ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿ ಈ 5 ಬೃಹತ್ ದಾಖಲೆ ಮುರಿಯಲಾಗದೇ ತಮ್ಮ ಕೆರಿಯರ್ ಅಂತ್ಯಗೊಳಿಸಬಹುದು!

Virat Kohli may fail to break these 5 all time records due to poor form

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಓರ್ವ ಆಟಗಾರನಾಗಿ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದು, ನಾಯಕತ್ವದ ಜವಾಬ್ದಾರಿ ಇಲ್ಲದೇ ಇದ್ದರೂ ಸಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹೌದು, ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿ ಕೇವಲ 128 ರನ್ ಗಳಿಸಿದ್ದಾರೆ ಹಾಗೂ ಒಂದೇ ಒಂದು ಅರ್ಧಶತಕವನ್ನೂ ಸಹ ಬಾರಿಸಲಾಗದೇ ನೆಲಕಚ್ಚಿದ್ದಾರೆ.

ಅವರ ತಲೆಯಲ್ಲಿ ಏನಿದೆಯೋ ಗೊತ್ತಿಲ್ಲ: ಕೊಹ್ಲಿ, ರೋಹಿತ್ ಐಪಿಎಲ್ ಫ್ಲಾಪ್ ಶೋ ಬಗ್ಗೆ ಗಂಗೂಲಿ ಹೇಳಿದ್ದಿಷ್ಟು!ಅವರ ತಲೆಯಲ್ಲಿ ಏನಿದೆಯೋ ಗೊತ್ತಿಲ್ಲ: ಕೊಹ್ಲಿ, ರೋಹಿತ್ ಐಪಿಎಲ್ ಫ್ಲಾಪ್ ಶೋ ಬಗ್ಗೆ ಗಂಗೂಲಿ ಹೇಳಿದ್ದಿಷ್ಟು!

ಇನ್ನು ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಾತ್ರವಲ್ಲದೇ ಅಂತರರಾಷ್ಟ್ರೀಯ ಪಂದ್ಯಗಳಲ್ಲಿಯೂ ಸಹ ಉತ್ತಮ ಆಟವನ್ನಾಡಲಾಗದೇ ವಿಫಲರಾಗಿದ್ದಾರೆ. ಕಳೆದ 73 ಅಂತರರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಲಾಗದೇ ಪರದಾಡಿದ್ದು, ಕಳೆದ 19 ಏಕದಿನ ಇನ್ನಿಂಗ್ಸ್‌ಗಳಲ್ಲಿ 10 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಈ ಹಿಂದೆ ವಿರಾಟ್ ಕೊಹ್ಲಿ ಸಾಲು ಸಾಲು ಉತ್ತಮ ಪ್ರದರ್ಶನಗಳನ್ನು ನೀಡುತ್ತಿದ್ದಾಗ ಕೊಹ್ಲಿ ಕ್ರಿಕೆಟ್‌ನ ಹಲವಾರು ಬೃಹತ್ ದಾಖಲೆಗಳನ್ನು ಮುರಿದು ಹಾಕಲಿದ್ದಾರೆ ಎಂದು ಊಹಿಸಲಾಗಿತ್ತು.

ರಿಷಭ್ ಪಂತ್ ಸಹೋದರಿ ಜೊತೆಯೇ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಿದ ಪಂತ್ ಪ್ರೇಯಸಿ; ಯಾರು ಈಕೆ?ರಿಷಭ್ ಪಂತ್ ಸಹೋದರಿ ಜೊತೆಯೇ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಿದ ಪಂತ್ ಪ್ರೇಯಸಿ; ಯಾರು ಈಕೆ?

