ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3-0 ಅಂತರದ ಸೋಲನ್ನು ತಪ್ಪಿಸಿಕೊಳ್ಳುತ್ತಾ ಟೀಮ್ ಇಂಡಿಯಾ?: ಕೆಟ್ಟ ದಾಖಲೆಯ ಭೀತಿಯಲ್ಲಿ ಕೊಹ್ಲಿ

Virat Kohli looks to avoid unwanted record as visitors stare at 3-0 sweep

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ಮುಖಾಮುಖಿಯಾಗಿದೆ. ಸರಣಿಯನ್ನು ಈಗಾಗಲೇ ಸೋತಿರುವ ವಿರಾಟ್ ಕೊಹ್ಲಿ ಬಳಗ ಅಂತಿಮ ಪಂದ್ಯವನ್ನು ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಈ ಪಂದ್ಯದಲ್ಲೂ ಸೋತರೆ ದೊಡ್ಡ ಅವಮಾನಕ್ಕೆ ಟೀಮ್ ಇಂಡಿಯಾ ಗುರಿಯಾಗಲಿದೆ.

ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ 2020 ಕೆಟ್ಟ ವರ್ಷ. ಆಡಿಡುವ 8 ಏಕದಿನ ಪಂದ್ಯಗಳಲ್ಲಿ ಭಾರತ ಗೆದ್ದಿರುವುದು ಕೇವಲ 2 ಪಂದ್ಯಗಳನ್ನು ಮಾತ್ರ. ಸತತ ಎರಡನೇ ಪಂದ್ಯವನ್ನು ಭಾರತ ಎದುರಾಳಿಗೆ ಬಿಟ್ಟುಕೊಟ್ಟಿದೆ. ಈ ಪಂದ್ಯವನ್ನೂ ಸೋತರೆ ಸತತ ಎರಡನೇ ಸರಣಿಯಲ್ಲಿ ವೈಟ್‌ವಾಶ್ ಅವಮಾನಕ್ಕೆ ಗುರಿಯಾಗಲಿದೆ ಟೀಮ್ ಇಂಡಿಯಾ. ಕಳೆದ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿದ್ದ ಭಾರತ ಅಲ್ಲಿ ಏಕದಿನ ಸರಣಿಯನ್ನು 0-3 ಅಂತರದಿಂದ ಸೋತಿತ್ತು.

ಭಾರತ vs ಆಸ್ಟ್ರೇಲಿಯಾ: 3ನೇ ಏಕದಿನ ಪಂದ್ಯ, Live ಸ್ಕೋರ್ಭಾರತ vs ಆಸ್ಟ್ರೇಲಿಯಾ: 3ನೇ ಏಕದಿನ ಪಂದ್ಯ, Live ಸ್ಕೋರ್

ವಿರಾಟ್ ಕೊಹ್ಲಿ ನಾಯಕನಾಗಿ ಸತತ 5 ಏಕದಿನ ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಸತತವಾಗಿ 5ಕ್ಕೂ ಹೆಚ್ಚು ಸೋಲು ಕಂಡ ಎರಡನೇ ನಾಯಕನೆಂಬ ಕೆಟ್ಟ ಹಣೆಪಟ್ಟಿ ಕೊಹ್ಲಿಗೆ ಸೇರಿಕೊಳ್ಳುವ ಸಾಧ್ಯತೆಯಿದೆ. ಸುನಿಲ್ ಗವಾಸ್ಕರ್ ನಾಯಕತ್ವದಲ್ಲಿ 1981ರಲ್ಲಿ ಸತತವಾಗಿ 7 ಏಕದಿನ ಪಂದ್ಯಗಳಲ್ಲಿ ಭಾರತ ಸೋಲು ಕಂಡಿತ್ತು.

ಟೀಮ್ ಇಂಡಿಯಾಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಉತ್ತಮ ಆರಂಭ ದೊರೆತಿಲ್ಲ. ಈ ಸರಣಿಯಲ್ಲಿ ಭಾರತ ಇನ್ನು 3 ಪಂದ್ಯಗಳ ಟಿ20 ಸರಣಿ ಹಾಗೂ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿರುವ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

Story first published: Wednesday, December 2, 2020, 9:37 [IST]
Other articles published on Dec 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X