ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೂವರು ಅದ್ಭುತ ಯುವ ಪ್ರತಿಭೆಗಳ ಶ್ಲಾಘಿಸಿದ ನಾಯಕ ವಿರಾಟ್ ಕೊಹ್ಲಿ

ಈ ಮೂವರು ಆಟಗಾರರು ದೇಶಕ್ಕೋಸ್ಕರ ಆಡುತ್ತಾರೆ ಅಂದ್ರು ಕೊಹ್ಲಿ..?
Virat Kohli picks out three youngsters for special praise

ನವದೆಹಲಿ, ಜುಲೈ 24: ಆಟದಲ್ಲಿನ ಪ್ರೌಢತೆ, ಆತ್ಮವಿಶ್ವಾಸಕ್ಕಾಗಿ ಯುವ ಬ್ಯಾಟ್ಸ್ಮನ್‌ಗಳಾದ ರಿಷಬ್ ಪಂತ್, ಶ್ರೇಯಸ್ ಐಯ್ಯರ್ ಮತ್ತು ಶುಭ್‌ಮಾನ್ ಗಿಲ್ ಅವರನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊಂಡಾಡಿದ್ದಾರೆ. ಈ ಆಟಗಾರರ ವಯಸ್ಸಿನಲ್ಲಿ ನಾವು ಇವರ ಅರ್ಧಕ್ಕೂ ಇರಲಿಲ್ಲ ಎಂದಿದ್ದಾರೆ.

ಭಾರತ ವಿರುದ್ಧದ ಟಿ20ಗಾಗಿ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್!ಭಾರತ ವಿರುದ್ಧದ ಟಿ20ಗಾಗಿ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್!

ವಿಶ್ವ ಮಟ್ಟದ ಆಟದಲ್ಲಿ ಮಿನುಗಲು ಯುವ ಕ್ರಿಕೆಟಿಗರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಮೆಟ್ಟಿಲು ಎಂದೂ ಕೊಹ್ಲಿ ಹೇಳಿಕೊಂಡಿದ್ದಾರೆ. ಉತ್ತಮ ಯುವ ಆಟಗಾರರನ್ನು ಪ್ರೋತ್ಸಾಹಿಸಿದರೆ, ಅದು ಅವರ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ನೆರವಾಗಲಿದೆ ಎಂದು ಕೊಹ್ಲಿ ತಿಳಿಸಿದ್ದಾರೆ.

ವೆಸ್ಟ್ ಇಂಡೀಸ್ ಸರಣಿಗೆ ಈ ಆಟಗಾರ ಇಲ್ಲದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಗಂಗೂಲಿವೆಸ್ಟ್ ಇಂಡೀಸ್ ಸರಣಿಗೆ ಈ ಆಟಗಾರ ಇಲ್ಲದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಗಂಗೂಲಿ

ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಭಾರತ ತಂಡವನ್ನು ಕೊಹ್ಲಿಯೇ ಮುನ್ನಡೆಸುತ್ತಿದ್ದಾರೆ. ಇಲ್ಲಿ ಶುಭ್‌ಮಾನ್‌ ಗಿಲ್‌ಗೆ ಸ್ಥಾನ ಲಭಿಸಿಲ್ಲ. ಈ ಬಗ್ಗೆ ಕೆಲ ಕ್ರಿಕೆಟ್ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದರು.

ಅದ್ಭುತ ಆಟಗಾರರಿವರು

ಅದ್ಭುತ ಆಟಗಾರರಿವರು

'ಪಂತ್, ಶ್ರೇಯಸ್, ಗಿಲ್ ಈ ಮೂವರೂ ಅದ್ಭುತ ಆಟಗಾರರು. ಅವರಲ್ಲಿರುವ ಆತ್ಮ ವಿಶ್ವಾಸದ ಮಟ್ಟವನ್ನು ನೋಡುವಾಗ ತುಂಬಾ ಖುಷಿಯೆನಿಸುತ್ತೆ.. ಇದನ್ನು ನಾನು ಈ ಹಿಂದೆಯೇ ಸಾಕಷ್ಟು ಬಾರಿ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ, 19-20ರ ಹರೆಯದಲ್ಲಿ ನಾವು ಇವರ ಅರ್ಧದಷ್ಟೂ ಇರಲಿಲ್ಲ,' ಎಂದು ಟೈಮ್ಸ್ ಇಂಡಿಯಾ ಜೊತೆ ಮಾತನಾಡುತ್ತ ಕೊಹ್ಲಿ ಹೇಳಿಕೊಂಡಿದ್ದಾರೆ.

