ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್‌ ಕೊಹ್ಲಿ or ಸ್ಟೀವ್ ಸ್ಮಿತ್, ಯಾರು ಬೆಸ್ಟ್?: ಚತುರ ಉತ್ತರ ಕೊಟ್ಟ ವಾರ್ನರ್

Virat Kohli or Steve Smith?: David Warner gives an clever answer

ಸಿಡ್ನಿ: ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಅವರನ್ನು ಪರಸ್ಪರ ಹೋಲಿಸಿ ಮಾತನಾಡಲಾಗದು. ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್ಸನ್, ಇಂಗ್ಲೆಂಡ್ ನಾಯಕ ಜೋ ರೂಟ್, ಪಾಕಿಸ್ತಾನ ನಾಯಕ ಬಾಬರ್ ಅಝಾಮ್ ಇವರೆಲ್ಲ ಉತ್ತಮ ಬ್ಯಾಟ್ಸ್‌ಮನ್‌ಗಳಾದರೂ ಸ್ಮಿತ್-ಕೊಹ್ಲಿ ಕೊಂಚ ಎತ್ತರಕ್ಕೆ ನಿಲ್ಲುವ ಭಿನ್ನ ಬ್ಯಾಟ್ಸ್‌ಮನ್‌ಗಳು. ಕೊಹ್ಲಿ-ಸ್ಮಿತ್ ಇವರಲ್ಲಿ ಯಾರು ಶ್ರೇಷ್ಠ ಎಂಬ ಪ್ರಶ್ನೆ ಕೇಳಿದರೆ ಸುಲಭವಾಗಿ ಉತ್ತರಿಸಲಾಗದು. ಆದರೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಚತುರ ಉತ್ತರ ಕೊಟ್ಟಿದ್ದಾರೆ.

WWEಗೆ ನಿವೃತ್ತಿ ಘೋಷಿಸಿದ ರಸ್ಲಿಂಗ್ ಸೂಪರ್ ಸ್ಟಾರ್ ಅಂಡರ್‌ಟೇಕರ್!WWEಗೆ ನಿವೃತ್ತಿ ಘೋಷಿಸಿದ ರಸ್ಲಿಂಗ್ ಸೂಪರ್ ಸ್ಟಾರ್ ಅಂಡರ್‌ಟೇಕರ್!

ಕೊಹ್ಲಿ ಮತ್ತು ಸ್ಮಿತ್ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಾರ್ನರ್, ಈ ಪ್ರಶ್ನೆ ಕೊಹ್ಲಿ-ಸ್ಮಿತ್‌ಗೆ ಸಂಬಂಧಿಸಿದ್ದು ಅನ್ನೋದಕ್ಕಿಂತ ಇದು ಭಾರತ-ಆಸ್ಟ್ರೇಲಿಯಾಕ್ಕೆ ಸಂಬಂಧಿಸಿದ್ದು ಎಂದು ಪ್ರತಿಕ್ರಿಯಿಸಿದ್ದಾರೆ.

ಪಾಕ್ ಕ್ರಿಕೆಟ್‌ ತಂಡಕ್ಕೆ ಗಾಯದ ಮೇಲೆ ಬರೆ, ಇನ್ನೂ 7 ಆಟಗಾರರಿಗೆ ಕೊರೊನಾ!ಪಾಕ್ ಕ್ರಿಕೆಟ್‌ ತಂಡಕ್ಕೆ ಗಾಯದ ಮೇಲೆ ಬರೆ, ಇನ್ನೂ 7 ಆಟಗಾರರಿಗೆ ಕೊರೊನಾ!

ಇಂಡಿಯಾ ಟುಡೇ ಜೊತೆ ಮಾತನಾಡಿದ ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಬಗ್ಗೆ ಹಂಚಿಕೊಂಡಿರುವ ಅನಿಸಿಕೆಗಳು ಇಲ್ಲಿವೆ.

