ವಿರಾಟ್ ಕೊಹ್ಲಿಯನ್ನು ರೋಜರ್ ಫೆಡರರ್‌ಗೆ ಹೋಲಿಸಿದ ಎಬಿ ಡಿ ವಿಲಿಯರ್ಸ್

ಕೇಪೌಟೌನ್, ಮೇ 12: ಕಳೆದ 9 ವರ್ಷಗಳಿಂದಲೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಡ್ರೆಸ್ಸಿಂಗ್ ರೂಮ್‌ನಲ್ಲಿದ್ದು ಬಹಳ ಹತ್ತಿರದಿಂದ ನೋಡಿರುವುದರಿಂದ ನಾಯಕ ವಿರಾಟ್ ಕೊಹ್ಲಿ ಹೇಗಿರುತ್ತಾರೆಂದು ತಂಡದ ಸಹ ಆಟಗಾರ ಎಬಿ ಡಿ ವಿಲಿಯರ್ಸ್‌ಗೆ ಚೆನ್ನಾಗೇ ಗೊತ್ತಿದೆ.

ಕೊಹ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳನ್ನು ಉರಿಸುತ್ತಿದ್ದರು ಎಂದ ಬಾಂಗ್ಲಾ ಕ್ರಿಕೆಟಿಗ!

ಇದೇ ಕಾರಣಕ್ಕೆ ಕ್ರಿಕೆಟ್‌ ಆಟವನ್ನು ಸಹಜವಾಗಿ, ತುಂಬಾ ಸುಲಭವಾಗಿ ಆಡುವ ಕೌಶಲವನ್ನು ಹೊಂದಿರುವ ವಿರಾಟ್ ಕೊಹ್ಲಿಯನ್ನು 36ರ ಹರೆಯದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಟೆನಿಸ್ ಲೋಕದ ದಂತಕತೆ ರೋಜರ್ ಫೆಡರರ್‌ಗೆ ಹೋಲಿಸಿದ್ದಾರೆ.

ಜಸ್ಪ್ರೀತ್ ಬೂಮ್ರಾಗೆ ಅಮೂಲ್ಯ ಸಲಹೆ ನೀಡಿದ ಪಾಕ್ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್

ಕೊಹ್ಲಿಯನ್ನು ಸ್ಮಿತ್‌ಗೆ ಹೋಲಿಸಿ ಜಿಂಜಾಬ್ವೆ ಮಾಜಿ ಕ್ರಿಕೆಟರ್, ಕಾಮೆಂಟೇಟರ್ ಪೊಮ್ಮಿ ಎಂಬಂಗ್ವಾ ಜೊತೆಗಿನ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಮಾತನಾಡಿದ ಎಬಿ ಡಿ, 'ಕೊಹ್ಲಿಯೊಬ್ಬ ನೈಸರ್ಗಿಕವಾಗಿ ಚೆಂಡಿನ ಹೊಡೆತಗಾರ. ಅವರು ರೋಜರ್ ಫೆಡರರ್ ಇದ್ದಂತೆ. ಅದೇ ಸ್ಮಿತ್ (ರಾಫೆಲ್) ನಡಾಲ್ ಇದ್ದಂತೆ. ಅವರ ಮಾನಸಿಕವಾಗಿ ಹೆಚ್ಚು ಬಲಶಾಲಿ,' ಎಂದರು.

ನಮ್ಮ ದೇಶದಲ್ಲಿ ಐಪಿಎಲ್ ಆಯೋಜಿಸಿ: ಶ್ರೀಲಂಕಾ ಬಳಿಕ ಮತ್ತೊಂದು ದೇಶ ಮನವಿ

'ಹೆಚ್ಚು ರನ್ ಮಾಡಲು ಸ್ಮಿತ್ ದಾರಿಯನ್ನು ಕಂಡುಕೊಳ್ಳುತ್ತಾರೆ. ಅವರು ಸ್ವಾಭಾವಿಕವಾಗಿ ಕಾಣದಿದ್ದರೂ ಅವರು ರನ್ ನಿಭಾಯಿಸಬಲ್ಲರು, ದಾಖಲೆಗಳನ್ನು ಮುರಿಯಬಲ್ಲರು. ಆದರೆ ಕೊಹ್ಲಿ ಸ್ವಾಭಾವಿಕ ಆಟದಿಂದ ವಿಶ್ವದಾದ್ಯಂತ ರನ್ ಗಳಿಸಿದ್ದಾರೆ. ಹೀಗಾಗಿ ಅವರೇ ನನ್ನ ನೆಚ್ಚಿನ ಆಯ್ಕೆ,' ಎಂದು ಎಬಿ ಡಿ ವಿವರಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, May 12, 2020, 9:43 [IST]
Other articles published on May 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X