ಕೌಶಲಗಳೂ ಸುಧಾರಿಸುತ್ತಿವೆ

ಕೌಶಲಗಳೂ ಸುಧಾರಿಸುತ್ತಿವೆ

'ಐಪಿಎಲ್‌ನಂತ ಟೂರ್ನಿಯಲ್ಲಿ ಅವಕಾಶ ದೊರೆತಿದ್ದರಿಂದ ಅವರ ಕೌಶಲಗಳೂ ಸುಧಾರಿಸುತ್ತಿವೆ. ಕೌಶಲಗಳ ಸುಧಾರಣೆ ಒಬ್ಬ ಕ್ರಿಕೆಟರ್‌ಗೆ ಬಹಳ ದೊಡ್ಡ ವಿಚಾರ' ಎಂದು ಕೊಹ್ಲಿ ಹೇಳಿದ್ದಾರೆ. ರಿಶಬ್ ಪಂತ್ (ಡೆಲ್ಲಿ ಕ್ಯಾಪಿಟಲ್ಸ್), ಶ್ರೇಯಸ್ (ಡೆಲ್ಲಿ ಕ್ಯಾಪಿಟಲ್ಸ್), ಶುಭ್‌ಮಾನ್ ಗಿಲ್ (ಕೋಲ್ಕತ್ತ ನೈಟ್ ರೈಡರ್ಸ್) ಪರ ಐಪಿಎಲ್‌ನಲ್ಲಿ ಮಿಂಚಿದ್ದರು.

ಆತ್ಮವಿಶ್ವಾಸ ಪ್ಲಸ್ ಪಾಯಿಂಟ್

ಆತ್ಮವಿಶ್ವಾಸ ಪ್ಲಸ್ ಪಾಯಿಂಟ್

'ಮೈದಾನಕ್ಕಿಳಿಯುವಾಗ ಈ ಮೂವರು ಯುವ ಆಟಗಾರರು ಬಹಳ ಆತ್ಮವಿಶ್ವಾಸ ಹೊಂದಿರುತ್ತಾರೆ. ತಪ್ಪುಗಳನ್ನೂ ಬಹಳ ಬೇಗ ತಿದ್ದುಕೊಂಡು ಆಟ ಕಲಿಯುತ್ತಿದ್ದಾರೆ. ಯಾಕೆಂದರೆ ಅವರು ಈಗಾಗಲೇ ಬಹಳಷ್ಟು ಆಟಗಾರರ ಎದುರು ಆಡಿದ್ದಾರೆ,' ಎಂದು ವಿರಾಟ್ ವಿವರಿಸಿದರು.

ದೇಶಕ್ಕಾಗಿ ಆಡುತ್ತಿದ್ದಾರೆ

ದೇಶಕ್ಕಾಗಿ ಆಡುತ್ತಿದ್ದಾರೆ

ಎಲ್ಲದಕ್ಕಿಂತ ಹೆಚ್ಚಾಗಿ ಈ ಅವಕಾಶವನ್ನು ನಾನು ನನ್ನ ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದೇನೆ ಎಂದು ಅಂದುಕೊಂಡು ಇವರು ಆಡುತ್ತಿದ್ದಾರೆ. ನನ್ನ ಪ್ರಕಾರ ಈ ಯುವ ಬ್ಯಾಟ್ಸ್ಮನ್‌ಗಳು ಈಗ ಇಷ್ಟು ಉತ್ತಮ ಫಾರ್ಮ್ ಹೊಂದಿರೋದಕ್ಕೆ ಇದೇ ಕಾರಣ,' ಎಂದು ಕೊಹ್ಲಿ ಅಭಿಪ್ರಾಯಿಸಿದ್ದಾರೆ.

Story first published: Wednesday, July 24, 2019, 13:22 [IST]
Other articles published on Jul 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X