ಆದರೆ ಇದೀಗ ಈ ಹಿಂದಿನ ರೀತಿ ಬೃಹತ್ ರನ್ ಮೊತ್ತದ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗುತ್ತಿರುವ ವಿರಾಟ್ ಕೊಹ್ಲಿ ಕ್ರಿಕೆಟ್‌ನಲ್ಲಿ ನಿರ್ಮಾಣವಾಗಿರುವ ಈ 5 ಬೃಹತ್ ದಾಖಲೆಗಳನ್ನು ಮುರಿಯುವಲ್ಲಿ ವಿಫಲರಾಗುವ ಸಾಧ್ಯತೆಗಳಿವೆ. ಹೀಗೆ ವಿರಾಟ್ ಕೊಹ್ಲಿ ಮುರಿಯಲಾಗದೇ ವಿಫಲರಾಗಬಹುದಾದ ದಾಖಲೆಗಳ ಪಟ್ಟಿ ಈ ಕೆಳಕಂಡಂತಿದೆ ಓದಿ..

1. ಅತ್ಯಧಿಕ ಟೆಸ್ಟ್ ರನ್

1. ಅತ್ಯಧಿಕ ಟೆಸ್ಟ್ ರನ್

ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಒಟ್ಟು 200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ 15921 ರನ್‌ಗಳನ್ನು ಗಳಿಸಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ಅವರ ಈ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ವಿರಾಟ್ ಕೊಹ್ಲಿಯ ಈಗಿನ ಅಂಕಿಅಂಶಗಳನ್ನು ನೋಡಿದರೆ ಕೊಹ್ಲಿ ಈ ದಾಖಲೆಯನ್ನು ಮುರಿಯುವುದು ಅನುಮಾನ ಎನಿಸುತ್ತದೆ. ಇಲ್ಲಿಯವರೆಗೂ ಒಟ್ಟು 101 ಟೆಸ್ಟ್ ಪಂದ್ಯಗಳನ್ನಾಡುತ್ತಿರುವ ವಿರಾಟ್ ಕೊಹ್ಲಿ 8043 ರನ್‌ಗಳನ್ನು ಕಲೆಹಾಕಿದ್ದಾರೆ.

2. ಅತ್ಯಧಿಕ ಟೆಸ್ಟ್ ಶತಕ

2. ಅತ್ಯಧಿಕ ಟೆಸ್ಟ್ ಶತಕ

ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆ ನಿರ್ಮಿಸಿರುವ ಸಚಿನ್ ತೆಂಡೂಲ್ಕರ್ ಅತ್ಯಧಿಕ ರನ್ ಬಾರಿಸಿದ ದಾಖಲೆಯನ್ನೂ ಸಹ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ ಒಟ್ಟು 51 ಟೆಸ್ಟ್ ಶತಕಗಳನ್ನು ಬಾರಿಸಿದ್ದು, ಕೇವಲ ಸಚಿನ್ ತೆಂಡೂಲ್ಕರ್, ಜಾಕ್ ಕಾಲೀಸ್ ಮತ್ತು ರಿಕಿ ಪಾಂಟಿಂಗ್ ಮಾತ್ರ 40ಕ್ಕೂ ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಇಲ್ಲಿಯವರೆಗೂ ಒಟ್ಟು 27 ಟೆಸ್ಟ್ ಶತಕಗಳನ್ನು ಬಾರಿಸಿದ್ದು, ಸಚಿನ್ ತೆಂಡೂಲ್ಕರ್ ನಿರ್ಮಿಸಿರುವ ಈ ಬೃಹತ್ ದಾಖಲೆ ಮುರಿಯುವುದು ತೀರಾ ಕಷ್ಟ ಎನ್ನಬಹುದು.

