ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಹಾನೆ, ಪೂಜಾರಗೆ ಪದೇಪದೇ ಅವಕಾಶ: ನನ್ನನ್ನು ಬಿಡಿ, ಅವರನ್ನು ಹೋಗಿ ಕೇಳಿ ಎಂದು ಗರಂ ಆದ ಕೊಹ್ಲಿ!

Virat Kohli reacted to Ajinkya Rahane and Pujaras place in Indian test team
Rahane ಮತ್ತು Pujara ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಫುಲ್ ಗರಂ ಆಗಿ Virat Kohli ಹೇಳಿದ್ದೇನು? |Oneindia Kannada

ಭಾರಿ ನಿರೀಕ್ಷೆ ಮತ್ತು ಕುತೂಹಲವನ್ನು ಹುಟ್ಟುಹಾಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ಜನವರಿ 14ರಂದು ಮುಕ್ತಾಯಗೊಂಡಿದೆ. ಮೊದಲಿಗೆ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಾಗ ಈ ಬಾರಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಟೆಸ್ಟ್ ಸರಣಿಯಲ್ಲಿ ಮಣಿಸಿ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಸಾಧನೆಯನ್ನು ಮಾಡಲಿದೆ ಎಂದೇ ಎಲ್ಲರೂ ಊಹಿಸಿದ್ದರು.

 ಐಪಿಎಲ್ 2022: ಶುರುವಿಗೂ ಮುನ್ನ ವಿಘ್ನ; ಭಾರತ, ಯುಎಇಯಲ್ಲೂ ಟೂರ್ನಿ ಅನುಮಾನ, ಮತ್ತೆಲ್ಲಿ? ಐಪಿಎಲ್ 2022: ಶುರುವಿಗೂ ಮುನ್ನ ವಿಘ್ನ; ಭಾರತ, ಯುಎಇಯಲ್ಲೂ ಟೂರ್ನಿ ಅನುಮಾನ, ಮತ್ತೆಲ್ಲಿ?

ಹೌದು, ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಈ ಸರಣಿಯಲ್ಲಿ ಗೆಲ್ಲಬಹುದಾದ ತಂಡ ಯಾವುದೆಂದರೆ ಹೆಚ್ಚಾಗಿ ಕೇಳುಬರುತ್ತಿದ್ದ ಉತ್ತರ ಟೀಂ ಇಂಡಿಯಾ ಎಂದು. ಹೀಗೆ ಸರಣಿಗೂ ಮುನ್ನ ಹುಟ್ಟಿಸಿದ್ದ ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಆದರೆ ನಂತರದ ಉಳಿದೆರಡು ಪಂದ್ಯಗಳಲ್ಲಿ ನಡೆದಿದ್ದೇ ಬೇರೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಸೋತಿದ್ದ ದಕ್ಷಿಣ ಆಫ್ರಿಕಾ ದ್ವಿತೀಯ ಹಾಗೂ ತೃತೀಯ ಟೆಸ್ಟ್ ಪಂದ್ಯಗಳಲ್ಲಿ ವಿಶ್ವದ ನಂಬರ್ ಒನ್ ಟೆಸ್ಟ್ ತಂಡವನ್ನು ಮಣಿಸಿ ಸರಣಿಯನ್ನು 2 -1 ಅಂತರದಲ್ಲಿ ಕೈವಶ ಮಾಡಿಕೊಂಡು ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಟೀಮ್ ಇಂಡಿಯಾದ ಕನಸಿಗೆ ತಣ್ಣೀರನ್ನು ಎರಚಿತು.

ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಭಾರತ: ಟೀಮ್ ಇಂಡಿಯಾ ಕಾಲೆಳೆದು ಕೆಂಗಣ್ಣಿಗೆ ಗುರಿಯಾದ ಎಬಿಡಿ!ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಭಾರತ: ಟೀಮ್ ಇಂಡಿಯಾ ಕಾಲೆಳೆದು ಕೆಂಗಣ್ಣಿಗೆ ಗುರಿಯಾದ ಎಬಿಡಿ!

ಹೀಗೆ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡ ನಂತರ ಭಾರಿ ಟೀಕೆಗಳು ಹಾಗೂ ಪ್ರಶ್ನೆಗಳು ಎದುರಾಗಿವೆ. ಅದರಲ್ಲಿಯೂ ಕಳಪೆ ಫಾರ್ಮ್ ಹೊಂದಿದ್ದರೂ ಕೂಡ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರಾಗೆ ಪದೇಪದೇ ಅವಕಾಶ ನೀಡುತ್ತಿರುವುದರ ಕುರಿತು ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರಶ್ನೆಗಳು ಎದುರಾಗುತ್ತಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದ ನಂತರ ವಿರಾಟ್ ಕೊಹ್ಲಿ ಪಾಲ್ಗೊಂಡ ಮಾಧ್ಯಮಗೋಷ್ಠಿಯಲ್ಲಿಯೂ ಕೂಡ ಈ ವಿಷಯದ ಕುರಿತಾದ ಪ್ರಶ್ನೆಗಳು ಎದುರಾದವು. ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಕುರಿತಾಗಿ ಎದುರಾದ ಪ್ರಶ್ನೆಗಳಿಗೆ ವಿರಾಟ್ ಕೊಹ್ಲಿ ಈ ಕೆಳಕಂಡಂತೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ರಹಾನೆ ಮತ್ತು ಚೇತೇಶ್ವರ್ ಪೂಜಾರ ಸ್ಥಾನದ ಕುರಿತು ಮಾತನಾಡುವುದು ನನ್ನ ಕೆಲಸವಲ್ಲ ಎಂದ ಕೊಹ್ಲಿ

