ವಿಚಿತ್ರ ಸಮಸ್ಯೆ ಹಿಡ್ಕೊಂಡು ಸಚಿನ್ ಬಳಿಗೆ ಬಂದಿದ್ದರಂತೆ ವಿರಾಟ್ ಕೊಹ್ಲಿ!

ಮುಂಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಂದು ವಿಚಿತ್ರ ಸಮಸ್ಯೆ ಹಿಡ್ಕೊಂಡು ಪರಿಹಾರ ಹೇಳುವಂತೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಬಳಿಗೆ ಬಂದಿದ್ದರಂತೆ. ಕೊಹ್ಲಿಯನ್ನು ಈ ಸಮಸ್ಯೆ ಕಾಡಹತ್ತಿದ್ದು 2014ರ ಇಂಗ್ಲೆಂಡ್ ಪ್ರವಾಸದ ವೇಳೆ. ಆವತ್ತು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಅತೀ ಕೆಟ್ಟ ಪ್ರದರ್ಶನ ನೀಡಿದ್ದರು. ಒಟ್ಟು 10 ಇನ್ನಿಂಗ್ಸ್‌ಗಳಲ್ಲಿ ಆಡಿದ್ದ ಕೊಹ್ಲಿ ಕೇವಲ 13.40ರ ಸರಾಸರಿಯಲ್ಲಿ 134 ರನ್ ಬಾರಿಸಿ ಮುಖಭಂಗ ಅನುಭವಿಸಿದ್ದರು.

ದಕ್ಷಿಣ ಆಫ್ರಿಕಾ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಐಪಿಎಲ್ ಅಡ್ಡಿ?!

ಅಂದಿನ ಟೆಸ್ಟ್ ಸರಣಿ ತನ್ನ ವೃತ್ತಿ ಜೀವನದಲ್ಲೇ ಅತೀ ಕೆಟ್ಟ ಸರಣಿಯಾಗಿತ್ತು ಎಂದಿರುವ ವಿರಾಟ್ ಕೊಹ್ಲಿ, ಆ ಸರಣಿಯಲ್ಲಿ ತಾನೊಂದು ಸಮಸ್ಯೆಯಲ್ಲಿದ್ದೆ. ಹೀಗಾಗಿಯೇ ಆವತ್ತಿನ ಇಂಗ್ಲೆಂಡ್ ಪ್ರವಾಸ ಸರಣಿಯಲ್ಲಿ ತನಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.

ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!

ತನ್ನ ಹಿನ್ನಡೆಗೆ ಕಾರಣವಾಗಿದ್ದ ಆ ಸಮಸ್ಯೆಯನ್ನು ಹಿಡಿದು ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಬಳಿಗೆ ಬಂದಿದ್ದರಂತೆ. ಸಚಿನ್ ಇದಕ್ಕೆ ಪರಿಹಾರ ಹೇಳಿದ್ದರಂತೆ.

ಕೊಹ್ಲಿಯಿಂದ ಅತೀ ಕೆಟ್ಟ ಪ್ರದರ್ಶನ

ಕೊಹ್ಲಿಯಿಂದ ಅತೀ ಕೆಟ್ಟ ಪ್ರದರ್ಶನ

2014ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಭಾರತ ಅಲ್ಲಿ 5 ಪಂದ್ಯಗಳ ಟೆಸ್ಟ್, 5 ಪಂದ್ಯಗಳ ಏಕದಿನ ಸರಣಿ ಮತ್ತು 1 ಟಿ20 ಪಂದ್ಯ ಆಡಿತ್ತು. ಇದರಲ್ಲಿ ಟೆಸ್ಟ್ ಸರಣಿಯಲ್ಲಿ ಕೊಹ್ಲಿ 1, 8, 25, 0, 38, 28, 0, 7, 6 ಮತ್ತು 20 ರನ್ ಗಳಿಸಿ ತೀವ್ರ ಮುಖಭಂಗ ಅನುಭವಿಸಿದ್ದರು. ಟೆಸ್ಟ್ ಸರಣಿಯಲ್ಲಿ ಭಾರತ 3-1 ಸೋಲನುಭವಿಸಿತು.