ದೊಡ್ಡ ಯುದ್ಧವಾಗಲಿದೆ

ದೊಡ್ಡ ಯುದ್ಧವಾಗಲಿದೆ

ಇಂಡಿಯಾ ಟುಡೇ ಶೋ 'ಇನ್ಸ್‌ಪೈರೇಶನ್'ನಲ್ಲಿ ಮಾತನಾಡಿದ ಡೇವಿಡ್ ವಾರ್ನರ್, ಕೊಹ್ಲಿ ಮತ್ತು ಸ್ಮಿತ್ ಇಬ್ಬರೂ ಎಲ್ಲಾ ಮೂರು ಮಾದರಿಯಲ್ಲೂ ಬೆಸ್ಟ್ ಬ್ಯಾಟ್ಸ್‌ಮನ್‌ಗಳು ಎಂದಿದ್ದಾರೆ. 'ಕೊಹ್ಲಿಯೊಂದಿಗೆ ಸ್ಮಿತ್ ಹೋಲಿಸಿದರೆ, ಇಬ್ಬರೂ ಮೂರೂ ಮಾದರಿಗಳಲ್ಲೂ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು. ಜನರು ನಿರೀಕ್ಷಿಸಿದರೆ ಅವರ ನಡುವೆ ದೊಡ್ಡ ಯುದ್ಧವಾಗಲಿದೆ,' ಎಂದು ವಾರ್ನರ್ ಹೇಳಿದ್ದಾರೆ.

ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ

ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ

ಈ ಬಾರಿ ಅಕ್ಟೋಬರ್‌‌ನಲ್ಲಿ ಕೊಹ್ಲಿ ಪಡೆ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ 3 ಟಿ20ಐ ಪಂದ್ಯಗಳು, 4 ಟೆಸ್ಟ್ ಪಂದ್ಯಗಳು, 3 ಏಕದಿನ ಪಂದ್ಯಗಳನ್ನಾಡಲಿದೆ. ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ ಆಗ ಆಸೀಸ್ ತಂಡದಲ್ಲಿ ಸ್ಮಿತ್, ವಾರ್ನರ್ ಇರಲಿಲ್ಲ.

ವೈಯಕ್ತಿಕ ಕಾದಾಟವಿಲ್ಲ

ವೈಯಕ್ತಿಕ ಕಾದಾಟವಿಲ್ಲ

'ನಮಗೆ ಕಾದಾಟವಿದ್ದರೆ ಅದು ಭಾರತ vs ಆಸ್ಟ್ರೇಲಿಯಾ. ನಾವು ವೈಯಕ್ತಿಕ ಕಾದಾಟಕ್ಕೆ ಎದುರು ನೋಡುವುದಿಲ್ಲ. ಅದನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಕು ಅಂದರೆ ಅದು ಬೌಲರ್ vs ಬ್ಯಾಟ್ಸ್‌ಮನ್ ಕದನವಾಗಿರುತ್ತದೆಯಷ್ಟೇ,' ಎಂದು ವಾರ್ನರ್ ಭಾರತ vs ಆಸ್ಟ್ರೇಲಿಯಾ ಪ್ರವಾಸ ಸರಣಿಯ ಬಗೆಗಿನ ಪ್ರಶ್ನಗೆ ಉತ್ತರಿಸುತ್ತ ವಿವರಿಸಿದರು.

ಟೀಮ್ ಇಂಡಿಯಾಕ್ಕೆ ಸಲಹೆ

ಟೀಮ್ ಇಂಡಿಯಾಕ್ಕೆ ಸಲಹೆ

ಮಾತು ಮುಂದುವರೆಸಿದ ವಾರ್ನರ್, 'ದಿನದ ಕೊನೆಯಲ್ಲಿ, ನಾವು ನಮ್ಮ ಸಂಶೋಧನೆಯನ್ನು ಚೆನ್ನಾಗಿ ಮಾಡಬೇಕು. ಆಸ್ಟ್ರೇಲಿಯಾದಲ್ಲಿ ಬೌಲಿಂಗ್ ಮಾಡಲು ನಮ್ಮ ಲೈನ್ ಮತ್ತು ಲೆಂತ್ ನಮಗೆ ತಿಳಿದಿವೆ. ನಮ್ಮ ಪರಿಸ್ಥಿತಿಗಳನ್ನು ಸರಿಯಾಗಿ ಬಳಸಿಕೊಳ್ಳಿ,' ಎಂದು ಭಾರತ ತಂಡಕ್ಕೆ ಸಲಹೆ ನೀಡಿದ್ದಾರೆ. ಭಾರತ vs ಆಸ್ಟ್ರೇಲಿಯಾ ಸರಣಿಗಳು ಅಕ್ಟೋಬರ್‌ 11ರಿಂದ ಆರಂಭಗೊಳ್ಳಲಿವೆ. ಸರಣಿಯು 3 ಟಿ20, 4 ಟೆಸ್ಟ್, 3 ಏಕದಿನ ಪಂದ್ಯಗಳನ್ನು ಒಳಗೊಂಡಿರಲಿದೆ.

Story first published: Tuesday, June 23, 2020, 21:12 [IST]
Other articles published on Jun 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X