ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಎಲ್ಲಾ ಮಾದರಿಗಳಲ್ಲಿ ಪರಿಪೂರ್ಣ ಆಟಗಾರ: ಜೋ ರೂಟ್

Virat Kohli is most complete player across formats, feels Joe Root

ಲಂಡನ್: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ ಪರಿಪೂರ್ಣ ಆಟಗಾರ ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಹೇಳಿದ್ದಾರೆ. ಕೊಹ್ಲಿ ಆಟದ ವಿಚಾರದಲ್ಲಿ ಆಲ್ ರೌಂಡರ್. ಅದರಲ್ಲೂ ವೈಟ್ ಬಾಲ್ ಕ್ರಿಕೆಟ್‌ನಲ್ಲಿರುವ ಅವರ ಟೋಟಲ್ ಚೇಸಿಂಗ್ ಮಾಡುವ ಸಾಮರ್ಥ್ಯ ಅಸಾಧಾರಣ ಎಂದು ರೂಟ್ ಹೇಳಿದ್ದಾರೆ.

ಪಾಂಡ್ಯ ಸಹೋದರರಿಗೆ ಜೆರ್ಸಿ ನಂ.7 ಕೊಡುಗೆಯಿತ್ತ ಎಂಎಸ್ ಧೋನಿಪಾಂಡ್ಯ ಸಹೋದರರಿಗೆ ಜೆರ್ಸಿ ನಂ.7 ಕೊಡುಗೆಯಿತ್ತ ಎಂಎಸ್ ಧೋನಿ

ತನ್ನದೇ ದೇಶದ ಜೋಸ್ ಬಟ್ಲರ್ ಕೂಡ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸದ್ಯ ವಿಶ್ವದಲ್ಲಿ ಪರಿಪೂರ್ಣ ಆಟಗಾರ ಎಂದೂ ಜೋ ರೂಟ್ ಹೇಳಿಕೊಂಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಬೆಸ್ಟ್ ಬ್ಯಾಟ್ಸ್‌ಮನ್‌ ಅಂತ ಬಹುತೇಕ ಎಲ್ಲಾ ಕ್ರಿಕೆಟರ್‌ಗಳು ಒಪ್ಪಿಕೊಂಡಿದ್ದಾರೆ. ರೂಟ್ ಕೂಡ ಕೊಹ್ಲಿಯನ್ನು ಕೊಂಡಾಡಿದ್ದಾರೆ.

'ವಿರಾಟ್ ಕೊಹ್ಲಿ ಬಹುಶಃ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಪರಿಪೂರ್ಣ ಬ್ಯಾಟ್ಸ್‌ಮನ್. ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಕೊಹ್ಲಿ ಚೇಸಿಂಗ್ ಮಾಡುವ ಸಾಮರ್ಥ್ಯ ಅದ್ಭುತ. ಅದರಲ್ಲೂ ಕೊಹ್ಲಿ ಅಜೇಯವಾಗಿ ಉಳಿದರೆ ಇನ್ನೂ ಉತ್ತಮ ಪ್ರದರ್ಶನ ನೀಡುತ್ತಾರೆ,' ಎಂದು ರೂಟ್ ವಿವರಿಸಿದ್ದಾರೆ.

CSK ವಿರುದ್ಧ ಹಸಿರು ಜರ್ಸಿಯಲ್ಲಿ ಕಣಕ್ಕಿಳಿಯಲಿದೆ RCBCSK ವಿರುದ್ಧ ಹಸಿರು ಜರ್ಸಿಯಲ್ಲಿ ಕಣಕ್ಕಿಳಿಯಲಿದೆ RCB

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಭಾರತದ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಸದ್ಯ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂಚೂಣಿ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

Story first published: Saturday, October 24, 2020, 17:17 [IST]
Other articles published on Oct 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X