ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಸೋತರೆ ಕೊಹ್ಲಿ ಕ್ಯಾಪ್ಟನ್ ಆಗಿ ಉಳಿಯಲ್ಲ!

Virat Kohli May Step Down From Captaincy if India Lose 2nd Test: Monty Panesar

ಬೆಂಗಳೂರು, ಫೆಬ್ರವರಿ 10: ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಟೀಂ ಇಂಡಿಯಾ ಸೋಲು ಕಾಣುತ್ತಿದ್ದಂತೆ ಅನೇಕ ಪ್ರಶ್ನೆಗಳು ಎದ್ದಿದ್ದು ಅದರಲ್ಲಿ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ನಾಯಕತ್ವದ ಬಗ್ಗೆ ಕೂಡಾ ಕ್ರಿಕೆಟ್ ತಜ್ಞರು, ಮಾಜಿ ಕ್ರಿಕೆಟರ್ಸ್ ಪ್ರಶ್ನಿಸಿದ್ದಾರೆ. ಇಂಗ್ಲೆಂಡಿನ ಮಾಜಿ ಸ್ಪಿನ್ನರ್ ಮಾಂಟೆ ಪನೇಸರ್ ಒಂದು ಹೆಜ್ಜೆ ಮುಂದೆ ಹೋಗಿ, ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಸೋತರೆ ಕೊಹ್ಲಿ ಕ್ಯಾಪ್ಟನ್ ಆಗಿ ಉಳಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ಸರಣಿಯಲ್ಲಿ ರಜೆ ಪಡೆದುಕೊಂಡು ಭಾರತಕ್ಕೆ ಬಂದ ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ವಿರುದ್ಧದ ಸರಣಿಗೆ ನಾಯಕರಾಗಿ ಕಣಕ್ಕಿಳಿದಿದ್ದಾರೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 227ರನ್ ಗಳ ಅಂತರದಿಂದ ಸೋಲು ಕಂಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಕೊಹ್ಲಿ ನಡೆಸಿದ ಹೋರಾಟ ವ್ಯರ್ಥವಾಯಿತು.

ವಿಯಾನ್ ವಾಹಿನಿ ಜೊತೆ ಮಾತನಾಡಿದ ಪನೇಸರ್, ''ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟ್ಸ್ ಮನ್ ನಿಜ. ಆದರೆ, ಇತ್ತೀಚೆಗೆ ಅವರ ನಾಯಕತ್ವದಲ್ಲಿ ತಂಡ ಸಂಘಟಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಈ ಸರಣಿಯಲ್ಲಿ ಕೊಹ್ಲಿ ಅತಿ ಹೆಚ್ಚಿನ ಒತ್ತಡ ಎದುರಿಸುತ್ತಿದ್ದಾರೆ. ಭಾರತದಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೊಹ್ಲಿ ನಾಯಕತ್ವದಲ್ಲಿ ತಂಡ ಸೋಲು ಕಂಡಿದೆ. ರಹಾನೆ ನಾಯಕನಾಗಿ ಆಸ್ಟ್ರೇಲಿಯಾದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ರೋಹಿತ್ ಶರ್ಮ ಅವರನ್ನು ನಾಯಕನಾಗಿ ಬೆಳೆಸಲು ಒಂದು ವರ್ಗ ಸಿದ್ಧವಾಗಿದೆ. ಪರಿಸ್ಥಿತಿ ಹೀಗಿರುವಾಗ ಕೊಹ್ಲಿ ಇನ್ನೊಂದು ಪಂದ್ಯ ಸೋತರೆ ನೈತಿಕ ಹೊಣೆ ಹೊತ್ತು ಕೊಹ್ಲಿಯೇ ನಾಯಕತ್ವ ತೊರೆದು ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ'' ಎಂದಿದ್ದಾರೆ.

ಸತತವಾಗಿ7 ಟೆಸ್ಟ್ ಪಂದ್ಯ ಗೆಲುವು ಕಂಡ ನಾಯಕ ಎನಿಸಿದ್ದ ಕೊಹ್ಲಿ ಈಗ ಸತತ ನಾಲ್ಕು ಪಂದ್ಯ ಸೋತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅಡಿಲೇಡ್ ಪಂದ್ಯಕ್ಕೆ ನಾಯಕರಾಗಿದ್ದ ಕೊಹ್ಲಿ ಗೆಲುವು ಕಂಡಿರಲಿಲ್ಲ. ಕಳೆದ ಒಂದು ವರ್ಷದಲ್ಲಿ ಒಂದು ಶತಕ ದಾಖಲಿಸಲು ಕೊಹ್ಲಿಯಿಂದ ಸಾಧ್ಯವಾಗಿರಲಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಹೋರಾಟದ 72ರನ್ ಗಳಿಸಿ ಔಟಾಗಿದ್ದು, ಮತ್ತೆ ಲಯಕ್ಕೆ ಮರಳಿರುವ ಸೂಚನೆ ನೀಡಿದ್ದಾರೆ.

ತಂಡದ ಆಯ್ಕೆ ವಿಷಯದಲ್ಲಿ ಕೊಹ್ಲಿ ಎಡವುತ್ತಿದ್ದಾರೆ ಎಂಬ ಕೂಗೆದ್ದಿದೆ. ಆದರೆ, ಮೊದಲ ಟೆಸ್ಟ್ ಪಂದ್ಯದ ಆಡುವ ಹನ್ನೊಂದು ಮಂದಿಯ ಆಯ್ಕೆಯನ್ನು ಕೊಹ್ಲಿ ಸಮರ್ಥಿಸಿಕೊಂಡಿದ್ದರು. ಎರಡನೇ ಟೆಸ್ಟ್ ಪಂದ್ಯದಲ್ಲಿ ತಕ್ಕಮಟ್ಟಿನ ಬದಲಾವಣೆ ಮೂಲಕ ಕೊಹ್ಲಿ ಜಯದ ಹಾದಿ ಮರಳುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

Story first published: Thursday, February 11, 2021, 15:16 [IST]
Other articles published on Feb 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X