ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರ್ಭಜನ್ ಸಿಂಗ್ ಮಿಮಿಕ್ರಿ ಮಾಡಿ ಕಾಲೆಳೆದ ವಿರಾಟ್ ಕೊಹ್ಲಿ: ವೀಡಿಯೋ

ಹರ್ಭಜನ್ ಸಿಂಗ್ ಮುಂದೆಯೇ ತಮಾಷೆ ಮಾಡಿದ ವಿರಾಟ್ ಕೊಹ್ಲಿ | VIRAT KOHLI | HARBHAJAN SINGH | ONEINDIA KANNADA
Virat Kohli Hilarious Imitation Of Harbhajan Singhs Bowling Action

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಟದಲ್ಲಷ್ಟೇ ಅಲ್ಲ ತಮ್ಮ ಸಹ ಆಟಗಾರರ ಕಾಲೆಳೆದು ಮಜಾ ಖುಷಿಪಡುವುದರಲ್ಲೂ ನಿಸ್ಸೀಮರು. ತಂಡದ ಅಭ್ಯಾಸದ ಸಂದರ್ಭದಲ್ಲಿ ಈ ರೀತಿ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರರನ್ನು ಅಣಕಿಸುವುದು ಸಾಮಾನ್ಯವಾಗಿದೆ. ನಿನ್ನೆ ನಡೆದ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರನ್ನು ಅವರ ಮುಂದೆಯೇ ಅಣಕಿಸಿ ತಮಾಷೆ ಮಾಡಿದ್ದಾರೆ.

ಟೀಮ್ ಇಂಡಿಯಾ ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಅವರು ವಿಶಿಷ್ಟ ಬೌಲಿಂಗ್ ಶೈಲಿಯಿಂದ ಖ್ಯಾತರಾದವರು. ಅವರ ಬೌಲಿಂಗ್ ಶೈಲಿಯ ಮತ್ತು ಬಳಿಕ ಅವರ ವರ್ತನೆಯನ್ನು ತಮಾಷೆಯಾಗಿ ವಿರಾಟ್ ಕೊಹ್ಲಿ ಹರ್ಭಜನ್ ಸಿಂಗ್ ಅವರ ಮುಂದೆಯೆ ಮಿಮಿಕ್ರಿ ಮಾಡಿದ್ದಾರೆ. ವಿರಾಟ್ ಕೊಹ್ಲಿ ಈ ರೀತಿ ತಮಾಷೆ ಮಾಡಿದ್ದನ್ನು ಹರ್ಭಜನ್ ಸಿಂಗ್ ಕೂಡ ನೋಡಿ ನಕ್ಕು ಖುಷಿಪಟ್ಟಿದ್ದಾರೆ.

ದ್ವಿತೀಯ ಟಿ20: ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾಕ್ಕೆ ಸುಲಭ ಜಯದ್ವಿತೀಯ ಟಿ20: ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾಕ್ಕೆ ಸುಲಭ ಜಯ

ಹರ್ಭಜನ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ 2011ರ ವಿಶ್ವಕಪ್‌ ತಂಡದ ಸದಸ್ಯರಾಗಿದ್ದರು. ಹಲವು ವರ್ಷಗಳ ಕಾಲ ಇಬ್ಬರೂ ಟೀಮ್ ಇಂಡಿಯಾದಲ್ಲಿ ಜೊತೆಯಾಗಿ ಆಡಿ ಆತ್ಮೀಯರಾಗಿದ್ದಾರೆ. ಹರ್ಭಜನ್ ಸಿಂಗ್ ಕೂಡ ತಮಾಷೆಯ ಮನೋಭಾವದ ಆಟಗಾರನಾಗಿದ್ದು ಇಬ್ಬರ ಆ ಆ೬ತ್ಮೀಯತೆ ನಿನ್ನೆ ಪ್ರಸಾರವಾದ ದೃಶ್ಯಗಳಿಂದ ಸ್ಪಷ್ಟವಾಗುತ್ತದೆ.

ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ಬಳಿಕ ಎರಡನೇ ಪಂದ್ಯವನ್ನು ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಟೀಮ್ ಇಂಡಿಯಾ ಸರಣಿಯನ್ನು 1-0ಯಿಂದ ಮುನ್ನಡೆ ಪಡೆದುಕೊಂಡಿದೆ. ಈ ಸರಣಿಯಲ್ಲಿ ಕಳೆದ ಮೂರು ಸರಣಿಯಿಂದ ಗಾಯದ ಕಾರಣದಿಂದ ಹೊರಗುಳಿದಿದ್ದ ವೇಗಿ ಜಸ್ಪ್ರೀತ್ ಬೂಮ್ರಾ ನಿನ್ನೆಯ ಪಂದ್ಯದ ಮೂಲಕ ತಂಡಕ್ಕೆ ಮರಳಿದ್ದಾರೆ.

ಐಪಿಎಲ್ 2020ರ ಫೈನಲ್ ಪಂದ್ಯದ ದಿನಾಂಕ, ಸಮಯ ಪ್ರಕಟ!ಐಪಿಎಲ್ 2020ರ ಫೈನಲ್ ಪಂದ್ಯದ ದಿನಾಂಕ, ಸಮಯ ಪ್ರಕಟ!

ಟೀಮ್ ಇಂಡಿಯಾದ ಮತ್ತೋರ್ವ ಆಟಗಾರ ಶಿಖರ್ ಧವನ್ ಕೂಡ ನಿನ್ನೆಯ ಪಂದ್ಯದಲ್ಲಿ ತಂಡಕ್ಕೆ ಮರಳಿದ್ದಾರೆ. ಆದರೆ ಕಳೆದ 12 ಪಂದ್ಯಗಳಲ್ಲಿ 272 ರನ್ ಮಾತ್ರವೇ ಗಳಿಸಿದ್ದು 110.56 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಈ ಮಧ್ಯೆ ಧವನ್ ಗಾಯಗೊಂಡ ಕಾರಣಕ್ಕೆ ಆರಂಭಿಕನಾಗಿ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಿರುವ ಕೆಎಲ್ ರಾಹುಲ್ 9ಇನ್ನಿಂಗ್ಸ್‌ಗಳಿಂದ 356 ರನ್‌ಗಳಿಸಿದ್ದಾರೆ. 142.40ಯಷ್ಟು ಅದ್ಭುತ ಸ್ಟ್ರೈಕ್ ರೇಟ್ ಹೊಂದಿದ್ದಾರೆ

Story first published: Wednesday, January 8, 2020, 13:12 [IST]
Other articles published on Jan 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X