ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ತಾನು ಬಯಸಿದ್ದನ್ನೆಲ್ಲಾ ಮಾಡುವ ಕೊಹ್ಲಿಗೆ ನಾವು ಕುಮ್ಮಕ್ಕು ನೀಡುತ್ತಿದ್ದೇವೆ!'

ತಾನು ಬಯಸಿದ್ದನ್ನೆಲ್ಲಾ ಮಾಡುವ ಕೊಹ್ಲಿಗೆ ನಾವು ಕುಮ್ಮಕ್ಕು ನೀಡುತ್ತಿದ್ದೇವೆ! | Oneindia Kannada
Virat Kohli is doing all he wants and were letting it happen: Bedi

ನವದೆಹಲಿ, ನವೆಂಬರ್ 19: ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ಅವರು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕೊಹ್ಲಿ ತನಗನ್ನಿಸಿದಂತೆಲ್ಲ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಮ್ಮ ಗುರುತು ಉಳಿಸಲು ಬಯಸಿದ್ದೇವೆ: ರೋ'ಹಿಟ್'ಆಸ್ಟ್ರೇಲಿಯಾದಲ್ಲಿ ನಮ್ಮ ಗುರುತು ಉಳಿಸಲು ಬಯಸಿದ್ದೇವೆ: ರೋ'ಹಿಟ್'

'ಕೊಹ್ಲಿ ತನಗನ್ನಿಸಿದ್ದನ್ನೆಲ್ಲ ಮಾಡುತ್ತಿದ್ದಾರೆ. ಅವರೇನೇ ಮಾಡಿದ್ರೂ ಅದಕ್ಕೆ ನಾವು ಕಣ್ಣುಮುಚ್ಚಿ ಬೆಂಬಲಿಸುತ್ತಿದ್ದೇವೆ. ಆದರೆ ಕೊಹ್ಲಿ ತನ್ನ ಒಬ್ಬನ ನಿರ್ಧಾರವನ್ನು ಎತ್ತಿಡುವ ಮೂಲಕ ಭಾರತದ ಇಡೀ ಕ್ರಿಕೆಟ್ ತಂಡವನ್ನೇ ತನ್ನ ನಿಯಂತ್ರಣಕ್ಕೆ ತಂದುಕೊಳ್ಳುತ್ತಿದ್ದಾರೆ' ಎಂದು ಬಿಶನ್ ಸಿಂಗ್ ತಿಳಿಸಿದ್ದಾರೆ.

'ಒಬ್ಬ ವ್ಯಕ್ತಿ (ಕೊಹ್ಲಿ) ತಾನು ಏನು ಬಯಸಿದ ಎಲ್ಲವನ್ನೂ ಮಾಡುತ್ತಿದ್ದಾನೆ. ನಾವು ಅವನಿಗನ್ನಿಸಿದ್ದನ್ನು ಮಾಡುವುದಕ್ಕೂ ಬಿಡುತ್ತಿದ್ದೇವೆ. ಅನಿಲ್ (ಕುಂಬ್ಳೆ), ಕೋಚ್ ಹುದ್ದೆ ತ್ಯಜಿಸಿದ್ದು ಇದೇ ಕಾರಣಕ್ಕೆ. ಇದೇ ವಿಚಾರದ ಬಗ್ಗೆ ನಾನಿಲ್ಲಿ ಇವತ್ತು ಮಾತನಾಡುತ್ತಿದ್ದೇನೆ' ಎಂದು ಬೇಡಿ ಹೇಳಿದ್ದಾರೆ.

ಹಾಗಂತ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಶ್ಲಾಘನೆಯನ್ನೂ ಬಿಶನ್ ವ್ಯಾಕ್ತಪಡಿಸಿದ್ದಾರೆ. 'ನಮ್ಮ ತಂಡ ಕೊಹ್ಲಿಯನ್ನು ಅವಲಂಭಿಸಿರುವುದೂ ವಾಸ್ತವ. ಪಂದ್ಯದ ವೇಳೆ ಕೊಹ್ಲಿ ಮೇಲೆ ನಿರೀಕ್ಷೆಯನ್ನಿಡುವ ಮೂಲಕ ನಾವು ಆತನ ಮೇಲೆ ಎಷ್ಟು ಒತ್ತಡವನ್ನು ಹೇರುತ್ತೇವೆ ಎನ್ನೋದನ್ನು ಊಹಿಸಿಕೊಳ್ಳಿ' ಎಂದು ಬಿಶನ್ ಸಿಂಗ್ ವಿವರಿಸಿದರು.

ಪಾಕ್ ವಿರುದ್ಧ ನ್ಯೂಜಿಲೆಂಡ್‌ಗೆ ರೋಚಕ ಜಯ ತಂದಿತ್ತ 'ಮುಂಬೈ' ಬೌಲರ್!ಪಾಕ್ ವಿರುದ್ಧ ನ್ಯೂಜಿಲೆಂಡ್‌ಗೆ ರೋಚಕ ಜಯ ತಂದಿತ್ತ 'ಮುಂಬೈ' ಬೌಲರ್!

ತಂಡದ ಬಗ್ಗೆ ಅಭಿಪ್ರಾಯ ತಿಳಿಸುತ್ತ ಸಿಂಗ್, 'ನಮ್ಮ ತಂಡ ಬಲಿಷ್ಠವಾಗಿದೆ. ಆದರೆ ಇದೇ ತಂಡ ಇಂಗ್ಲೆಂಡ್ ಮತ್ತು ಸೌತಾಫ್ರಿಕಾಕ್ಕೆ ಹೋದಾಗ ದುರ್ಬಲ ಅನ್ನಿಸಿದ್ದನ್ನೂ ನಾವು ನೋಡಿದ್ದೇವೆ. ಆಸೀಸ್ ನ ಇಬ್ಬರು ಆಟಗಾರರು (ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್) ನಿಷೇಧಕ್ಕೀಡಾಗಿರುವುದು ನಿಜ. ಹಾಗಂತ ಇಡೀ ತಂಡ ಇಬ್ಬರನ್ನೇ ಅವಲಂಭಿಸಿತ್ತು ಎನ್ನುವ ನಿರ್ಧಾರಕ್ಕೂ ಬರುವಂತಿಲ್ಲ' ಎಂದರು.

Story first published: Monday, November 19, 2018, 21:03 [IST]
Other articles published on Nov 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X