3. ಅತ್ಯಧಿಕ ಅಂತರರಾಷ್ಟ್ರೀಯ ರನ್

3. ಅತ್ಯಧಿಕ ಅಂತರರಾಷ್ಟ್ರೀಯ ರನ್

ಅತ್ಯಧಿಕ ಅಂತರರಾಷ್ಟ್ರೀಯ ರನ್ ಗಳಿಸಿರುವ ದಾಖಲೆ ಕೂಡ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿಯೇ ಇದೆ. ಸಚಿನ್ ತೆಂಡೂಲ್ಕರ್ ಒಟ್ಟು 34357 ಅಂತರರಾಷ್ಟ್ರೀಯ ರನ್ ಬಾರಿಸಿದ್ದಾರೆ. ಇನ್ನು ಸದ್ಯ 23650 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಅತ್ಯಧಿಕ ಅಂತರರಾಷ್ಟ್ರೀಯ ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಇನ್ನು ಸದ್ಯ 33 ವರ್ಷದ ವಿರಾಟ್ ಕೊಹ್ಲಿ 40ರವರೆಗೂ ಕ್ರಿಕೆಟ್ ಆಡುತ್ತಾರೆ ಎಂದರೂ ಸಹ ವರ್ಷಕ್ಕೆ 1600ರಿಂದ 1700 ರನ್ ಬಾರಿಸಿದರೆ ಮಾತ್ರ ಈ ದಾಖಲೆಯನ್ನು ಮುರಿಯಲಿದ್ದಾರೆ.

4. ಅತ್ಯಧಿಕ ಅಂತರರಾಷ್ಟ್ರೀಯ ಶತಕಗಳು

4. ಅತ್ಯಧಿಕ ಅಂತರರಾಷ್ಟ್ರೀಯ ಶತಕಗಳು

ಸದ್ಯ 70 ಶತಕಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ ಅತಿಹೆಚ್ಚು ಅಂತರರಾಷ್ಟ್ರೀಯ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನೊಂದು ಶತಕ ಬಾರಿಸಿದರೂ ಎರಡನೇ ಸ್ಥಾನವನ್ನು ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಜೊತೆ ಹಂಚಿಕೊಳ್ಳಲಿರುವ ವಿರಾಟ್ ಕೊಹ್ಲಿ ಅತ್ಯಧಿಕ ಅಂತರರಾಷ್ಟ್ರೀಯ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಲು ಇನ್ನೂ 31 ಶತಕಗಳನ್ನು ಬಾರಿಸಬೇಕಾದ ಅಗತ್ಯವಿದೆ. ಸಚಿನ್ ತೆಂಡೂಲ್ಕರ್ ಒಟ್ಟು 100 ಅಂತರರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ.

5. ಅತಿಹೆಚ್ಚು ಟಿ ಟ್ವೆಂಟಿ ಶತಕ

5. ಅತಿಹೆಚ್ಚು ಟಿ ಟ್ವೆಂಟಿ ಶತಕ

ಅತಿಹೆಚ್ಚು ಅಂತರರಾಷ್ಟ್ರೀಯ ಟಿ ಟ್ವೆಂಟಿ ಶತಕಗಳನ್ನು ಬಾರಿಸಿರುವ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಇಲ್ಲಿಯವರೆಗೂ ಒಟ್ಟು 4 ಟಿ ಟ್ವೆಂಟಿ ಶತಕಗಳನ್ನು ರೋಹಿತ್ ಶರ್ಮಾ ಬಾರಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಇಲ್ಲಿಯವರೆಗೂ ಒಂದೇ ಒಂದು ಅಂತರರಾಷ್ಟ್ರೀಯ ಟಿ ಟ್ವೆಂಟಿ ಶತಕವನ್ನೂ ಸಹ ಬಾರಿಸದೇ ಇದ್ದು ರೋಹಿತ್ ಶರ್ಮಾ ಹೆಸರಿನಲ್ಲಿರುವ ಈ ದಾಖಲೆಯನ್ನು ಮುರಿಯಲು ಮುಂಬರುವ ಪಂದ್ಯಗಳಲ್ಲಿ 5 ಶತಕಗಳನ್ನು ಬಾರಿಸಬೇಕಿದೆ. ಇನ್ನು ವಿರಾಟ್ ಕೊಹ್ಲಿ ಈ ಬೃಹತ್ ದಾಖಲೆಯನ್ನು ಮುರಿಯುವುದು ಕಷ್ಟ ಎನ್ನಬಹುದು.

Story first published: Saturday, April 30, 2022, 15:11 [IST]
Other articles published on Apr 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X