ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ: ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ ವಿರಾಟ್ ಕೊಹ್ಲಿ

Virat Kohli on cusp of surpassing Ricky Ponting in elite list led by Graeme Smith

ರಾಂಚಿ, ಅಕ್ಟೋಬರ್ 18: ಕ್ರಿಕೆಟ್‌ ಲೋಕದಲ್ಲಿ ಸಾಲು ಸಾಲು ದಾಖಲೆಗಳನ್ನು ಬರೆಯುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿ ಮತ್ತೊಂದು ದಾಖಲೆ ಸೇರ್ಪಡೆಯಾಗುವುದರಲ್ಲಿದೆ. ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯೊಂದನ್ನು ಕೊಹ್ಲಿ ಸರಿಗಟ್ಟಲಿದ್ದಾರೆ.

44 ವರ್ಷಗಳ ವಿಶ್ವದಾಖಲೆ ಮುರಿದ ಭಾರತದ ಕ್ರಿಕೆಟರ್ ಯಶಸ್ವಿ ಜೈಸ್ವಾಲ್44 ವರ್ಷಗಳ ವಿಶ್ವದಾಖಲೆ ಮುರಿದ ಭಾರತದ ಕ್ರಿಕೆಟರ್ ಯಶಸ್ವಿ ಜೈಸ್ವಾಲ್

ರಾಂಚಿಯಲ್ಲಿರುವ ಜೆಎಸ್‌ಸಿಎ ಇಂಟರ್‌ ನ್ಯಾಷನಲ್ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಕಾಂಪ್ಲೆಕ್ಸ್‌ನಲ್ಲಿ ಶನಿವಾರ (ಅಕ್ಟೋಬರ್ 19) ಆರಂಭಗೊಳ್ಳಲಿರುವ ಭಾರತ vs ದಕ್ಷಿಣ ಆಫ್ರಿಕಾ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿಗೆ ದಾಖಲೆ ನಿರ್ಮಿಸಲು ಅವಕಾಶವಿದೆ.

ಭಾರತ vs ದಕ್ಷಿಣ ಆಫ್ರಿಕಾ: 3ನೇ ಟೆಸ್ಟ್‌ನಿಂದ ಐಡೆನ್ ಮಾರ್ಕ್ರಮ್ ಹೊರಕ್ಕೆಭಾರತ vs ದಕ್ಷಿಣ ಆಫ್ರಿಕಾ: 3ನೇ ಟೆಸ್ಟ್‌ನಿಂದ ಐಡೆನ್ ಮಾರ್ಕ್ರಮ್ ಹೊರಕ್ಕೆ

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಕೊಹ್ಲಿ ಪಡೆ 3ನೇ ಪಂದ್ಯವನ್ನು ಗೆದ್ದುಕೊಳ್ಳುವತ್ತ ಕಣ್ಣಿಟ್ಟಿದೆ.

ಪಾಂಟಿಂಗ್ ದಾಖಲೆ ಬದಿಗೆ

ಪಾಂಟಿಂಗ್ ದಾಖಲೆ ಬದಿಗೆ

ನಾಯಕನಾಗಿ ಟೆಸ್ಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರನಾಗಿ ವಿರಾಟ್‌ ಕೊಹ್ಲಿ, ಆಸೀಸ್ ದಂತಕತೆ ರಿಕಿ ಪಾಂಟಿಂಗ್ ದಾಖಲೆ ಮುರಿಯಲಿದ್ದಾರೆ. ಸದ್ಯ ಇಬ್ಬರೂ 19 ಟೆಸ್ಟ್‌ ಶತಕಗಳಿಂದ ಈ ದಾಖಲೆ ಹಂಚಿಕೊಂಡಿದ್ದಾರೆ.

ಸ್ಮಿತ್‌ಗೆ ಅಗ್ರ ಸ್ಥಾನ

ಸ್ಮಿತ್‌ಗೆ ಅಗ್ರ ಸ್ಥಾನ

ತಂಡದ ನಾಯಕರಾಗಿದ್ದುಕೊಂಡು ಅತ್ಯಧಿಕ ಟೆಸ್ಟ್ ಶತಕಗಳನ್ನು ಬಾರಿಸಿದ ದಾಖಲೆ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಗೇಮ್ ಸ್ಮಿತ್ ಮೊದಲ ಸ್ಥಾನದಲ್ಲಿದ್ದಾರೆ. ಸ್ಮಿತ್ ಒಟ್ಟಿಗೆ 25 ಶತಕಗಳನ್ನು ಬಾರಿಸಿದ್ದರು.

ಕೊಹ್ಲಿ ಪಕ್ಕದಲ್ಲಿ ಸ್ಮಿತ್

ಕೊಹ್ಲಿ ಪಕ್ಕದಲ್ಲಿ ಸ್ಮಿತ್

ಒಂದು ವರ್ಷದ ನಿಷೇಧಕ್ಕೀಡಾಗಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಆ್ಯಷಸ್ ಟೆಸ್ಟ್‌ನಲ್ಲಿ ಸ್ಮಿತ್ ಭರ್ಜರಿ ಬ್ಯಾಟಿಂಗ್ ಕೂಡ ಪ್ರದರ್ಶಿಸಿದ್ದರು. ಸ್ಮಿತ್‌ಗೆ ಮತ್ತೆ ನಾಯಕತ್ವ ಲಭಿಸುವ ಸಾಧ್ಯತೆಯೂ ಇದೆ.

3ನೇ ಸ್ಥಾನದಲ್ಲಿ ಸ್ಟೀವ್

3ನೇ ಸ್ಥಾನದಲ್ಲಿ ಸ್ಟೀವ್

ಸ್ಮಿತ್‌ಗೆ ಆಸ್ಟ್ರೇಲಿಯಾ ನಾಯಕತ್ವ ಮತ್ತೆ ಲಭಿಸಿದರೆ ಸ್ಮಿತ್, ಈ ದಾಖಲೆ ಸಾಲಿನಲ್ಲಿ ಕೊಹ್ಲಿ ಇನ್ನೂ ಸಮೀಪಕ್ಕೆ ಬರಬಲ್ಲರು. ನಾಯಕರಾಗಿ ಒಟ್ಟು 15 ಟೆಸ್ಟ್‌ ಶತಕಗಳ ದಾಖಲೆ ಸ್ಮಿತ್ ಮತ್ತು ಅಲನ್ ಬಾರ್ಡರ್ ಹೆಸರಿನಲ್ಲಿದೆ. ಆಸೀಸ್ ದಂತಕತೆ ಸರ್ ಡಾನ್ ಬ್ರಾಡ್‌ಮನ್ ನಾಯಕರಾಗಿ 14 ಟೆಸ್ಟ್‌ ಶತಕಗಳನ್ನು ಬಾರಿಸಿದ್ದರು.

Story first published: Friday, October 18, 2019, 11:52 [IST]
Other articles published on Oct 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X