ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಗೆ ಈ ಆಟಗಾರರು ನೂತನ ನಾಯಕ ಮತ್ತು ಉಪನಾಯಕರಾಗಬೇಕೆಂದು ಸೂಚಿಸಿದ ಕೊಹ್ಲಿ

Virat Kohli proposed BCCI selection committee to select KL Rahul as Vice captain

ಸೆಪ್ಟೆಂಬರ್ 16ರ ಗುರುವಾರದಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮಹತ್ವದ ಘೋಷಣೆಯನ್ನು ಮಾಡುವುದರ ಮೂಲಕ ದೊಡ್ಡ ಮಟ್ಟದ ಸಂಚಲನವನ್ನು ಹುಟ್ಟು ಹಾಕಿದ್ದಾರೆ. ಹೌದು, ಮುಂಬರಲಿರುವ ಅಕ್ಟೋಬರ್ - ನವೆಂಬರ್‌ ತಿಂಗಳುಗಳಲ್ಲಿ ನಡೆಯಲಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿಯುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಐಪಿಎಲ್: ಟೂರ್ನಿಗೂ ಮುನ್ನ 10 ಸಿಕ್ಸರ್, ಭರ್ಜರಿ ಶತಕ ಚಚ್ಚಿದ ಎಬಿಡಿ, ಪಂದ್ಯದ ಹೈಲೈಟ್ಸ್ ಇಲ್ಲಿದೆಐಪಿಎಲ್: ಟೂರ್ನಿಗೂ ಮುನ್ನ 10 ಸಿಕ್ಸರ್, ಭರ್ಜರಿ ಶತಕ ಚಚ್ಚಿದ ಎಬಿಡಿ, ಪಂದ್ಯದ ಹೈಲೈಟ್ಸ್ ಇಲ್ಲಿದೆ

ಹೌದು ಸೆಪ್ಟೆಂಬರ್ 16ರ ಗುರುವಾರದಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಧಿಕೃತ ಖಾತೆಗಳ ಮೂಲಕ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಸ್ವತಃ ವಿರಾಟ್ ಕೊಹ್ಲಿಯವರೇ ತಿಳಿಸಿದ್ದಾರೆ. ಐದಾರು ವರ್ಷಗಳಿಂದ ಭಾರತ ಟಿ ಟ್ವೆಂಟಿ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿರುವ ವಿರಾಟ್ ಕೊಹ್ಲಿಗೆ ದಿನೇದಿನೇ ಒತ್ತಡ ಹೆಚ್ಚಾಗುತ್ತಿದ್ದು ಬಿಡುವು ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿಂದ ಈ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇನೆ ಎಂದು ಸ್ವತಃ ವಿರಾಟ್ ಕೊಹ್ಲಿಯವರೇ ತಿಳಿಸಿದ್ದರು. ಹಾಗೂ ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳಿಗೆ ಎಂದಿನಂತೆ ತಾವೇ ನಾಯಕನಾಗಿ ಮುಂದುವರಿಯುವುದಾಗಿ ಕೂಡ ವಿರಾಟ್ ಕೊಹ್ಲಿ ಇದೇ ವೇಳೆ ತಿಳಿಸಿದರು.

ಕೊಹ್ಲಿಯನ್ನು ಆ ಜನ ಬೇಕಂತಲೇ ಟಾರ್ಗೆಟ್ ಮಾಡುತ್ತಿದ್ದಾರೆ; ಕಿಡಿಕಾರಿದ ಮಾಜಿ ಕ್ರಿಕೆಟಿಗಕೊಹ್ಲಿಯನ್ನು ಆ ಜನ ಬೇಕಂತಲೇ ಟಾರ್ಗೆಟ್ ಮಾಡುತ್ತಿದ್ದಾರೆ; ಕಿಡಿಕಾರಿದ ಮಾಜಿ ಕ್ರಿಕೆಟಿಗ

ಹೀಗೆ ವಿರಾಟ್ ಕೊಹ್ಲಿ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ನಂತರ ಭಾರತ ಟ್ವೆಂಟಿ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವ ಸುದ್ದಿ ಅಧಿಕೃತವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಬಳಿಕ ಭಾರತ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಚರ್ಚೆಗಳು ದೊಡ್ಡಮಟ್ಟದಲ್ಲಿ ಆರಂಭವಾಗಿವೆ. ಇನ್ನು ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಕೊಹ್ಲಿ ಸೀಮಿತ ಓವರ್‌ಗಳ ತಂಡಗಳಿಗೆ ಯಾವ ಆಟಗಾರರು ಉಪನಾಯಕರಾಗಬೇಕೆಂಬುದನ್ನು ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ನಾಯಕ ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳಿಗೆ ಈ ಕೆಳಕಂಡ ಆಟಗಾರರು ಉಪನಾಯಕರಾಗಬೇಕೆಂದು ಸೂಚಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದ್ದು, ಕೊಹ್ಲಿ ಸೂಚಿಸಿರುವ ಆ ಆಟಗಾರರ ವಿವರ ಈ ಕೆಳಕಂಡಂತಿದೆ ಓದಿ.