ರಹಾನೆ ಮತ್ತು ಚೇತೇಶ್ವರ್ ಪೂಜಾರ ಸ್ಥಾನದ ಕುರಿತು ಮಾತನಾಡುವುದು ನನ್ನ ಕೆಲಸವಲ್ಲ ಎಂದ ಕೊಹ್ಲಿ

ಸಾಲು ಸಾಲು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರಾಗೆ ತಂಡದಲ್ಲಿ ಅವಕಾಶಗಳು ಸಿಗುತ್ತಿರುವುದರ ಕುರಿತು ಪ್ರಶ್ನೆ ಎದುರಾದಾಗ ಖಾರವಾಗಿ ಉತ್ತರಿಸಿದ ಕೊಹ್ಲಿ "ಆಟಗಾರರ ಕಳಪೆ ಫಾರ್ಮ್ ಕುರಿತು ಮತ್ತು ಅವರಿಗೆ ತಂಡದಲ್ಲಿ ಸ್ಥಾನ ನೀಡುವುದರ ಕುರಿತು ಉತ್ತರಿಸಲು ನಾನು ಇಲ್ಲಿ ಬಂದು ಕುಳಿತಿಲ್ಲ. ನೀವು ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಅವರನ್ನು ಆಯ್ಕೆ ಮಾಡಿದ ಆಯ್ಕೆಗಾರರ ಬಳಿ ಹೋಗಿ ಪ್ರಶ್ನೆಗಳನ್ನು ಕೇಳಿ. ಆಯ್ಕೆಗಾರರ ತಲೆಯಲ್ಲಿ ಏನಿದೆಯೋ ಗೊತ್ತಿಲ್ಲ, ಇದು ನನ್ನ ಪಾಲಿನ ಕೆಲಸವಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಬ್ಯಾಟಿಂಗ್ ವೈಫಲ್ಯವಾಗಿದ್ದನ್ನು ಸ್ವಾಗತಿಸಿದ ಕೊಹ್ಲಿ

ದಕ್ಷಿಣ ಆಫ್ರಿಕಾ ನೆಲದಲ್ಲಿ ಬ್ಯಾಟಿಂಗ್ ವೈಫಲ್ಯವಾಗಿದ್ದನ್ನು ಸ್ವಾಗತಿಸಿದ ಕೊಹ್ಲಿ

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ನೀರಸ ಪ್ರದರ್ಶನವನ್ನು ನೀಡಿದ್ದರ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದ ವೈಫಲ್ಯತೆಯನ್ನು ಒಪ್ಪಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾದ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಯಶಸ್ವಿಯಾಗಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಸರಣಿಯಲ್ಲಿ ರಹಾನೆ ಮತ್ತು ಪೂಜಾರ ಅಂಕಿ ಅಂಶ

ಸರಣಿಯಲ್ಲಿ ರಹಾನೆ ಮತ್ತು ಪೂಜಾರ ಅಂಕಿ ಅಂಶ

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯ 6 ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ 136 ರನ್ ಗಳಿಸಿದರೆ, ಪೂಜಾರ ಕೇವಲ 124 ರನ್ ಕಲೆ ಹಾಕಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಬ್ಬರೂ ಸಹ ಅರ್ಧಶತಕವನ್ನು ಸಿಡಿಸಿದ್ದು ಬಿಟ್ಟರೆ ಉಳಿದ ಯಾವುದೇ ಪಂದ್ಯಗಳಲ್ಲಿಯೂ ಕೂಡ ಭಾರತ ಕ್ರಿಕೆಟ್ ತಂಡದ ಪ್ರೇಕ್ಷಕರು ಮೆಚ್ಚಿಕೊಳ್ಳುವಂತಹ ಆಟವನ್ನು ಆಡಲೇ ಇಲ್ಲ. ಹೀಗೆ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರರಾಗಿ ರಹಾನೆ ಮತ್ತು ಪೂಜಾರ ಪದೇಪದೆ ವಿಫಲವಾಗುತ್ತಿರುವುದು ಟೀಮ್ ಇಂಡಿಯಾದ ಸೋಲಿಗೆ ದೊಡ್ಡಮಟ್ಟದ ಕಾರಣವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿರುವ ಪ್ರೇಕ್ಷಕರು ಇಬ್ಬರನ್ನೂ ಕೂಡ ಟೆಸ್ಟ್ ತಂಡದಿಂದ ಕೈಬಿಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆಯನ್ನು ಇಟ್ಟಿದ್ದಾರೆ.

Story first published: Saturday, January 15, 2022, 15:45 [IST]
Other articles published on Jan 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X