ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಆಡಿ, ಆದ್ರೆ ವಿಶ್ವಕಪ್ ಅವಕಾಶ ಕಳೆದುಕೊಳ್ಳಬೇಡಿ: ವಿರಾಟ್ ಕೊಹ್ಲಿ

Virat Kohli has a message for India teammates ahead of World Cup

ಬೆಂಗಳೂರು, ಮಾರ್ಚ್ 17: ಟೀಮ್ ಇಂಡಿಯಾದ ಸದ್ಯದ ಎಲ್ಲಾ ಅಂತಾರಾಷ್ಟ್ರೀಯ ಟೂರ್ನಿಗಳ ವೇಳಾಪಟ್ಟಿ ಮುಗಿದಿದೆ. ಇನ್ನು ಐಪಿಎಲ್ ಬಳಿಕ ನೇರ ವಿಶ್ವಕಪ್ ಪಂದ್ಯಾಟದ ಸವಾಲನ್ನು ವಿರಾಟ್ ಕೊಹ್ಲಿ ಬಳಗ ಸ್ವೀಕರಿಸುವುದರಲ್ಲಿದೆ. ಮಹತ್ವದ ಟೂರ್ನಿ ಮುಂದಿರುವುದರಿಂದ ಕೊಹ್ಲಿ ತನ್ನ ತಂಡ ಸಹ ಆಟಗಾರರಿಗೆ ಪ್ರಮುಖ ಸಂದೇಶವನ್ನು ರವಾನಿಸಿದ್ದಾರೆ.

ಆರ್ ಸಿಬಿ ವಿರುದ್ಧದ ಪಂದ್ಯಕ್ಕೆ ಚೆನ್ನೈ ತಂಡದಿಂದ ಭರ್ಜರಿ ತಯಾರಿಆರ್ ಸಿಬಿ ವಿರುದ್ಧದ ಪಂದ್ಯಕ್ಕೆ ಚೆನ್ನೈ ತಂಡದಿಂದ ಭರ್ಜರಿ ತಯಾರಿ

ಐಪಿಎಲ್ ಆಡಿ, ಆದ್ರೆ ಹೆಚ್ಚು ಆಯಾಸ ಮಾಡಿಕೊಂಡು ವಿಶ್ವಕಪ್‌ ಗೆಲ್ಲುವ ಅವಕಾಶ ಕಳೆದುಕೊಳ್ಳಲು ದಾರಿಯಾಗಬೇಡಿ ಎಂದು ಕೊಹ್ಲಿ ಟೀಮ್ ಇಂಡಿಯಾ ಆಟಗಾರರನ್ನು ಎಚ್ಚರಿಸಿದ್ದಾರೆ. ಐಪಿಎಲ್ ವೇಳೆ ಕೆಲಸದ ಹೊರೆ ನಿಭಾಯಿಸುವುದನ್ನು ಆಟಗಾರರು ಮರೆಯಬಾರದು ಎಂಬರ್ಥದಲ್ಲಿ ಕೊಹ್ಲಿ ಮಾತನಾಡಿದ್ದಾರೆ.

ಆಸೀಸ್ ವಿರುದ್ಧ ಭಾರತ ಸರಣಿ ಸೋತಿದ್ದಕ್ಕೆ ಕಾರಣ ಹೇಳಿದ ರಿಕಿ ಪಾಂಟಿಂಗ್!ಆಸೀಸ್ ವಿರುದ್ಧ ಭಾರತ ಸರಣಿ ಸೋತಿದ್ದಕ್ಕೆ ಕಾರಣ ಹೇಳಿದ ರಿಕಿ ಪಾಂಟಿಂಗ್!

