ರೋಹಿತ್ ಶರ್ಮಾ ಹಿಂದಿಕ್ಕಿ ಟಿ20ಐ ವಿಶ್ವದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ!

T20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆದ ಕೊಹ್ಲಿ. | Virat Kohli | Oneindia Kannada

ಮೊಹಾಲಿ, ಸೆಪ್ಟೆಂಬರ್ 19: ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಟಿ20ಐ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವದ ಅಗ್ರ ಸ್ಥಾನಿ ಬ್ಯಾಟ್ಸ್‌ಮನ್ ಆಗಿ ಕಿಂಗ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ.

ಅದ್ಭುತ ಕ್ಯಾಚ್ ಮೂಲಕ ಡಿ ಕಾಕ್ ಪೆವಿಲಿಯನ್‌ಗಟ್ಟಿದ ಕೊಹ್ಲಿ: ವಿಡಿಯೋ

ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರ ಸ್ಟೇಡಿಯಂನಲ್ಲಿ ಬುಧವಾರ (ಸೆಪ್ಟೆಂಬರ್ 18) ನಡೆದ ಭಾರತ vs ದಕ್ಷಿಣ ಆಫ್ರಿಕಾ ನಡುವಣ ದ್ವಿತೀಯ ಟಿ20 ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮೆರೆದರು.

70ರ ಹರೆಯದ ಹಣ್ಣು ಮುದುಕನಿಗೆ ಪಿವಿ ಸಿಂಧು ವರಿಸುವಾಸೆಯಂತೆ!

ಭಾರತದ ಉಪನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ಟಿ20ಐ ಅತ್ಯಧಿಕ ರನ್ ದಾಖಲೆ ಸರಿಗಟ್ಟಿ ಕೊಹ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಸ್ಫೋಟಕ ಅರ್ಧ ಶತಕ

ಸ್ಫೋಟಕ ಅರ್ಧ ಶತಕ

ಮೊಹಾಲಿ ಪಂದ್ಯದಲ್ಲಿ ಕೊಹ್ಲಿ 52 ಎಸೆತಗಳಿಗೆ ಅಜೇಯ 72 ರನ್ ಸಿಡಿಸಿದರು. ಕೊಹ್ಲಿ, ಶಿಖರ್ ಧವನ್ (40 ರನ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಫ್ರಿಕಾ 20 ಓವರ್‌ಗೆ 5 ವಿಕೆಟ್ ಕಳೆದು 149 ರನ್ ಮಾಡಿದ್ದರೆ, ಭಾರತ 19 ಓವರ್‌ಗೆ 3 ವಿಕೆಟ್ ಕಳೆದು 151 ರನ್ ಗಳಿಸಿತು.

ರೋಹಿತ್ ದಾಖಲೆ ಬದಿಗೆ

ರೋಹಿತ್ ದಾಖಲೆ ಬದಿಗೆ

ಟಿ20ಐನಲ್ಲಿ ಅತ್ಯಧಿಕ ರನ್‌ ಪಟ್ಟಿಯಲ್ಲಿ ಹಿಟ್‌ಮ್ಯಾನ್ ರೋಹಿತ್ ಮೀರಿಸಲು ಕೊಹ್ಲಿಗೆ ಕೇವಲ 54 ರನ್‌ಗಳು ಬೇಕಿದ್ದವು. ಮೊಹಾಲಿಯಲ್ಲಿ ಕೊಹ್ಲಿ 72 ರನ್‌ ಬಾರಿಸಿದ್ದರಿಂದ ಸದ್ಯ ಕೊಹ್ಲಿ 66 ಇನ್ನಿಂಗ್ಸ್‌ಗಳಲ್ಲಿ 2441 ಟಿ20ಐ ರನ್‌ನಿಂದ ಮೊದಲ ಸ್ಥಾನ ಅಲಂಕರಿಸಿದ್ದಾರೆ.

12 ರನ್‌ಗೆ ರೋಹಿತ್ ಔಟ್

12 ರನ್‌ಗೆ ರೋಹಿತ್ ಔಟ್

ಈ ಪಂದ್ಯಕ್ಕೂ ಮುನ್ನ 2422 ರನ್‌ ಗಳಿಸಿದ್ದ ರೋಹಿತ್ ಟಿ20ಐ ಅತ್ಯಧಿಕ ರನ್‌ಗಾಗಿ ಅಗ್ರ ಸ್ಥಾನದಲ್ಲಿದ್ದರು. ಆದರೆ ಮೊಹಾಲಿ ಪಂದ್ಯದಲ್ಲಿ ರೋಹಿತ್ 12 ರನ್‌ ಬಾರಿಸಿ ಔಟಾಗಿದ್ದರಿಂದ ಸದ್ಯ 89 ಟಿ20ಐ ಇನ್ನಿಂಗ್ಸ್‌ಗಳಲ್ಲಿ 2434 ರನ್‌ಗಳೊಂದಿಗೆ ಅತ್ಯಧಿಕ ರನ್‌ ಸಾಲಿನಲ್ಲಿ ಹಿಟ್‌ಮ್ಯಾನ್‌ ದ್ವಿತೀಯ ಸ್ಥಾನದಲ್ಲಿದ್ದಾರೆ.

ಗಪ್ಟಿಲ್‌ಗೆ 3ನೇ ಸ್ಥಾನ

ಗಪ್ಟಿಲ್‌ಗೆ 3ನೇ ಸ್ಥಾನ

ಟಿ20ಐ ಅತ್ಯಧಿಕ ರನ್‌ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (2283 ರನ್) 3ನೇ ಸ್ಥಾನ, ಪಾಕಿಸ್ತಾನದ ಶೋಯೆಬ್ ಮಲ್ಲಿಕ್ (2263) 4ನೇ ಸ್ಥಾನ, ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ (2283) 5ನೇ ಸ್ಥಾನ ಪಡೆದುಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, September 19, 2019, 0:06 [IST]
Other articles published on Sep 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X