ವಿರಾಟ್ ಕೊಹ್ಲಿಯ ಸಮಸ್ಯೆ

ವಿರಾಟ್ ಕೊಹ್ಲಿಯ ಸಮಸ್ಯೆ

ತನ್ನ ಸಹ ಆಟಗಾರ ಮಯಾಂಕ್ ಅಗರ್ವಾಲ್ ಜೊತೆ ಬಿಸಿಸಿಐ ಟಿವಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, 'ಆವತ್ತು ಇಂಗ್ಲೆಂಡ್ ಪ್ರವಾಸದಲ್ಲಿ ನನ್ನ ಸೊಂಟದ ಕೆಳ ಹಿಂಭಾಗದಲ್ಲಿ (ಹಿಪ್) ಸಮಸ್ಯೆಯಿತ್ತು. ನನ್ನ ಸೊಂಟದ ಭಾಗ ಬ್ಯಾಟಿಂಗ್‌ಗೆ ಹೊಂದಾಣಿಕೆ ಆಗುತ್ತಿರಲಿಲ್ಲ. ಅದನ್ನು ಸುಲಭವಾಗಿ ಬದಲಾಯಿಸಲೂ ಆಗುತ್ತಿರಲಿಲ್ಲ. ಅದು ನನಗೆ ದೊಡ್ಡ ಸಂಕಟದ ಮನವರಿಗೆ. ಆದರೆ ಸಮಸ್ಯೆ ಇದೆಯೆಂದು ನನಗೆ ಕಡೆಗೂ ಮನವರಿಕೆಯಾಗಿತ್ತು,' ಎಂದು ಕೊಹ್ಲಿ ಆವತ್ತಿನ ಕ್ಷಣ ಸ್ಮರಿಸಿಕೊಂಡರು.

ನಾನು ದೊಡ್ಡ ಸಮಸ್ಯೆಯಲ್ಲಿದ್ದೆ

ನಾನು ದೊಡ್ಡ ಸಮಸ್ಯೆಯಲ್ಲಿದ್ದೆ

'ಬ್ಯಾಟಿಂಗ್ ವೇಳೆ ಹಿಪ್ ಪೊಸಿಶನ್ ಸರಿಯಾಗಿರದಿದ್ದರೆ ಎಷ್ಟು ಸಮಸ್ಯೆಯಾಗುತ್ತದೆ ಅನ್ನೋದು ಒಬ್ಬ ಬ್ಯಾಟ್ಸ್‌ಮನ್‌ಗೆ ಗೊತ್ತಾಗುತ್ತದೆ. ಹಿಪ್ ಪೊಸಿಶನ್ ಸರಿಯಿದ್ದರೆ ಮಾತ್ರ ನಿಮಗೆ ಸುಲಭವಾಗಿ ಆಫ್‌ ಸೈಡ್ ಮತ್ತು ಲೆಗ್ ಸೈಡ್‌ನಲ್ಲಿ ಬ್ಯಾಟಿಂಗ್ ಸಮತೋಲನ ನಿಯಂತ್ರಣ ಸಾಧ್ಯವಾಗುತ್ತದೆ. ಇದು ಬಹಳ ಮುಖ್ಯ ಸಂಗತಿ. ಆದರೆ ಅಲ್ಲೇ ನಾನು ಸಮಸ್ಯೆಯಲ್ಲಿದ್ದೇನೆ ಎಂದು ನನಗನ್ನಿಸಿತ್ತು,' ಎಂದು ಕೊಹ್ಲಿ ವಿವರಿಸಿದರು.

