ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಾಖಲೆಯಲ್ಲಿ ತೆಂಡೂಲ್ಕರ್, ದ್ರಾವಿಡ್ ಸಾಲಿಗೆ ಸೇರಿಕೊಂಡ ವಿರಾಟ್ ಕೊಹ್ಲಿ!

Virat Kohli joins Sachin Tendulkar, Rahul Dravid in illustrious list

ಅಡಿಲೇಡ್, ಡಿಸೆಂಬರ್ 8: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ ನಲ್ಲಿ 1000 ರನ್ ಪೂರೈಸಿದ ನಾಲ್ಕನೇ ಭಾರತೀಯ ಆಟಗಾರನಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ಶನಿವಾರ (ಡಿಸೆಂಬರ್ 8) ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಮೂರನೇ ದಿನದಾಟದ ವೇಳೆ ಕೊಹ್ಲಿ ಈ ಸಾಧನೆ ಮಾಡಿದರು.

ವಿಜಯ್ ಶಂಕರ್ ಅಬ್ಬರ: ನ್ಯೂಜಿಲೆಂಡ್ ವಿರುದ್ಧ ಮನೀಶ್ ಪಾಂಡೆ ಪಡೆಗೆ ಜಯವಿಜಯ್ ಶಂಕರ್ ಅಬ್ಬರ: ನ್ಯೂಜಿಲೆಂಡ್ ವಿರುದ್ಧ ಮನೀಶ್ ಪಾಂಡೆ ಪಡೆಗೆ ಜಯ

ಭಾರತದ ಮೊದಲ ಇನ್ನಿಂಗ್ಸ್ ನಲ್ಲಿ ಕೊಹ್ಲಿ 3 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಶನಿವಾರ ಭಾರತದ ದ್ವಿತೀಯ ಇನ್ನಿಂಗ್ಸ್ ವೇಳೆ 34 ರನ್ ಪೇರಿಸಿ ನಾಥನ್ ಲಿಯಾನ್‌ಗೆ ಕೊಹ್ಲಿ ವಿಕೆಟ್ ನೀಡಿದರು. ಆದರೆ ಕೊಹ್ಲಿ ಗಳಿಸಿದ ಈ ಅಲ್ಪ ರನ್ ಕೂಡ ದಾಖಲೆಯಾಗಿ ಗುರುತಿಸಿಕೊಂಡಿತು.

ಟೆಸ್ಟ್ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾ ನೆಲದಲ್ಲೇ ನಡೆದ ನಡೆದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್, ವಿವಿಎಸ್‌ ಲಕ್ಷ್ಮಣ್, ರಾಹುಲ್ ದ್ರಾವಿಡ್ 1000 ರನ್ ಪೂರೈಸಿದ ದಾಖಲೆ ನಿರ್ಮಿಸಿದ್ದರು. ಕೊಹ್ಲಿ ಕೂಡ ಆ ಯಾದಿಯ ನಾಲ್ಕನೇ ಭಾರತೀಯನಾಗಿ ಸಾಲಿನಲ್ಲಿ ಸೇರಿಕೊಂಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಧೋನಿ ದಾಖಲೆ ಸರಿದೂಗಿಸಿದ ರಿಷಬ್ ಪಂತ್!ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಧೋನಿ ದಾಖಲೆ ಸರಿದೂಗಿಸಿದ ರಿಷಬ್ ಪಂತ್!

ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 88 ಓವರ್‌ಗಳಲ್ಲಿ 250 ರನ್ ಪೇರಿಸಿದ್ದರೆ, ಆಸ್ಟ್ರೇಲಿಯಾ 98.4 ಓವರ್‌ನಲ್ಲಿ 235ರನ್ ಪೇರಿಸಿ 15 ರನ್ ಹಿನ್ನಡೆ ಅನುಭವಿಸಿತ್ತು. ದ್ವಿತೀಯ ಇನ್ನಿಂಗ್ಸ್ ಇಳಿದಿರುವ ಭಾರತ ಶನಿವಾರ (ಡಿಸೆಂಬರ್ 8) ದಿನದಾಂತ್ಯಕ್ಕೆ 61 ಓವರ್‌ಗೆ 3 ವಿಕೆಟ್ ಕಳೆದು ಭಾರತ 151 ರನ್ ಪೇರಿಸಿತ್ತು. ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿದ್ದರು.

Story first published: Saturday, December 8, 2018, 18:20 [IST]
Other articles published on Dec 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X