್ ಸೇರಿದಂತೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರು, ಮಾಜಿ ಆಟಗಾರರು, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಸೇರಿದಂತೆ ಅನೇಕರು 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, August 15, 2022, 13:27 [IST]
Other articles published on Aug 15, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X