ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

Virat Kohli on the verge of breaking Sachin Tendulkars record

ನವದೆಹಲಿ, ಅಕ್ಟೋಬರ್ 19: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಮತ್ತೊಂದು ದಾಖಲೆ ಮುರಿಯುವ ಅವಕಾಶವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಡೆದುಕೊಂಡಿದ್ದಾರೆ.

ವೆಸ್ಟ್‌ಇಂಡೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿಯ ವೇಳೆ ಕೊಹ್ಲಿ ಅವರು ಈ ಸಾಧನೆ ಮಾಡಬಹುದಾಗಿದೆ. ಈ ಮೂಲಕ ವೆಸ್ಟ್‌ಇಂಡೀಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಭಾರತದ ಬ್ಯಾಟ್ಸ್ ಮನ್ ಎನಿಸಿಕೊಳ್ಳಬಹುದಾಗಿದೆ.

ವ್ಯಾಲೆಟ್ಟಾ ಎಫ್‌ಸಿ ಆಫರ್ ನಿರಾಕರಿಸಿದ ಮಿಂಚಿನ ಓಟಗಾರ ಉಸೇನ್ ಬೋಲ್ಟ್‌ ವ್ಯಾಲೆಟ್ಟಾ ಎಫ್‌ಸಿ ಆಫರ್ ನಿರಾಕರಿಸಿದ ಮಿಂಚಿನ ಓಟಗಾರ ಉಸೇನ್ ಬೋಲ್ಟ್‌

ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಬಹುದು. ಕೊಹ್ಲಿಗೆ ಈ ದಾಖಲೆ ಮುರಿಯಲು ಕೇವಲ 187 ರನ್ ಅಗತ್ಯವಿದೆ. ವೆಸ್ಟ್ ಇಂಡೀಸ್ ವಿರುದ್ಧದ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯು ಅಕ್ಟೋಬರ್ 21ರಿಂದ ಆರಂಭವಾಗಲಿದೆ.

ತೆಂಡೂಲ್ಕರ್ ಅವರು ವಿಂಡೀಸ್ ವಿರುದ್ಧ 39 ಪಂದ್ಯಗಳನ್ನು ಆಡಿದ್ದು 52.73ರ ಸರಾಸರಿಯಲ್ಲಿ 4 ಶತಕ, 11 ಅರ್ಧಶತಕಗಳ ಸಹಿತ 1,573 ರನ್ ಗಳಿಸಿದ್ದಾರೆ.

ಪಾಕಿಸ್ತಾನ ಆಟಗಾರ ಅಝರ್ ಅಲಿ ಗಮ್ಮತ್ತಿನ ರನೌಟ್: ನೋಡಿ, ನಗಬೇಡಿ! ಪಾಕಿಸ್ತಾನ ಆಟಗಾರ ಅಝರ್ ಅಲಿ ಗಮ್ಮತ್ತಿನ ರನೌಟ್: ನೋಡಿ, ನಗಬೇಡಿ!

ಕೊಹ್ಲಿ ಈ ತನಕ ವಿಂಡೀಸ್ ವಿರುದ್ಧ 27 ಏಕದಿನ ಪಂದ್ಯಗಳನ್ನು ಆಡಿದ್ದು 60.30ರ ಸರಾಸರಿಯಲ್ಲಿ 1,387 ರನ್ ಗಳಿಸಿದ್ದಾರೆ. ಕೆರಿಬಿಯನ್ ತಂಡದ ವಿರುದ್ಧ 4 ಶತಕ ಹಾಗೂ 9 ಅರ್ಧಶತಕಗಳನ್ನು ಕೊಹ್ಲಿ ಬಾರಿಸಿದ್ದಾರೆ.

ಭಾರತದ ಮತ್ತೊಬ್ಬ ದಿಗ್ಗಜ ರಾಹುಲ್ ದ್ರಾವಿಡ್ ಅವರು ವಿಂಡೀಸ್ ವಿರುದ್ಧ 40 ಪಂದ್ಯಗಳಲ್ಲಿ 42.12ರ ಸರಾಸರಿಯಲ್ಲಿ 3 ಶತಕ ಹಾಗೂ 8 ಅರ್ಧಶತಕಗಳ ಸಹಿತ ಒಟ್ಟು 1,348 ರನ್ ಗಳಿಸಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಆರೋಪ ಒಪ್ಪಿಕೊಂಡ ಪಾಕಿಸ್ತಾನಿ ಸ್ಪಿನ್ನರ್ ಮ್ಯಾಚ್ ಫಿಕ್ಸಿಂಗ್ ಆರೋಪ ಒಪ್ಪಿಕೊಂಡ ಪಾಕಿಸ್ತಾನಿ ಸ್ಪಿನ್ನರ್

ತೆಂಡುಲ್ಕರ್, ಕೊಹ್ಲಿ, ದ್ರಾವಿಡ್ ಹಾಗೂ ಗಂಗುಲಿ ವಿಂಡೀಸ್ ವಿರುದ್ಧ 1,000ಕ್ಕೂ ಅಧಿಕ ರನ್ ಗಳಿಸಿದ ಬ್ಯಾಟ್ಸ್ ಮನ್ ಗಳಾಗಿದ್ದಾರೆ.

Story first published: Friday, October 19, 2018, 11:25 [IST]
Other articles published on Oct 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X