ರೋಹಿತ್ ಶರ್ಮಾರನ್ನು ಉಪನಾಯಕ ಸ್ಥಾನದಿಂದ ತೆಗೆಯುವಂತೆ ವಿರಾಟ್ ಕೊಹ್ಲಿ ಸಲಹೆ

ರೋಹಿತ್ ಶರ್ಮಾರನ್ನು ಉಪನಾಯಕ ಸ್ಥಾನದಿಂದ ತೆಗೆಯುವಂತೆ ವಿರಾಟ್ ಕೊಹ್ಲಿ ಸಲಹೆ

ಬಿಸಿಸಿಐನ ಬಲ್ಲ ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಪ್ರಸ್ತುತ ಟೀಮ್ ಇಂಡಿಯಾದ ಉಪನಾಯಕನಾಗಿರುವ ರೋಹಿತ್ ಶರ್ಮಾರನ್ನು ಉಪ ನಾಯಕನ ಸ್ಥಾನದಿಂದ ತೆಗೆಯಬೇಕೆಂದು ಸಲಹೆಯನ್ನು ನೀಡಿದ್ದಾರಂತೆ. ರೋಹಿತ್ ಶರ್ಮಾಗೆ 34 ವರ್ಷ ವಯಸ್ಸಾಗಿದ್ದು ಹಿರಿಯ ಆಟಗಾರನಾಗಿರುವ ಕಾರಣ ಆತನನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಬೇಕೆಂದು ಕೊಹ್ಲಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಭಾರತಕ್ಕೆ ಈ ಆಟಗಾರರು ಉಪ ನಾಯಕರಾಗಬೇಕು ಎಂದ ಕೊಹ್ಲಿ

ಭಾರತಕ್ಕೆ ಈ ಆಟಗಾರರು ಉಪ ನಾಯಕರಾಗಬೇಕು ಎಂದ ಕೊಹ್ಲಿ


ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಳಿಕ ಟೀಮ್ ಇಂಡಿಯಾ ಟಿ ಟ್ವೆಂಟಿ ನಾಯಕ ಸ್ಥಾನದಿಂದ ವಿರಾಟ್ ಕೊಹ್ಲಿ ಕೆಳಗಿಳಿಯಲಿದ್ದು ಭಾರತ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳಿಗೆ ಇಬ್ಬರು ನೂತನ ಉಪ ನಾಯಕರ ಹೆಸರನ್ನು ವಿರಾಟ್ ಕೊಹ್ಲಿ ಸೂಚಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಹೌದು, ರೋಹಿತ್ ಶರ್ಮಾರನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಿದ ನಂತರ ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಕೆಎಲ್ ರಾಹುಲ್ ಅವರನ್ನು ಉಪನಾಯಕನನ್ನಾಗಿ ಘೋಷಿಸಬೇಕು ಮತ್ತು ಭಾರತ ಟಿ ಟ್ವೆಂಟಿ ತಂಡಕ್ಕೆ ರಿಷಭ್ ಪಂತ್ ಅವರನ್ನು ಉಪನಾಯಕನನ್ನಾಗಿ ಘೋಷಣೆ ಮಾಡಬೇಕೆಂದು ವಿರಾಟ್ ಕೊಹ್ಲಿ ಬಿಸಿಸಿಐಗೆ ಸಲಹೆ ನೀಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

ಹಾಗಾದ್ರೆ ಟೀಮ್ ಇಂಡಿಯಾದ ನಾಯಕ ಯಾರು?

ಹಾಗಾದ್ರೆ ಟೀಮ್ ಇಂಡಿಯಾದ ನಾಯಕ ಯಾರು?

ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಟಿ ಟ್ವೆಂಟಿ ತಂಡದಿಂದ ಕೆಳಗಿಳಿಯುವ ಘೋಷಣೆಯನ್ನು ಮಾಡುತ್ತಿದ್ದಂತೆಯೇ ಕೊಹ್ಲಿ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಹೆಚ್ಚಾಗಿವೆ. ಇನ್ನು ಕೊಹ್ಲಿ ಟೀಮ್ ಇಂಡಿಯಾ ಏಕದಿನ ತಂಡಕ್ಕೆ ಕೆಎಲ್ ರಾಹುಲ್ ಉಪ ನಾಯಕರಾಗಬೇಕು ಮತ್ತು ಟಿ ಟ್ವೆಂಟಿ ತಂಡಕ್ಕೆ ರಿಷಭ್ ಪಂತ್ ಉಪ ನಾಯಕರಾಗಬೇಕು ಎಂಬ ಸಲಹೆಯನ್ನು ನೀಡಿದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ತಿಳಿಸಿದ್ದು ರೋಹಿತ್ ಶರ್ಮಾ ಭಾರತ ಟಿ ಟ್ವೆಂಟಿ ತಂಡದ ನಾಯಕನಾಗಬೇಕು ಎಂಬುದನ್ನು ವಿರಾಟ್ ಕೊಹ್ಲಿ ಪರೋಕ್ಷವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.


ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದ ನಂತರ ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಹಾಗೂ ರಿಷಭ್ ಪಂತ್ ಈ ಮೂವರಲ್ಲಿ ಒಬ್ಬರು ಭಾರತ ಟಿ ಟ್ವೆಂಟಿ ತಂಡದ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಗಳಿವೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ.

Story first published: Friday, September 17, 2021, 13:07 [IST]
Other articles published on Sep 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X