ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ದಾಖಲೆ ಮೀರಿಸಲು ರೇಸ್‌ನಲ್ಲಿದ್ದಾರೆ ಕೊಹ್ಲಿ, ವಿಲಿಯಮ್ಸನ್

IND vs NZ 1st t20 : Kohli and Williamson are in one more race | Virat Kohli | WIlliamson | indvsnz
Virat Kohli, Kane Williamson in race to surpass MS Dhoni’s mark in illustrious T20I list

ಆಕ್ಲೆಂಡ್‌, ಜನವರಿ 23: ವಿರಾಟ್‌ ಕೊಹ್ಲಿಯಿಂದ ದಾಖಲೆ ಸೃಷ್ಠಿಯಾಗದ ಪಂದ್ಯಗಳೇ ಈ ದಿನಗಳಲ್ಲಿ ಕಾಣ ಸಿಗುತ್ತಿಲ್ಲ. ಎಲ್ಲಾ ಪಂದ್ಯಗಳಲ್ಲೂ ನಾಯಕ ಕೊಹ್ಲಿ ಒಂದಿಲ್ಲೊಂದು ದಾಖಲೆಗಳನ್ನು ನಿರ್ಮಿಸಲುತ್ತಲೇಯಿದ್ದಾರೆ. ಮುಂಬರಲಿರುವ ನ್ಯೂಜಿಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲೂ ಕೊಹ್ಲಿ ವಿಶೇಷ ದಾಖಲೆ ನಿರ್ಮಿಸುವುದರಲ್ಲಿದ್ದಾರೆ.

ವಿರಾಟ್ ಕೊಹ್ಲಿ ಎದುರಿಸುವ ಸವಾಲೇನೆಂದು ಬಾಯ್ಬಿಟ್ಟ ಆರ್‌ಸಿಬಿ ಕೋಚ್!ವಿರಾಟ್ ಕೊಹ್ಲಿ ಎದುರಿಸುವ ಸವಾಲೇನೆಂದು ಬಾಯ್ಬಿಟ್ಟ ಆರ್‌ಸಿಬಿ ಕೋಚ್!

ಜನವರಿ 24ರಿಂದ ಆರಂಭಗೊಳ್ಳಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಒಬ್ಬರೇ ಅಲ್ಲ, ಎದುರಾಳಿ ತಂಡದ ನಾಯಕ ಕೇನ್ ವಿಲಿಯಮ್ಸನ್‌ಗೂ ದಾಖಲೆ ಬರೆಯುವ ಅವಕಾಶವಿದೆ.

ಆಸಿಸ್ ಟಿ20 ವಿಶ್ವಕಪ್‌ ಗೆಲ್ಲಲು ವಿರಾಟ್ ಕೊಹ್ಲಿ ಅಡ್ಡಿ : ಸ್ಟೀವ್ ಸ್ಮಿತ್ಆಸಿಸ್ ಟಿ20 ವಿಶ್ವಕಪ್‌ ಗೆಲ್ಲಲು ವಿರಾಟ್ ಕೊಹ್ಲಿ ಅಡ್ಡಿ : ಸ್ಟೀವ್ ಸ್ಮಿತ್

ವಿರಾಟ್ ಕೊಹ್ಲಿ ಅಥವಾ ಕೇನ್ ವಿಲಿಯಮ್ಸನ್ ಇಬ್ಬರಲ್ಲಿ ಒಬ್ಬರು ಉತ್ತಮ ಬ್ಯಾಟಿಂಗ್ ಸಾಧನೆ ತೋರಿದರೂ ಟಿ20 ದಾಖಲೆಗಾಗಿ ಗುರುತಿಸಿಕೊಳ್ಳಲಿದ್ದಾರೆ.

ಧೋನಿ ದಾಖಲೆ ಪತನ ಸಾಧ್ಯತೆ

ಧೋನಿ ದಾಖಲೆ ಪತನ ಸಾಧ್ಯತೆ

ಟಿ20 ಕ್ರಿಕೆಟ್‌ನಲ್ಲಿ ನಾಯಕರಾಗಿದ್ದುಕೊಂಡು ಅತ್ಯಧಿಕ ರನ್‌ ಬಾರಿಸಿದ ದಾಖಲೆ ನಿರ್ಮಿಸಲು ಕೇನ್ ವಿಲಿಯಮ್ಸನ್ ಮತ್ತು ವಿರಾಟ್ ಕೊಹ್ಲಿಗೆ ಈ ಟಿ20 ಸರಣಿಯಲ್ಲಿ ಅವಕಾಶವಿದೆ. ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ದಕ್ಷಿಣ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಹೆಸರಿನಲ್ಲಿರುವ ದಾಖಲೆ ಸರಿಗಟ್ಟಲು ಕೊಹ್ಲಿ ಮತ್ತು ವಿಲಿಯಮ್ಸನ್ ಇಬ್ಬರಿಗೂ ಅವಕಾಶವಿದೆ.

