ಐಸಿಸಿ ವಿಶ್ವಕಪ್‌ ಸೆಮಿಫೈನಲ್ ಸೋಲಿಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ

ವಿಶ್ವಕಪ್ ಸೋಲಿನ ಬಗ್ಗೆ ಭಾರತೀಯರಿಗೆ ಕೊಹ್ಲಿ ಹೇಳಿದ್ದೇನು ಗೊತ್ತಾ..?

ನವದೆಹಲಿ, ಜುಲೈ 24: ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್‌ ಸೆಮಿಫೈನಲ್ ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತಾಗ ಇಡೀ ದೇಶದ ಕ್ರಿಕೆಟ್ ಅಮಾನಿಗಳು ನಿರಾಶೆ ಅನುಭವಿಸಿದ್ದರು. ಅಂದಿನ ಸೋಲಿನ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮತ್ತೆ ತುಟಿ ಬಿಚ್ಚಿದ್ದಾರೆ.

ಇನ್‌ಸ್ಟಾಗ್ರಾಮ್‌ನಿಂದ ಕಿಂಗ್‌ ಕೊಹ್ಲಿಗೆ ಕೋಟಿ ಕೋಟಿ ವರಮಾನ!ಇನ್‌ಸ್ಟಾಗ್ರಾಮ್‌ನಿಂದ ಕಿಂಗ್‌ ಕೊಹ್ಲಿಗೆ ಕೋಟಿ ಕೋಟಿ ವರಮಾನ!

ನ್ಯೂಜಿಲೆಂಡ್-ಭಾರತ ನಡುವಿನ ಆ ಸೆಮಿಫೈನಲ್ ಪಂದ್ಯ ಮಳೆಯ ಕಾರಣಕ್ಕೆ ಎರಡು ದಿನಗಳ ಕಾಲ ಮುಂದುವರೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 239 ರನ್ ಪೇರಿಸಿತ್ತು. ಚೇಸಿಂಗ್ ಇಳಿದ ಭಾರತ, ಟಾಪ್ ಆರ್ಡರ್ ಬ್ಯಾಟ್ಸ್ಮನ್‌ಗಳಾದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ವೈಫಲ್ಯದಿಂದಾಗಿ 221 ರನ್ ಗಳಿಸಿ 18 ರನ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿತ್ತು.

ಮೂವರು ಅದ್ಭುತ ಯುವ ಪ್ರತಿಭೆಗಳ ಶ್ಲಾಘಿಸಿದ ನಾಯಕ ವಿರಾಟ್ ಕೊಹ್ಲಿಮೂವರು ಅದ್ಭುತ ಯುವ ಪ್ರತಿಭೆಗಳ ಶ್ಲಾಘಿಸಿದ ನಾಯಕ ವಿರಾಟ್ ಕೊಹ್ಲಿ

ಸೆಮಿಫೈನಲ್ ಸೋಲಿನ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಕೊಹ್ಲಿ, 'ಬದುಕಿನಲ್ಲಿ ಹೆಚ್ಚಿನದ್ದನ್ನು ನಾನು ಸೋಲು ಮತ್ತು ಹಿನ್ನೆಡೆಗಳಿಂದಲೇ ಕಲಿಯುತ್ತಿದ್ದೇನೆ. ಅತೀ ಕೆಟ್ಟ ಸೋಲೊಂದು ನನಗೆ ಸ್ಫೂರ್ತಿಯ ಪಾಠ ಹೇಳೋದಷ್ಟೇ ಅಲ್ಲ, ಜೊತೆಗೆ ನನ್ನನ್ನು ಒಳ್ಳೆಯ ವ್ಯಕ್ತಿಯನ್ನಾಗಿಸುವಲ್ಲಿ ಕೊಡುಗೆ ನೀಡುತ್ತಿದೆ,' ಎಂದಿದ್ದಾರೆ.

ವೆಸ್ಟ್ ಇಂಡೀಸ್ ಸರಣಿಗೆ ಈ ಆಟಗಾರ ಇಲ್ಲದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಗಂಗೂಲಿವೆಸ್ಟ್ ಇಂಡೀಸ್ ಸರಣಿಗೆ ಈ ಆಟಗಾರ ಇಲ್ಲದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಗಂಗೂಲಿ

'ಗೆಲುವಿಗಿಂತಲೂ ಹೆಚ್ಚಾಗಿ, ದೊಡ್ಡ ಸೋಲು ನನಗೆ ಆಕ್ಷಣದ ಮಹತ್ವವನ್ನು ಅರ್ಥೈಸಿಕೊಳ್ಳಲು ನೆರವಾಗುತ್ತಿದೆ. ಸೋಲೊಂದು, ನೀವು ಸುಮ್ಮನೆ ಕೂತ ಮುಂದೇನು ಮಾಡಬೇಕು ಅನ್ನೋದನ್ನು ಯೋಚಿಸುವಂತೆ ಮಾಡುತ್ತದೆ. ನಿಮ್ಮಷ್ಟಕೇ ನೀವೊಂದು ಮಾರ್ಗಸೂಚಿ ತಯಾರಿಸಲು ಪ್ರೇರೇಪಿಸುತ್ತದೆ,' ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಹುದ್ದೆಯ ರೇಸ್‌ನಲ್ಲಿ ಲಂಕಾದ ದಿಗ್ಗಜಟೀಮ್‌ ಇಂಡಿಯಾ ಮುಖ್ಯ ಕೋಚ್‌ ಹುದ್ದೆಯ ರೇಸ್‌ನಲ್ಲಿ ಲಂಕಾದ ದಿಗ್ಗಜ

'ಎರಡನೆಯದಾಗಿ ಹೇಳೋದ್ರಾದ್ರೆ, ಸೋಲಿನಂತ ಕ್ಷಣಗಳಿವೆಯಲ್ಲ? ಅವು ಕಷ್ಟದ ಕಾಲದಲ್ಲಿ ನಿಮ್ಮ ಜೊತೆ ಯಾರು ನಿಲ್ಲುತ್ತಾರೆ, ನಿಮ್ಮಿಂದ ಯಾರು ದೂರವಾಗ್ತಾರೆ ಅನ್ನೋದನ್ನು ತಿಳಿಸಿಕೊಡುತ್ತದೆ,' ಎಂದು ಸಂದರ್ಶನದಲ್ಲಿ ಕೊಹ್ಲಿ ಮೌಲ್ಯಯುತ ಮಾತುಗಳನ್ನಾಡಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, July 24, 2019, 15:56 [IST]
Other articles published on Jul 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X