ವಿರಾಟ್, ಧೋನಿ or ರೋಹಿತ್?: ತನ್ನ ಬ್ಯಾಟಿಂಗ್ ಪಾರ್ಟ್ನರ್ ಹೆಸರಿಸಿದ ಪಂತ್

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ-ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಇವರಲ್ಲಿ ನಿಮಗೆ ಯಾರಿಷ್ಟ ಅಂತ ಕೇಳಿದರೆ ಸುಲಭವಾಗಿ ಉತ್ತರಿಸಲಾಗೋಲ್ಲ. ಯಾಕೆಂದರೆ ಮೂವರೂ ಪ್ರತಿಭಾನ್ವಿತ ಆಟಗಾರರು. ಮೂವರೂ ವಿಶ್ವಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ಗುರುತಿಸಿಕೊಂಡವರು. ವಿರಾಟ್, ಧೋನಿ, ರೋಹಿತ್ ಮೂವರೂ ಅನುಭವಿ ಬ್ಯಾಟ್ಸ್‌ಮನ್‌ಗಳನ್ನಾದ್ದರಿಂದ ನೆಚ್ಚಿನ ಆಟಗಾರನಾಗಿ ಒಬ್ಬರನ್ನು ಹೆಕ್ಕಿ ತೆಗೆಯೋದು ಕಷ್ಟ.

ಮನೋಜ್ ತಿವಾರಿ-ರಮೇಶ್ ಪೊವಾರ್ ಮಧ್ಯೆ ಟ್ವಿಟರ್ ವಾರ್ ಜೋರು!

ಟೀಮ್ ಇಂಡಿಯಾದಲ್ಲಿ ನೆಲೆಯೂರಲು ಪರದಾಡುತ್ತಿರುವ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಟೀಮ್ ಇಂಡಿಯಾದಲ್ಲಿ ತನಗೆ ಹೆಚ್ಚು ಇಷ್ಟವಾಗುವ ಬ್ಯಾಟ್ಸ್‌ಮನ್‌ ಹೆಸರಿಸಿದ್ದಾರೆ.

ಕ್ರಿಕೆಟ್ ಅಂಗಳದಲ್ಲೇ 'ಕಣ್ಣೀರಧಾರೆ': ಭಾರತೀಯ ಕ್ರಿಕೆಟ್‌ನ 5 ಕಣ್ಣೀರ ಕಥೆ!

ತಾನು ಬ್ಯಾಟಿಂಗ್ ಪಾರ್ಟ್ನರ್ ಆಗಿ ಆರಿಸಬಯಸುವ ಆಟಗಾರನ ಹೆಸರಿಸಿರುವ ಪಂತ್, ತನ್ನ ಆಯ್ಕೆಗೆ ಕಾರಣವನ್ನೂ ನೀಡಿದ್ದಾರೆ.

ಧವನ್ ಜೊತೆ ಪಾರ್ಟ್ನರ್‌ಶಿಪ್

ಧವನ್ ಜೊತೆ ಪಾರ್ಟ್ನರ್‌ಶಿಪ್

ಟೀಮ್ ಇಂಡಿಯಾದಲ್ಲಿರುವುದರಿಂದ ಪಂತ್ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಎಂಎಸ್ ಧೋನಿಯ ಜೊತೆ ಬ್ಯಾಟಿಂಗ್ ಮಾಡಿದ ಅನುಭವ ಹೊಂದಿದ್ದಾರೆ. ಏಕದಿನಕ್ಕೆ 2018ರಲ್ಲಿ ಪಾದಾರ್ಪಣಗೆ ಮಾಡಿರುವ ಪಂತ್, ಭಾರತ ತಂದಲ್ಲಿದ್ದು ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿದ್ದು ಶಿಖರ್ ಧವನ್ ಜೊತೆ ಹೆಚ್ಚು ಬ್ಯಾಟಿಂಗ್ ಪಾರ್ಟ್ನರ್‌ಶಿಪ್ ನೀಡಿದ್ದಾರೆ.