ಡು ಪ್ಲೆಸಿಸ್‌ಗೆ ಅಗ್ರ ಸ್ಥಾನ

ಡು ಪ್ಲೆಸಿಸ್‌ಗೆ ಅಗ್ರ ಸ್ಥಾನ

ನಾಯಕನಾಗಿದ್ದು ಟಿ20ಯಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಸಾಲಿನಲ್ಲಿ ದಕ್ಷಿಣ ಆಫ್ರಿಕಾದ ಫಾ ಡು ಪ್ಲೆಸಿಸ್ ಅಗ್ರ ಸ್ಥಾನದಲ್ಲಿದ್ದಾರೆ. ಡು ಪ್ಲೆಸಿಸ್ 1273 ರನ್‌ಗಳಿಂದ ಮುಂಚೂಣಿಯಲ್ಲಿದ್ದಾರೆ. ಇನ್ನು ದ್ವಿತೀಯ ಸ್ಥಾನದಲ್ಲಿರುವ ಎಂಎಸ್ ಧೋನಿ (1112 ರನ್) ಅನಂತರದ ಸ್ಥಾನಗಳಲ್ಲಿ ಕೇನ್ ವಿಲಿಯಮ್ಸನ್ (1083), ವಿರಾಟ್ ಕೊಹ್ಲಿ (1032) ಇದ್ದಾರೆ.

ಸೇಡು ನಮ್ಮ ಮನಸ್ಸಿನಲ್ಲಿಲ್ಲ

ಸೇಡು ನಮ್ಮ ಮನಸ್ಸಿನಲ್ಲಿಲ್ಲ

ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ಕಡೆಯ ಬಾರಿ ಮುಖಾಮುಖಿಯಾಗಿದ್ದು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ. ಈ ಪಂದ್ಯದ ಸೆಮಿಫೈನಲ್‌ನಲ್ಲಿ ಕೊಹ್ಲಿ ಪಡೆ ಸೋತು 3ನೇ ವಿಶ್ವಕಪ್‌ನ ಆಸೆಯನ್ನು ಕೈಬಿಡಬೇಕಾಗಿತ್ತು. ಆದರೆ ಫೈನಲ್ ಪ್ರವೇಶಿದ್ದ ಕಿವೀಸ್‌ ಕೂಡ ಇಂಗ್ಲೆಂಡ್‌ ವಿರುದ್ಧ ಪರಾಭವಗೊಂಡು ಆಘಾತ ಅನುಭವಿಸಿತ್ತು. ಭಾರತ-ಕಿವೀಸ್ ಸರಣಿಯ ಬಗ್ಗೆ ಮಾತನಾಡಿರುವ ಕೊಹ್ಲಿ, ನ್ಯೂಜಿಲೆಂಡ್‌ ಬಗ್ಗೆ ನಮ್ಮ ತಲೆಯಲ್ಲಿ ಸೇಡಿಲ್ಲ ಎಂದಿದ್ದಾರೆ.

ಪಂದ್ಯದ ಆರಂಭ, ಪ್ರಸಾರ ಮಾಹಿತಿ

ಪಂದ್ಯದ ಆರಂಭ, ಪ್ರಸಾರ ಮಾಹಿತಿ

ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿರುವ ಭಾರತ ಅಲ್ಲಿ ಒಟ್ಟಿಗೆ 5 ಟಿ20, 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಟಿ20 ಸರಣಿಯ ಆರಂಭಿಕ ಪಂದ್ಯ ಆಕ್ಲೆಂಡ್‌ನ ಈಡನ್ ಪಾರ್ಕ್ ಸ್ಟೇಡಿಯಂನಲ್ಲಿ ಜನವರಿ 24ರಂದು 12.20 pmಗೆ ಶುರುವಾಗಲಿದೆ. ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್‌ ಚಾನೆಲ್ ಮತ್ತು ಹಾಟ್‌ ಸ್ಟಾರ್ ಜಾಲತಾಣ ನೇರಪ್ರಸಾರ ಗೊಳಿಸಲಿದೆ. ಮೈಖೇಲ್‌ ಕನ್ನಡದಲ್ಲೂ ಪಂದ್ಯದ ಲೈವ್ ಸ್ಕೋರ್‌ಕಾರ್ಡ್, ಲೈವ್ ಮ್ಯಾಚ್ ಅಪ್ಡೇಟ್ಸ್ ಲಭ್ಯವಾಗಲಿದೆ.

Story first published: Thursday, January 23, 2020, 18:50 [IST]
Other articles published on Jan 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X