ಜಂಪಾಗೆ ಕೊಹ್ಲಿ ಮಾಡಿದ ಆ ಒಂದು ಸಂದೇಶ ಮೊದಲ ದಿನೇ ಆತ್ಮೀಯರನ್ನಾಗಿ ಮಾಡಿತ್ತು!

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಪಿನ್ನರ್ ಆಡಂ ಜಂಪಾ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವ್ಯಕ್ತಿತ್ವದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಐಪಿಎಲ್ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡದ ಭಾಗವಾಗಿದ್ದ ಆಡಂ ಜಂಪಾ ಕೋಹ್ಲಿ ಓರ್ವ ಹುರಿಪಿನ, ಕೂಲ್ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.

ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಇತರ ಆಟಗಾರರ ಬಗ್ಗೆ ವ್ಯಕ್ತಪಡಿಸುತ್ತಿದ್ದ ಉಪಚಾರದ ಬಗ್ಗೆ ಜಂಪಾ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆರಂಭದ ದಿನದಲ್ಲಿ ವಾಟ್ಸ್‌ಆಫ್‌ನಲ್ಲಿ ಸಂದೇಶವೊಂದು ಬಂದಾಗ ಅದು ಯಾರ ನಂಬರ್ ಎಂಬುದು ತಿಳಿದಿರಲಿಲ್ಲ. ಬಳಿಕ ಅದು ನಾಯಕ ವಿರಾಟ್ ಕೊಹ್ಲಿಯದೆಂದು ಅರಿವಾಯಿತು ಎಂದು ಜಂಪಾ ಹಂಚಿಕೊಂಡಿದ್ದಾರೆ.

ತಂದೆಯ ಅಗಲಿಕೆಯ ನೋವಿನಲ್ಲೂ ದೇಶ ಸೇವೆಗೆ ಸಿರಾಜ್ ಬಯಸಿದ್ದಾರೆ: ಬಿಸಿಸಿಐ

"ಅದು ನಾನು ತಂಡವನ್ನು ಸೇರಿಕೊಂಡಿದ್ದ ಮೊದಲ ದಿನವಾಗಿತ್ತು. ವಾಟ್ಸ್‌ಆಪ್‌ನಲ್ಲಿ ಕೊಹ್ಲಿ ನನಗೆ "ಜಾಂಪ್ಸ್, ಡೆಲಿವರೋ ಸಸ್ಯಹಾರಿ ಹೋಟೆಲ್‌ನಿಂದ 15 ಯುಎಸ್‌ಡಾಲರ್ ಕಡಿತದ ಕೂಪನ್‌ ನಿಮಗಾಗಿ ಇದೆ. ಇದು ನಿಜಕ್ಕೂ ಉತ್ತಮವಾದ ಹೋಟೆಲ್ ಆಗಿದೆ" ಎಂದು ತಮಾಷೆಯಾಗಿ ಸಂದೇಶ ಕಳುಹಿಸಿದ್ದರು. ಈ ಮೂಲಕ ನಾವಿಬ್ಬರೂ ಸುದೀರ್ಘ ಕಾಲದಿಂದ ಬಲ್ಲವರೆಂಬತೆ ಭಾವನೆ ಮೂಡಿಸಿದರು" ಎಂದು ಜಂಪಾ ಹೇಳಿದ್ದಾರೆ.

"ಆತ ಕ್ರಿಕೆಟ್ ಅಂಗಳದಲ್ಲಿ ಕಾಣುವುದಕ್ಕಿಂತ ಸಂಪೂರ್ಣ ಭಿನ್ನವಾದ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ. ಆಟದಲ್ಲಿ ಹಾಗೂ ಅಭ್ಯಾಸದಲ್ಲಿ ಆತ ಯಾವಾಗಲೂ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಆತ ಎಲ್ಲರಿಗಿಂತಲೂ ಹೆಚ್ಚಾಗಿ ಸೋಲುವುದನ್ನು ದ್ವೇಶಿಸುತ್ತಾರೆ. ಇದನ್ನು ಅವರು ಪ್ರತಿಯೊಬ್ಬರಿಗಿಂತಲೂ ಹೆಚ್ಚಾಗಿ ವ್ಯಕ್ತಪಡಿಸುತ್ತಾರೆ ಎಂದು ಜಂಪಾ ಹೇಳಿದ್ದಾರೆ.

ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವ ಸವಾಲನ್ನು ನಾವು ಇಷ್ಟಪಡುತ್ತೇನೆ. ಬಹುಶಃ ಆತ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಏಕದಿನದಲ್ಲಿ ಆತ 43 ಆತಕ ಬಾರಿಸಿದ್ದಾರೆ. ಅದೇನೇ ಆಗಿದ್ದರೂ ಆತನದ್ದು ದೊಡ್ಡ ವಿಕೆಟ್. ಆತನೋರ್ವ ಸೂಪರ್‌ಮ್ಯಾನ್ ಎಂದು ಆಡಂ ಜಂಪಾ ಹೇಳಿಕೊಂಡಿದ್ದಾರೆ

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, November 22, 2020, 13:24 [IST]
Other articles published on Nov 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X