ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಲು ವಿರಾಟ್ ಕೊಹ್ಲಿ ಸಜ್ಜು

Virat Kohli on near to achieving huge milestone in ODIs

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಈ ಮಹತ್ವದ ಸರಣಿಯನ್ನು ಗೆಲ್ಲು ಎರಡು ತಂಡಗಳು ಕೂಡ ಜಿದ್ದಾಜಿದ್ದಿನ ಪ್ರದರ್ಶನ ನೀಡಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಈ ಸರಣಿಯಲ್ಲಿ ಕೆಲ ದಾಖಲೆಗಳು ಸ್ಥಾಪನೆಯಾಗುವ ಸಾಧ್ಯತೆಯಿದೆ. ಅದರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಅತ್ಯಂತ ಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸುವ ನಿರೀಕ್ಷೆಯಲ್ಲಿದ್ದಾರೆ. 3 ಪಂದ್ಯಗಳ ಈ ಸರಣಿಯಲ್ಲಿ ವಿರಾಟ್ ಕೊಹ್ಲಿ 133 ರನ್‌ಗಳನ್ನು ದಾಖಲಿಸಿದರೆ ಆ ವಿಶೇಷ ಮೈಲಿಗಲ್ಲನ್ನು ಸ್ಥಾಪಿಸಿದಂತಾಗಲಿದೆ.

ಮೊದಲ ಬಾರಿ ಟೀಮ್ ಇಂಡಿಯಾ ಜರ್ಸಿ ತೊಟ್ಟು ಸಂಭ್ರಮಿಸಿದ ನಟರಾಜನ್ಮೊದಲ ಬಾರಿ ಟೀಮ್ ಇಂಡಿಯಾ ಜರ್ಸಿ ತೊಟ್ಟು ಸಂಭ್ರಮಿಸಿದ ನಟರಾಜನ್

ಹಾಗಾದರೆ ವಿರಾಟ್ ಕೊಹ್ಲಿ ಸ್ಥಾಪಿಸಲಿರುವ ಆ ವಿಶೇಷವಾದ ಮೈಲಿಗಲ್ಲು ಯಾವುದು? ಕೊಹ್ಲಿಯ ಸಾಧನೆಗೆ ಸೇರಿಕೊಳ್ಳಲಿರುವ ಆ ದಾಖಲೆಯೇನು ಎನ್ನುವುದಕ್ಕೆ ಮುಂದೆ ಓದಿ..

ಬೃಹತ್ ದಾಖಲೆಯ ಸನಿಹದಲ್ಲಿ ಕೊಹ್ಲಿ

ಬೃಹತ್ ದಾಖಲೆಯ ಸನಿಹದಲ್ಲಿ ಕೊಹ್ಲಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನ ದೊಡ್ಡ ದಾಖಲೆಗೆ ಸನಿಹದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿರುವ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಗೆ ಕೊಹ್ಲಿಗೆ ಬೇಕಿರುವುದು ಇನ್ನು 6 ಶತಕಗಳು ಮಾತ್ರ. ಈ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಈ ದಾಖಲೆಗೆ ಮತ್ತಷ್ಟು ಹತ್ತರವಾಗುವ ಅವಕಾಶವಿದೆ.

ಕೊಹ್ಲಿ ಸ್ಥಾಪಿಸಲಿರುವ ದೊಡ್ಡ ಮೈಲಿಗಲ್ಲು

ಕೊಹ್ಲಿ ಸ್ಥಾಪಿಸಲಿರುವ ದೊಡ್ಡ ಮೈಲಿಗಲ್ಲು

ಇನ್ನು ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಬೃಹತ್ ಮೈಲಿಗಲ್ಲೊಂದನ್ನು ಸ್ಥಾಪಿಸಲು ಸಜ್ಜಾಗಿದ್ದಾರೆ. ಅದು 12,000 ರನ್‌ಗಳ ಸಾಧನೆ. ಈ ಸಾಧನೆಗೆ ವಿರಾಟ್ ಕೊಹ್ಲಿ 133 ರನ್‌ಗಳನ್ನು ಗಳಿಸಿದರೆ ಸಾಕು. ಮೂರು ಪಂದ್ಯಗಳಿರುವ ಆಸಿಸ್ ವಿರುದ್ದದ ಸರಣಿಯಲ್ಲಿ ಕೊಹ್ಲಿ ಈ ಸಾಧನೆಯನ್ನು ಮಾಡುವುದು ನಿಶ್ಚಿತ.

300ಕ್ಕೂ ಕಡಿಮೆ ಪಂದ್ಯಗಳಲ್ಲಿ ಸಾಧನೆ

300ಕ್ಕೂ ಕಡಿಮೆ ಪಂದ್ಯಗಳಲ್ಲಿ ಸಾಧನೆ

ಈ ಮೂಲಕ ವಿರಾಟ್ ಕೊಹ್ಲಿ ಈ ಸಾಧನೆಯನ್ನು ಮಾಡಿದ 6ನೇ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ಅದಕ್ಕೂ ಹೆಚ್ಚಾಗಿ 300 ಪಂದ್ಯಗಳಿಗಿಂತ ಕಡಿಮೆ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರ ಎಂಬ ಖ್ಯಾತಿಗೂ ಕೊಹ್ಲಿ ಪಾತ್ರರಾಗಲಿದ್ದಾರೆ. ಕೊಹ್ಲಿ ಈವರೆಗೆ 248 ಪಂದ್ಯಗಳನ್ನು ಆಡಿದ್ದು 59.3ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

ಆಸಿಸ್ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಕೊಹ್ಲಿ

ಆಸಿಸ್ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಕೊಹ್ಲಿ

ಇನ್ನು ಆಸ್ಟ್ರೇಲಿಯಾ ವಿರುದ್ಧದ ಸರಿಣಿಗೆ ವಿರಾಟ್ ಕೊಹ್ಲಿ ಮುಖ್ಯ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಪಿತೃತ್ವದ ರಜೆಯನ್ನು ತೆಗೆದುಕೊಂಡು ಭಾರತಕ್ಕೆ ಮರಳಲಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಬಿಸಿಸಿಐ ಕೊಹ್ಲಿಗೆ ಈ ರಜೆಯನ್ನು ನೀಡಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಮೂರು ಪಂದ್ಯಗಳಲ್ಲಿ ಕೊಹ್ಲಿ ಅಲಭ್ಯತೆಯಲ್ಲಿ ಕಣಕ್ಕಿಳಿಯಲಿದೆ. ಅಜಿಂಕ್ಯ ರಹಾನೆ ಅಂತಿಮ ಮೂರು ಪಂದ್ಯಗಳಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

Story first published: Thursday, November 26, 2020, 12:01 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X