ಸಚಿನ್‌ನಿಂದ ಸಮಸ್ಯೆ ಹೋಯಿತು

ಸಚಿನ್‌ನಿಂದ ಸಮಸ್ಯೆ ಹೋಯಿತು

ಮಾತು ಮುಂದುವರೆಸಿದ ಕೊಹ್ಲಿ, 'ಇಂಗ್ಲೆಂಡ್‌ನಿಂದ ವಾಪಸ್ ಬಂದಾಗ ನಾನು ಮುಂಬೈಯಲ್ಲಿ ಈ ಬಗ್ಗೆ ಸಚಿನ್ ಪಾಜಿ ಜೊತೆ ಮಾತನಾಡಿದೆ. ನನ್ನ ಹಿಪ್ ಪೊಸಿಶನ್ ಸರಿ ಮಾಡುವಲ್ಲಿ ನಾನು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದೆ. ಆದರೆ ಸಚಿನ್ ನನಗೆ ಹಿಪ್ ಪೊಸಿಶನ್‌ ಜೊತೆಗೆ ಬಿಗ್ ಸ್ಟ್ರೈಡ್, ವೇಗಿಗಳ ವಿರುದ್ಧ ಫಾರ್ವರ್ಡ್ ಪ್ರೆಸ್ ಬ್ಯಾಟಿಂಗ್ ಕೌಶಲಗಳ ಪ್ರಾಮುಖ್ಯತೆಯ ಬಗ್ಗೆ ಮನವರಿಕೆ ಮಾಡಿದರು. ಬಳಿಕ ನಾನು ಹಿಪ್ ಹೊಂದಾಣಿಕೆ ಮತ್ತು ಸಚಿನ್ ಹೇಳಿದ ಕೌಶಲಗಳನ್ನು ಪ್ರಯತ್ನಿಸತೊಡಗಿದೆ. ನನ್ನ ಸಮಸ್ಯೆ ಪರಿಹಾರ ಕಾಣತೊಡಗಿತು. ನನಗೆ ಹೆಚ್ಚು ಆತ್ಮವಿಶ್ವಾಸ ಮೂಡತೊಡಗಿತು,' ಎಂದರು.

ಕೊಹ್ಲಿ ಮತ್ತೆ ಬ್ಯಾಟಿಂಗ್ ಅಬ್ಬರ

ಕೊಹ್ಲಿ ಮತ್ತೆ ಬ್ಯಾಟಿಂಗ್ ಅಬ್ಬರ

ಹಿಪ್ ಪೊಸಿಶನ್ ಸರಿಪಡಿಸಿಕೊಂಡು ಜೊತೆಗೆ ಸಚಿನ್ ಹೇಳಿದ ಕೌಶಲಗಳನ್ನೂ ಪ್ರಯೋಗಿಸಿದ ಕೊಹ್ಲಿ ಅನಂತರ ಮತ್ತೆ ಬ್ಯಾಟಿಂಗ್ ಅಬ್ಬರ ಮಾಡಲಾರಂಭಿಸಿದ್ದರು. ಇಂಗ್ಲೆಂಡ್ ಪ್ರವಾಸದಲ್ಲಿ ಕಳಪೆ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ, 2014/15ರ ಆಸ್ಟ್ರೇಲಿಯಾ ಪ್ರವಾಸದಲ್ಲಿ 4 ಟೆಸ್ಟ್ ಪಂದ್ಯಗಳಲ್ಲಿ ಭರ್ಜರಿ 692 ರನ್ ಕಲೆ ಹಾಕಿದ್ದರು. ಈ ಸರಣಿಯಲ್ಲಿ ಕೊಹ್ಲಿ ಕ್ರಮವಾಗಿ 115, 141, 19, 1, 169, 54, 147, 46 ರನ್ ಗಳಿಸಿದ್ದರು. ಆದರೆ ಟೀಮ್ ಇಂಡಿಯಾ ಸರಣಿಯಲ್ಲಿ 2-0ಯ ಸೋಲನುಭವಿತ್ತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, July 25, 2020, 11:50 [IST]
Other articles published on Jul 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X