'ನಾನೊಂದುವೇಳೆ 10, 12 ಅಥವಾ 15 ಇನ್ನಿಂಗ್ಸ್‌ಗಳನ್ನು ಐಪಿಎಲ್ ನಲ್ಲಿ ಆಡಬಲ್ಲೆನಾದರೆ ಉಳಿದ ಆಟಗಾರರೂ ಇಷ್ಟೇ ಇನ್ನಿಂಗ್ಸ್‌ಗಳನ್ನು ಆಟಬಲ್ಲರು ಎಂದರ್ಥವಲ್ಲ. ಒಬ್ಬರ ದೇಹ ಸ್ಪಂದನೆ ಇನ್ನೊಬ್ಬರಂತಿರಲ್ಲ. ಇಷ್ಟು ಪಂದ್ಯಗಳ ಬಳಿಕ ನಾನು ವಿಶ್ರಾಂತಿ ಪಡೆಯಬೇಕಾಗಬಹುದು. ಆದರೆ ಉಳಿದವರಲ್ಲಿ ನನಗಿಂತಲೂ ಹೆಚ್ಚು ಇನ್ನಿಂಗ್ಸ್‌ ಆಡುವ ಸಾಮರ್ಥ್ಯ ಇರಬಹುದು' ಎಂದು ಕೊಹ್ಲಿ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಹೆಚ್ಚು ಇನ್ನಿಂಗ್ಸ್‌ಗಳನ್ನು ಆಡುವ ಆಟಗಾರರನ್ನು ವಿಶ್ವಕಪ್ ತಂಡದಲ್ಲಿ ಪರಿಗಣಿಸಲಾಗುತ್ತದೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ. ಇದನ್ನೂ ಪರಿಗಣಿಸಿ ಕೊಹ್ಲಿ ಅಭಿಪ್ರಾಯ ಹಂಚಿಕೊಂಡರು. 'ಐಪಿಎಲ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಲು ಸಮರ್ಥರಿದ್ದರೆ ಆಡಿ. ಆದರೆ ಅದನ್ನು ಪರಿಗಣಿಸಿ ವಿಶ್ವಕಪ್‌ ಆಯ್ಕೆ ನಡೆಸುತ್ತಾರೆ ಅಂದುಕೊಳ್ಳಬೇಡಿ' ಎಂದು ವಿರಾಟ್ ತಿಳಿಸಿದ್ದಾರೆ.

ಮುಕ್ತಾಯ ಹಾದಿಯಲ್ಲಿ ನಿಷೇಧ: ರಾಜಸ್ಥಾನ್ ರಾಯಲ್ಸ್ ತಂಡ ಸೇರಿದ ಸ್ಮಿತ್ಮುಕ್ತಾಯ ಹಾದಿಯಲ್ಲಿ ನಿಷೇಧ: ರಾಜಸ್ಥಾನ್ ರಾಯಲ್ಸ್ ತಂಡ ಸೇರಿದ ಸ್ಮಿತ್

'ಕೆಲವರ ದೇಹ ನನಗಿಂತ ಹೆಚ್ಚು ಅಥವಾ ಕಡಿಮೆ ಪಂದ್ಯಗಳಿಗೆ ಸಮರ್ಥವಿರಬಹುದು. ಅದು ಸಂಪೂರ್ಣ ವೈಯಕ್ತಿಕ ವಿಚಾರ. ವಿಶ್ವಕಪ್‌ನಲ್ಲಿ ಭಾಗವಹಿಸುವುದನ್ನು ಎಲ್ಲರೂ ಬಯಸುತ್ತಾರೆ. ವಿಶ್ವಕಪ್‌ನಂತ ದೊಡ್ಡ ಟೂರ್ನಿಯನ್ನು ಕಳೆದುಕೊಳ್ಳಲು ಯಾರೂ ಬಯಸಲಾರರು. ಆದರೆ ಈ ಪ್ರತಿಷ್ಠಿತ ಟೂರ್ನಿಗೆ ಆಯ್ಕೆ ನಡೆಸುವವರೂ ಅಷ್ಟೇ ಸ್ಮಾರ್ಟ್ ಇರುತ್ತಾರೆ' ಎಂದು ಕೊಹ್ಲಿ ವಿವರಿಸಿದ್ದಾರೆ.

Story first published: Sunday, March 17, 2019, 17:36 [IST]
Other articles published on Mar 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X