ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಚಿನ್ನಸ್ವಾಮಿಯಲ್ಲಿ ಸೋಲು ಗೆಲುವಿನ ಲೆಕ್ಕಾಚಾರ

Virat Kohli-led Team India Eye Series Win On Happy Hunting Ground

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ತಲಾ ಒಂದೊಂದು ಪಂದ್ಯಗಳನ್ನು ಎರಡೂ ತಂಡಗಳು ಗೆದ್ದಿದ್ದು ಇಂದಿನ ಪಂದ್ಯ ಸರಣಿ ಗೆಲುವಿಗೆ ನಿರ್ಣಾಯಕವೆನಿಸಿದೆ .

ಚಿನ್ನಸ್ವಾಮಿ ಬ್ಯಾಟಿಂಗ್‌ಗೆ ಸ್ವರ್ಗವೆಸಿಸಿರುವ ಕ್ರೀಡಾಂಗಣ. ಹೀಗಾಗಿ ಈ ಪಂದ್ಯದಲ್ಲೂ ರನ್ ಮಳೆಯೇ ಹರಿದುಬರುವ ಸಾಧ್ಯತೆಯಿದೆ. 383/6 ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ದಾಖಲಾಗಿರುವ ಗರಿಷ್ಠ ಮೊತ್ತವಾಗಿದೆ. ಇದು ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧವೇ ದಾಖಲಿಸಿರುವ ಮೊತ್ತ ಎನ್ನುವುದು ಇಂದಿನ ಪಂದ್ಯಕ್ಕೂ ಮುನ್ನ ಸ್ಪೂರ್ತಿ ನೀಡುವ ಸಂಗತಿ.

ಅಂತಿಮ ಏಕದಿನಕ್ಕೆ ರೋಹಿತ್ ಶರ್ಮಾ, ಶಿಖರ್ ಧವನ್ ಕಣಕ್ಕಿಳಿಯುತ್ತಾರಾ?!ಅಂತಿಮ ಏಕದಿನಕ್ಕೆ ರೋಹಿತ್ ಶರ್ಮಾ, ಶಿಖರ್ ಧವನ್ ಕಣಕ್ಕಿಳಿಯುತ್ತಾರಾ?!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ವರೆಗೆ ಟೀಮ್ ಇಂಡಿಯಾ 20 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಇದರಲ್ಲಿ 13 ಪಂದ್ಯಗಳಲ್ಲಿ ಭಾರತ ಗೆಲುವನ್ನು ಕಂಡಿರುವುದು ಭಾರತದ ಪಾಲಿಗೆ ಖುಷಿಯ ವಿಚಾರ. ಇನ್ನು ಆಸ್ಟ್ರೇಲಿಯಾ ವಿರುದ್ಧ 7ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು 4 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ.

ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು 21ನೇ ಶತಮಾನದಲ್ಲಿ ಸೋಲಿಸಿರುವ ಏಕೈಕ ತಂಡ ಎಂಬ ಹೆಗ್ಗಳಿಗೆ ಆಸ್ಟ್ರೇಲಿಯಾಕ್ಕಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಎರಡು ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋತಿದ್ದು ಪ್ರವಾಸಿಗರ ಪಾಲಿಗೆ ಆಶಾದಾಯಕ ಸುದ್ದಿಯಾಗಿದೆ.

ಎಲ್ಲೂ ಸಲ್ಲುತ್ತಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ನೆನಪಿಸಿದ ಕೆಎಲ್ ರಾಹುಲ್!ಎಲ್ಲೂ ಸಲ್ಲುತ್ತಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ನೆನಪಿಸಿದ ಕೆಎಲ್ ರಾಹುಲ್!

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆರ್‌ಸಿಬಿ ನೇತೃತ್ವವನ್ನೂ ವಹಿಸಿಕೊಂಡಿದ್ದು ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಕಳೆದ ತಿಂಗಳು ನಡೆದ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ತಂಡದ ಪಾಲಾಗಿದ್ದಾರೆ. ಹೀಗಾಗಿ ಎರಡೂ ತಂಡಗಳ ನಾಯಕರ ಐಪಿಎಲ್ ತವರು ಕ್ರೀಡಾಂಗಣವಾಗಿದ್ದು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ಕುತೂಹಲುವೂ ಮನೆಮಾಡಿದೆ.

Story first published: Sunday, January 19, 2020, 12:34 [IST]
Other articles published on Jan 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X