ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎರಡನೇ ಏಕದಿನ ಪಂದ್ಯ; ಬೇಡದ ದಾಖಲೆ ಬರೆದ ಕೊಹ್ಲಿ-ಪೊಲಾರ್ಡ್

Virat Kohli, Kieron Pollard set unwanted record after golden ducks in Vizag

ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆದ್ದು ಬಿಗಿದೆ. ಭಾರತದ ಪರವಾಗಿ ಆರಂಭಿಕರು ಅಬ್ಬರಿಸಿದರೆ ಬಳಿಕ ಮಧ್ಯಮ ಕ್ರಮಾಂಕದ ಆಟಗಾರರು ಕೂಡ ವಿಂಡೀಸ್ ಬೌಲರ್‌ಗಳನ್ನು ಚಿಂದಿ ಉಡಾಯಿಸಿದರು. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತ್ರ ಡಕ್‌ಔಟ್‌ ಆಗಿ ನಿರಾಸೆ ಮೂಡಿಸಿದರು.

ವೆಸ್ಟ್‌ ಇಂಡೀಸ್ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಶಾಯ್ ಹೋಪ್ ಮತ್ತು ನಿಕೋಲಸ್ ಪೂರನ್ ಹೊರತು ಪಡಿಸಿದರೆ ಉಳಿದವರ್ಯಾರೂ ಬ್ಯಾಟಿಂಗ್‌ನಲ್ಲಿ ಮಿಂಚಿಲ್ಲ. ಆದರೆ ವಿಚಾರ ಅದಲ್ಲ. ವೆಸ್ಟ್‌ ಇಂಡೀಸ್‌ ನಾಯಕ ಕಿರಾನ್ ಪೊಲಾರ್ಡ್ ಕೂಡ ತಾನು ಎದುರಿಸದ ಮೊದಲ ಎಸೆತವನ್ನೇ ಎದುರಿಸಲಾಗದೆ ಔಟಾದರು.

ಈ ಮೂಲಕ ಎರಡೂ ತಂಡಗಳ ನಾಯಕರು ತಾವೆದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದಂತಾಗಿದೆ.ಅಂತರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲಿ ಇದು ಅತ್ಯಂತ ಅಪರೂಪದ ಘಟನೆಯಾಗಿದ್ದು ಎರಡೂ ತಂಡಗಳ ನಾಯಕರು ಈ ರೀತಿ ಮೊದಲ ಬಾರಿಗೆ ಔಟಾಗಿದ್ದಾರೆ.

ವಿರಾಟ್ ಕೊಹ್ಲಿ ಗೋಲ್ಡನ್ ಡಕ್‌ಗೆ ಬಲಿಯಾಗುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಆರು ವರ್ಷಗಳ ಬಳಿಕ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಮೊದಲ ಎಸೆತಕ್ಕೇ ಔಟಾಗಿದ್ದಾರೆ. ಧರ್ಮಶಾಲಾದಲ್ಲಿ ಆರು ವರ್ಷಗಳ ಹಿಂದೆ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಕೊನೆಯ ಬಾರಿಗೆ ವಿರಾಟ್ ಕೊಹ್ಲಿ ಗೊಲ್ಡನ್ ಡಕ್‌ಗೆ ಬಲಿಯಾಗಿದ್ದಾರೆ.

Story first published: Thursday, December 19, 2019, 12:05 [IST]
Other articles published on Dec 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X