ಕೊಹ್ಲಿ, ರೋಹಿತ್ ಜೊತೆ ಆಡೋದು ಇಷ್ಟ

ಕೊಹ್ಲಿ, ರೋಹಿತ್ ಜೊತೆ ಆಡೋದು ಇಷ್ಟ

ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಸಂವಾದಲ್ಲಿ ಪಾಲ್ಗೊಂಡಿದ್ದ ಪಂತ್, ಬ್ಯಾಟಿಂಗ್ ಪಾರ್ಟ್ನರ್‌ಶಿಪ್ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. 'ನಾನು ವಿರಾಟ್ ಭಾಯ್ ಮತ್ತು ರೋಹಿತ್ ಭಾಯ್ ಜೊತೆಗಿನ ಬ್ಯಾಟಿಂಗ್ ಅನ್ನು ಎಂಜಾಯ್ ಮಾಡ್ತೇನೆ. ಇಂಥ ಅನುಭವಿ ಆಟಗಾರರ ಜೊತೆ ಆಡುವಾಗ ಅದು ನಿಮಗೆ ವಿಭಿನ್ನ ಅನುಭವ ನೀಡುತ್ತದೆ. ಅವರ ಆಟದ ಆಲೋಚನೆಗಳು ಹೇಗೆ ಕೆಲಸ ಮಾಡುತ್ತವೆ ಅನ್ನೋದು ಆಗ ನಿಮಗೆ ಅರಿವಾಗುತ್ತದೆ,' ಎಂದು ಪಂತ್ ವಿವರಿಸಿದ್ದಾರೆ.

ಪಂತ್ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್

ಪಂತ್ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್

'ನನ್ನ ಫೇವರಿಟ್ ಬ್ಯಾಟಿಂಗ್ ಪಾರ್ಟ್ನರ್ ಅಂದರೆ ಧೋನಿ. ಆದರೆ ಧೋನಿ ಜೊತೆಗೆ ಆಡುವ ಅವಕಾಶ ಸಿಕ್ಕಿದ್ದು ನನಗೆ ತುಂಬಾ ವಿರಳ. ಆತ ಆಡುತ್ತಿದ್ದರೆ ಅಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಅವರು ಯೋಜನೆಯನ್ನು ರೂಪಿಸುತ್ತಾರೆ, ನೀವು ಅವರನ್ನು ಅನುಸರಿಸಬೇಕು. ಮುಖ್ಯವಾಗಿ ಚೇಸಿಂಗ್‌ ವೇಳೆ ಧೋನಿಯ ಮನಸ್ಸು ಕೆಲಸ ಮಾಡುವ ರೀತಿ ಅದ್ಭುತವಾಗಿದೆ,' ಎಂದು ಪಂತ್ ಹೇಳಿದ್ದಾರೆ.

ಶ್ರೇಯಸ್, ಧವನ್ ಹೆಸರಿಸಿದ ಪಂತ್

ಶ್ರೇಯಸ್, ಧವನ್ ಹೆಸರಿಸಿದ ಪಂತ್

ಜೊತೆಯಾಗಿ ಬ್ಯಾಟಿಂಗ್ ಮಾಡುವಾಗ ಯಾರ ಜೊತೆಗಿನ ಪಾರ್ಟ್ನರ್‌ಶಿಪ್ ಖುಷಿ ಕೊಡುತ್ತದೆ ಎಂದು ಹೇಳಿಕೊಂಡಿರುವ ಪಂತ್, ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಶ್ರೇಯಸ್ ಐಯ್ಯರ್ ಅನ್ನೂ ಉಲ್ಲೇಖಿಸಿದ್ದಾರೆ. ಐಪಿಎಲ್‌ನಲ್ಲಿ ಧವನ್ ಮತ್ತು ಶ್ರೇಯಸ್ ಜೊತೆಗಿನ ಪಾರ್ಟ್ನರ್‌ಶಿಪ್ ಖುಷಿಕೊಡುತ್ತದೆ ಎಂದು ಪಂತ್ ತಿಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, July 15, 2020, 13:46 [IST]
Other articles published on Jul 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X