ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೂತಲ್ಲೇ ಕೋಹ್ಲಿ ಖಾತೆಗೆ ಕೋಟಿ ಕೋಟಿ: ಲಾಕ್‌ಡೌನ್‌ನಲ್ಲಿ ಅತಿ ಹೆಚ್ಚು ಆದಾಯ

Virat Kohli Only Cricketer In Top-10 Highest-Earning Athletes On Instagram During Lockdown

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಆದಾಯವನ್ನು ಗಳಸಿದ್ದಾರೆ. ಅದರಲ್ಲೂ ಲಾಕ್‌ಡೌನ್ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕೋಟಿ ಕೋಟಿ ಜೇಬಿಗಿಳಿಸಿದ್ದಾರೆ. ಈ ಅವಧಿಯಲ್ಲಿ ಇನ್ಸ್ಟಾಗ್ರಾಮ್‌ನಿಂದ ಅತಿ ಹೆಚ್ಚು ಆದಾಯಗಳಿಸಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ ಟಾಪ್‌ 6ರಲ್ಲಿ ಸ್ಥಾನಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿರುವ 5 ಅತೀ ಕೆಟ್ಟ ಬೌಲಿಂಗ್ ದಾಖಲೆಗಳು!ಟಿ20 ವಿಶ್ವಕಪ್ ಇತಿಹಾಸದಲ್ಲಿರುವ 5 ಅತೀ ಕೆಟ್ಟ ಬೌಲಿಂಗ್ ದಾಖಲೆಗಳು!

ಮಾರ್ಚ್ 12ರಿಂದ ಮೇ14ರ ವರೆಗೆ ವಿರಾಟ್ ಕೊಹ್ಲಿ ಮೂರು ಪ್ರಾಯೋಜಿತ ವಿಡಿಯೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರತಿ ಪೋಸ್ಟ್‌ಗೆ ವಿರಾಟ್ ಸರಿ ಸುಮಾರು 1.21 ಕೋಟಿಯಂತೆ ಆದಾಯಗಳಿಸಿದ್ದಾರೆ. ಒಟ್ಟಾರೆಯಾಗಿ 3.65 ಕೋಟಿ ರೂಪಾಯಿಯನ್ನು ಮನೆಯಲ್ಲಿ ಕುಳಿತೇ ಜೇಬಿಗಿಳಿಸಿದ್ದಾರೆ ವಿರಾಟ್ ಕೊಹ್ಲಿ.

ಫುಟ್ಬಾಲಿಗರದ್ದೇ ಪಾರಮ್ಯ

ಫುಟ್ಬಾಲಿಗರದ್ದೇ ಪಾರಮ್ಯ

ಲಾಕ್‌ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಆದಾಯಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಫುಟ್ಬಾಲ್ ಸ್ಟಾರ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೊ ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಲಿಯೋನೆಲ್ ಮೆಸ್ಸಿ ಮತ್ತು ಮೂರನೇ ಸ್ಥಾನದಲ್ಲಿ ನೇಮಾರ್ ಇದ್ದಾರೆ.

ಈ ಪಟ್ಟಿಯಲ್ಲಿರುವ ಏಕೈಕ ಕ್ರಿಕೆಟಿಗ ಕೊಹ್ಲಿ

ಈ ಪಟ್ಟಿಯಲ್ಲಿರುವ ಏಕೈಕ ಕ್ರಿಕೆಟಿಗ ಕೊಹ್ಲಿ

ಅಟ್ಟೈನ್ ಸಂಸ್ಥೆ ಈ ವರದಿಯನ್ನು ನೀಡಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಕ್ರೀಡಾಪಟುಗಳು ಮಾಡಿದ ಪೋಸ್ಟ್ ಮತ್ತು ಅದರಿಂದ ಗಳಿಸಿದ ಆದಾಯವನ್ನು ಗಮನದಲ್ಲಿಟ್ಟುಕೊಂಡು ಈ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಒಟ್ಟಾರೆಯಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಆದಾಯಗಳಿಸುವ ವಿಚಾರದಲ್ಲೂ ಟಾಪ್ ಹತ್ತರಲ್ಲಿರುವ ಏಕೈಕ ಕ್ರಿಕೆಟಿಗನಾಗಿದ್ದಾರೆ ವಿರಾಟ್ ಕೊಹ್ಲಿ.

ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿ ಆಕ್ಟಿವ್

ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿ ಆಕ್ಟಿವ್

ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ 62.2 ಮಿಲಿಯನ್ ಫಾಲೋವರ್ಸ್‌ಅನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಚಟುವಟಿಕೆಯಿಂದಿರುವ ಕೊಹ್ಲಿ ವಿಶ್ವಾದ್ಯಂತ ಇರುವ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡಿದ್ದಾರೆ.

Story first published: Saturday, June 6, 2020, 18:17 [IST]
Other articles published on Jun 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X